ಎಲ್ಲೆಡೆ ಹೆಚ್ಚುತ್ತಿದೆ ವೈರಲ್ ಜ್ವರ; ಏನಿದರ ಲಕ್ಷಣ? ಮುನ್ನೆಚ್ಚರಿಕಾ ಕ್ರಮಗಳೇನು?

|

Updated on: Sep 21, 2023 | 1:37 PM

ಈಗ ಎಲ್ಲೆಡೆ ವೈರಲ್ ಜ್ವರ ಕಂಡುಬರುತ್ತಿದೆ. ಜ್ವರವು ಸಾಮಾನ್ಯವಾಗಿ ನಿಮ್ಮ ದೇಹವು ಕೆಲವು ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿಗೆ ಒಳಗಾಗಿದೆ ಎಂಬುದರ ಸಂಕೇತವಾಗಿದೆ. ವೈರಲ್ ಜ್ವರದ ಲಕ್ಷಣಗಳು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಎಲ್ಲೆಡೆ ಹೆಚ್ಚುತ್ತಿದೆ ವೈರಲ್ ಜ್ವರ; ಏನಿದರ ಲಕ್ಷಣ? ಮುನ್ನೆಚ್ಚರಿಕಾ ಕ್ರಮಗಳೇನು?
ವೈರಲ್ ಜ್ವರ
Image Credit source: iStock
Follow us on

ಕೆಲವೊಮ್ಮೆ ಮಳೆ, ಇದ್ದಕ್ಕಿದ್ದಂತೆ ಬಿಸಿಲು, ಇನ್ನು ಕೆಲವೊಮ್ಮೆ ಚಳಿ ಹೀಗೆ ಹವಾಮಾನ ಬದಲಾವಣೆಯಿಂದಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈಗ ಎಲ್ಲೆಡೆ ವೈರಲ್ ಜ್ವರ ಕಂಡುಬರುತ್ತಿದೆ. ಜ್ವರವು ಸಾಮಾನ್ಯವಾಗಿ ನಿಮ್ಮ ದೇಹವು ಕೆಲವು ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿಗೆ ಒಳಗಾಗಿದೆ ಎಂಬುದರ ಸಂಕೇತವಾಗಿದೆ. ಈ ವೈರಲ್ ಜ್ವರ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಹೀಗಾಗಿ, ವೈರಲ್ ಜ್ವರ ಬಂದಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.

ಸಾಮಾನ್ಯ ಶೀತದಿಂದ ಜ್ವರದವರೆಗೆ ವಿವಿಧ ವೈರಲ್ ಸೋಂಕುಗಳು ಮನುಷ್ಯರ ಮೇಲೆ ಪರಿಣಾಮ ಬೀರಬಹುದು. ನೀವು ವೈರಲ್ ಜ್ವರವನ್ನು ಹೊಂದಿದ್ದರೆ, ನೀವು ಈ ಕೆಳಗಿನ ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದುತ್ತೀರಿ.

– ಮೈ ತಣ್ಣಗಾಗುವುದು

– ಬೆವರುವುದು

– ನಿರ್ಜಲೀಕರಣ

– ತೀವ್ರ ತಲೆನೋವು

– ಸ್ನಾಯು ನೋವು

– ವೀಕ್​ನೆಸ್

– ಹಸಿವಾಗದಿರುವುದು

– ಉಸಿರಾಟದ ತೊಂದರೆ

– ಎದೆ ನೋವು

– ಕಿಬ್ಬೊಟ್ಟೆಯ ನೋವು

– ಆಗಾಗ ವಾಂತಿ

– ಗುಳ್ಳೆಗಳು

– ಕುತ್ತಿಗೆ ನೋವು

– ಕೆಮ್ಮು, ಉಸಿರುಕಟ್ಟಿಕೊಳ್ಳುವ ಮೂಗು, ಮತ್ತು ನೋಯುತ್ತಿರುವ ಗಂಟಲು

ಇದನ್ನೂ ಓದಿ: Dengue: ಡೆಂಗ್ಯೂ ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಲೇಬಾರದು?

ಈ ರೋಗಲಕ್ಷಣಗಳು ಸಾಮಾನ್ಯವಾಗಿ ಕೆಲವೇ ದಿನಗಳವರೆಗೆ ಇರುತ್ತದೆ. ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳು ಸಾಮಾನ್ಯವಾಗಿ ಒಂದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ. ಹೀಗಾಗಿ, ವೈದ್ಯರನ್ನು ಭೇಟಿ ಮಾಡಿ, ನಂತರ ಔಷಧಿ ತೆಗೆದುಕೊಳ್ಳಬೇಕು.

ಸಾಮಾನ್ಯವಾಗಿ ಜ್ವರ ಮತ್ತು ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್‌ನಂತಹ ಜ್ವರ ಕಡಿಮೆ ಮಾಡುವ ಔಷಧಿಯನ್ನು ವೈದ್ಯರು ನೀಡುತ್ತಾರೆ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಲು ಸೂಚಿಸುತ್ತಾರೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ದ್ರವ ಪದಾರ್ಥ ಸೇವಿಸಲು ಸೂಚಿಸುತ್ತಾರೆ.

ಇದನ್ನೂ ಓದಿ: Dengue Hemorrhagic Fever: ಡೆಂಗ್ಯೂ ಹೆಮರಾಜಿಕ್ ಫೀವರ್ ಎಂದರೇನು? ಇದರ 8 ಅಪಾಯಕಾರಿ ಲಕ್ಷಣಗಳಿವು

ಮುನ್ನೆಚ್ಚರಿಕಾ ಕ್ರಮಗಳು:

– ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ.

– ವೈದ್ಯರ ಪರೀಕ್ಷೆ ಮತ್ತು ಪ್ರಿಸ್ಕ್ರಿಪ್ಷನ್ ಇಲ್ಲದೆ ಪ್ಯಾರಸಿಟಮಾಲ್ ಹೊರತುಪಡಿಸಿ ಇತರ ಔಷಧಿಗಳನ್ನು ತೆಗೆದುಕೊಳ್ಳಬೇಡಿ.

– ನೇರವಾಗಿ ವೈದ್ಯರನ್ನು ಭೇಟಿಯಾಗಲು ಪ್ರಯತ್ನಿಸಿ. ಫೋನ್​ನಲ್ಲಿ ಮಾತ್ರೆ ಕೇಳಿ ತೆಗೆದುಕೊಳ್ಳಬೇಡಿ.

– ಚೆನ್ನಾಗಿ ನೀರು ಸೇವಿಸಿ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸ್ವಲ್ಪ ವಿಶ್ರಾಂತಿ ಪಡೆಯಿರಿ.

– ಹ್ಯಾಂಡ್ ಸ್ಯಾನಿಟೈಜರ್‌ ಅಥವಾ ಸೋಪ್ ಮತ್ತು ನೀರಿನಿಂದ ಆಗಾಗ ಕೈಗಳನ್ನು ತೊಳೆಯಬೇಕು.

– ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ