ವಿಟಮಿನ್ ಡಿ ಔಷಧಿಗಳು ಹೃದಯಾಘಾತಕ್ಕೆ ಕಾರಣವಾಗಬಹುದು

|

Updated on: Dec 17, 2023 | 3:47 PM

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಔಷಧಿ ತೆಗೆದುಕೊಳ್ಳುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ ಜನರು ಈ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಂದಿಷ್ಟು ಸಮಸ್ಯೆಯಿಂದ ಬಳಲುತ್ತಿರುವವರು ವಿಟಮಿನ್ ಡಿ ಔಷಧಿಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಹೃದಯಾಘಾತಕ್ಕೆ ಕಾರಣವಾಗಬಹುದು.

ವಿಟಮಿನ್ ಡಿ ಔಷಧಿಗಳು ಹೃದಯಾಘಾತಕ್ಕೆ ಕಾರಣವಾಗಬಹುದು
Vitamin D
Image Credit source: Pinterest
Follow us on

ಕಳೆದ 5 ವರ್ಷಗಳಲ್ಲಿ ವಿಟಮಿನ್ ಡಿ ಪೂರಕಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಕಾರಣ, ದೇಶದ ಜನಸಂಖ್ಯೆಯ ಹೆಚ್ಚಿನ ಭಾಗವು ಈ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿನ ಜನಸಂಖ್ಯೆಯ 70 ರಿಂದ 80 ಪ್ರತಿಶತದಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮತ್ತೊಂದು ಸಮಸ್ಯೆಯೆಂದರೆ, ಜನರು ವಿಟಮಿನ್ ಡಿ ಕೊರತೆ ನೀಗಿಸಲು ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಂದಿಷ್ಟು ಸಮಸ್ಯೆಯಿಂದ ಬಳಲುತ್ತಿರುವವರು ಈ ಔಷಧಿಗಳನ್ನು ತೆಗೆದುಕೊಳ್ಳಬಾರದು.

ರಕ್ತದ ಒತ್ತಡ ನಿಯಂತ್ರಿಸಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲೂ ಈ ವಿಟಮಿನ್ ಅಗತ್ಯವಾಗಿದೆ. ಇನ್ನೊಂದು ಮುಖ್ಯವಾದ ಕಾರ್ಯವೆಂದರೆ ಹಾಲು ಮತ್ತು ಇತರ ಕ್ಯಾಲ್ಸಿಯಂ ಮೂಲ ಆಹಾರಗಳಿಂದ ನಮ್ಮ ದೇಹಕ್ಕೆ ಆಗಮಿಸುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲೂ ಈ ವಿಟಮಿನ್ ಡಿ ಬೇಕು. ದಿ ಎನಲ್ಸ್ ಆಫ್ ಇಂಟರ್ನ್ಯಾಷನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿ ಪ್ರಕಾರ,ಈ ವಿಟಮಿನ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಮೆಗ್ನೀಸಿಯಮ್ ಏಕೆ ಮುಖ್ಯ?

ಮೂಳೆಗಳ ಆರೋಗ್ಯಕ್ಕೆ ಮೆಗ್ನೀಸಿಯಮ್ ಸಹ ಮುಖ್ಯವಾಗಿದೆ. ಮೂಳೆ ಬೆಳವಣಿಗೆಗೆ ಮೆಗ್ನೀಸಿಯಮ್ ಅತ್ಯಗತ್ಯ. ದೇಹದಲ್ಲಿ ಮೆಗ್ನೀಷಿಯಂ ಪ್ರಮಾಣ ಕಡಿಮೆಯಾದರೆ ಮೂಳೆಗಳು ದುರ್ಬಲವಾಗುತ್ತವೆ. ಇದರಿಂದಾಗಿ ಆಸ್ಟಿಯೊಪೊರೋಸಿಸ್ ಅಪಾಯವಿದೆ. ಆಸ್ಟಿಯೊಪೊರೋಸಿಸ್ ಒಂದು ಅಪಾಯಕಾರಿ ಮೂಳೆ ಕಾಯಿಲೆಯಾಗಿದ್ದು, ಮೂಳೆಗಳು ತುಂಬಾ ದುರ್ಬಲವಾಗುತ್ತವೆ.

ಇದನ್ನೂ ಓದಿ:  ಏನಿದು ಸೈಲೆಂಟ್ ಹಾರ್ಟ್​ ಅಟ್ಯಾಕ್?; ನಿಮಗೆ ಗೊತ್ತಿರಲೇಬೇಕಾದ 5 ಲಕ್ಷಣಗಳಿವು

ಮೆಗ್ನೀಸಿಯಮ್ ಕೊರತೆಯ ಲಕ್ಷಣಗಳು:

ದೆಹಲಿಯ ಹಿರಿಯ ವೈದ್ಯ ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ ಹಸಿವು ಬದಲಾಗಿದ್ದರೆ ಅಂದರೆ ಮೊದಲಿಗಿಂತ ಹಸಿವು ಕಡಿಮೆಯಾಗಿ ಮತ್ತು ಲಘುವಾಗಿ ಕೆಲಸ ಮಾಡಿದ ನಂತರವೂ ಸುಸ್ತಾಗಿರುತ್ತಿದ್ದರೆ ಅದು ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗುತ್ತಿರುವುದರ ಸಂಕೇತ. ಇದು 1.7 ಮತ್ತು 2.2 mg/dL ನಡುವೆ ಇದ್ದರೆ, ಯಾವುದೇ ಅಪಾಯವಿಲ್ಲ.

ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣವೆಂದರೆ ಸೂರ್ಯನ ಬೆಳಕಿನ ಕೊರತೆ. ಇತ್ತೀಚಿನ ದಿನಗಳಲ್ಲಿ ಜನರು ಸೂರ್ಯನ ಬೆಳಕಿನಲ್ಲಿ ಕಡಿಮೆ ಸಮಯವನ್ನು ಕಳೆಯುತ್ತಾರೆ. ಅದರಲ್ಲೂ ಕಚೇರಿ ಕೆಲಸ ಮಾಡುವವರಿಗೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುವುದು ಕಷ್ಟವಾಗುತ್ತದೆ. ಇದಲ್ಲದೇ ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯೂ ಹದಗೆಡುತ್ತಿದೆ. ಇದರಿಂದಾಗಿ ಜನರು ಈ ವಿಟಮಿನ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಆಹಾರದ ಬದಲಾವಣೆಗಳನ್ನು ಸೂಚಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: