ಸೈಲೆಂಟ್ ಹಾರ್ಟ್​ ಅಟ್ಯಾಕ್ ಬಗ್ಗೆ ಗೊತ್ತಾ? ನಿಮಗೆ ಗೊತ್ತಿರಲೇಬೇಕಾದ 5 ಲಕ್ಷಣ

ಇದು ವೈದ್ಯಕೀಯ ಎಮರ್ಜೆನ್ಸಿಯಾಗಿದ್ದು, ಹೃದಯಾಘಾತ ಹೃದಯದ ಸ್ನಾಯುಗಳಿಗೆ ಶಾಶ್ವತವಾದ ಹಾನಿಯನ್ನು ಉಂಟುಮಾಡಬಹುದು ಮತ್ತು ಸಾವಿಗೆ ಕಾರಣವಾಗಬಹುದು. ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿವೆ.

ಸೈಲೆಂಟ್ ಹಾರ್ಟ್​ ಅಟ್ಯಾಕ್ ಬಗ್ಗೆ ಗೊತ್ತಾ? ನಿಮಗೆ ಗೊತ್ತಿರಲೇಬೇಕಾದ 5 ಲಕ್ಷಣ
Follow us
ಸುಷ್ಮಾ ಚಕ್ರೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2024 | 5:15 PM

ಹೃದಯಾಘಾತವನ್ನು ವೈದ್ಯಕೀಯವಾಗಿ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ಕರೆಯಲಾಗುತ್ತದೆ. ಇದು ವೈದ್ಯಕೀಯ ಎಮರ್ಜೆನ್ಸಿಯಾಗಿದ್ದು, ಹೃದಯಾಘಾತ ಹೃದಯದ ಸ್ನಾಯುಗಳಿಗೆ ಶಾಶ್ವತವಾದ ಹಾನಿಯನ್ನು ಉಂಟುಮಾಡಬಹುದು ಮತ್ತು ಸಾವಿಗೆ ಕಾರಣವಾಗಬಹುದು. ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿವೆ. ಕೆಲವರಿಗೆ ಮೈಲ್ಡ್​ ಹಾರ್ಟ್ ಅಟ್ಯಾಕ್ ಆದರೆ ಇನ್ನು ಕೆಲವರ ಸ್ಥಿತಿ ಗಂಭೀರವಾಗಿ ಕೆಲವೇ ಕ್ಷಣಗಳಲ್ಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಸೈಲೆಂಟ್ ಹಾರ್ಟ್ ಅಟ್ಯಾಕ್ ಬಹಳ ಅಪಾಯಕಾರಿಯಾದುದು. ಏಕೆಂದರೆ, ಇದರ ಲಕ್ಷಣಗಳು ನಮಗೆ ಗೊತ್ತಾಗುವುದೇ ಇಲ್ಲ. ಗೊತ್ತಾದರೂ ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ.

ನಮಗೆ ಹೃದಯಾಘಾತ ಉಂಟಾದಾಗ ನಾವು ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದ ಹೃದಯ ಬಡಿತದವರೆಗೆ ಹಲವು ರೀತಿಯ ರೋಗಲಕ್ಷಣಗಳನ್ನು ಅನುಭವಿಸಬಹುದು. ಹೀಗಾಗಿ, ಹೈದರಾಬಾದ್​ನ ಯಶೋದಾ ಹಾಸ್ಪಿಟಲ್ಸ್ ಕ್ಲಿನಿಕಲ್ ಡೈರೆಕ್ಟರ್ ಮತ್ತು ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಸಿ. ರಘು ಅವರ ಪ್ರಕಾರ, ವಾಕರಿಕೆ ಮತ್ತು ಬೆವರುವಿಕೆಯಂತಹ ಲಕ್ಷಣಗಳು ಉಂಟಾದಾಗ ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಅದು ಹೃದಯಾಘಾತದ ಲಕ್ಷಣ ಎಂದು ನಮಗೆ ಗೊತ್ತಾಗುವುದಿಲ್ಲ. ಹೀಗಾಗಿ, ಕೆಲವು ಲಕ್ಷಣಗಳು ಗೋಚರಿಸಿದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?

ಎದೆ ನೋವು ಮತ್ತು ಅಸ್ವಸ್ಥತೆ:

ಹೃದಯಾಘಾತದ ಸಾಮಾನ್ಯ ಎಚ್ಚರಿಕೆಯ ಸಂಕೇತವೆಂದರೆ ಎದೆ ನೋವು ಅಥವಾ ಅಸ್ವಸ್ಥತೆ. ಈ ನೋವು ಸೌಮ್ಯವಾದ ನೋವಿನಿಂದ ಎದೆಯಲ್ಲಿ ತೀವ್ರವಾದ, ಹಿಸುಕಿದ ಸಂವೇದನೆಯವರೆಗೆ ಇರುತ್ತದೆ. ಎದೆಯ ಮೇಲೆ ಭಾರವಾದ ಅನುಭವ ಅಥವಾ ಒತ್ತಡದಂತೆಯೂ ಭಾಸವಾಗಬಹುದು. ತೋಳುಗಳ ನೋವು ಕ್ರಮೇಣ ಕುತ್ತಿಗೆ, ದವಡೆ, ಬೆನ್ನು ಅಥವಾ ಹೊಟ್ಟೆಗೆ ಹರಡಬಹುದು. ಎದೆ ನೋವು ಬಂದು ಹೋಗಿ ಆಗಬಹುದು ಅಥವಾ ಹಲವಾರು ನಿಮಿಷಗಳು ಎದೆನೋವು ಉಳಿಯಬಹುದು.

ಅತಿಯಾದ ಹೃದಯ ಬಡಿತ:

ಅತಿಯಾದ ಹೃದಯ ಬಡಿತವು ಹೃದಯಾಘಾತದ ಮತ್ತೊಂದು ಎಚ್ಚರಿಕೆಯ ಸಂಕೇತವಾಗಿದೆ. ನೀವು ವಿಶ್ರಾಂತಿಯಲ್ಲಿದ್ದರೂ ಸಹ ಹೃದಯ ಬಡಿತವು ಸಂಭವಿಸಬಹುದು. ಈ ರೀತಿಯ ಅನುಭವ ಕೆಲವು ಸೆಕೆಂಡುಗಳು ಅಥವಾ ಹಲವಾರು ನಿಮಿಷಗಳವರೆಗೆ ಇರುತ್ತದೆ.

ತಲೆತಿರುಗುವಿಕೆ:

ತಲೆತಿರುಗುವುದು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಹೃದಯಕ್ಕೆ ಆಮ್ಲಜನಕದ ಕೊರತೆಯಿಂದಾಗಿ ರಕ್ತದೊತ್ತಡದ ಹಠಾತ್ ಕುಸಿತದಿಂದ ಇದು ಉಂಟಾಗಬಹುದು. ನೀವು ಮೂರ್ಛೆ ಹೋಗುತ್ತಿರುವಿರಿ ಅಥವಾ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವಿರಿ ಎಂದು ನಿಮಗೆ ಅನಿಸಬಹುದು. ತಲೆತಿರುಗುವಿಕೆ ಸಹ ವಾಕರಿಕೆ, ಬೆವರುವಿಕೆ ಮತ್ತು ಉಸಿರಾಟದ ತೊಂದರೆಯೊಂದಿಗೆ ಇರುತ್ತದೆ.

ಇದನ್ನೂ ಓದಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಇಲ್ಲಿದೆ ಕಾರಣ

ಉಸಿರಾಟದ ತೊಂದರೆ:

ಉಸಿರಾಟದ ತೊಂದರೆ ಹೃದಯಾಘಾತದ ಮತ್ತೊಂದು ಸಾಮಾನ್ಯ ಎಚ್ಚರಿಕೆಯ ಸಂಕೇತವಾಗಿದೆ. ವಿಶ್ರಾಂತಿಯಲ್ಲಿರುವಾಗ ನಿಮ್ಮ ಉಸಿರಾಟವನ್ನು ಹಿಡಿಯಲು ನೀವು ಹೆಣಗಾಡುತ್ತಿರುವಂತೆ ನಿಮಗೆ ಅನಿಸಬಹುದು. ಈ ರೋಗಲಕ್ಷಣವು ಹೃದಯಕ್ಕೆ ಆಮ್ಲಜನಕದ ಕೊರತೆಯಿಂದ ಉಂಟಾಗುತ್ತದೆ. ಇದು ಶ್ವಾಸಕೋಶದಲ್ಲಿ ದ್ರವದ ಶೇಖರಣೆಗೆ ಕಾರಣವಾಗಬಹುದು.

ಆಯಾಸ:

ಆಯಾಸವು ಹೃದಯಾಘಾತದ ಸಾಮಾನ್ಯ ಎಚ್ಚರಿಕೆಯ ಸಂಕೇತವಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀವು ಯಾವುದೇ ರೀತಿಯ ಸುಸ್ತಾಗುವ ಕೆಲಸ ಮಾಡದಿದ್ದರೂ ಸಹ ನೀವು ಅತಿಯಾದ ದಣಿವು ಅಥವಾ ದುರ್ಬಲತೆಯನ್ನು ಅನುಭವಿಸಬಹುದು. ನೀವು ವಿಪರೀತ ದಣಿದಿದ್ದರೆ ನಿಮ್ಮ ಹೃದಯವು ನಿಮ್ಮ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡಲು ಹೆಣಗಾಡುತ್ತಿದೆ ಎಂಬುದರ ಸಂಕೇತವಾಗಿರಬಹುದು, ಇದು ಮುಂಬರುವ ಹೃದಯಾಘಾತವನ್ನು ಸೂಚಿಸುತ್ತದೆ.

ಜೀರ್ಣಕಾರಿ ಸಮಸ್ಯೆಗಳು:

ವಾಕರಿಕೆ, ವಾಂತಿ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳು ವಿಶೇಷವಾಗಿ ಮಹಿಳೆಯರಲ್ಲಿ ಹೃದಯಾಘಾತದ ಚಿಹ್ನೆಗಳಾಗಿರಬಹುದು. ಎದೆ ನೋವು ಅಥವಾ ಅಸ್ವಸ್ಥತೆ ಇಲ್ಲದಿದ್ದರೂ ಸಹ ಈ ರೋಗಲಕ್ಷಣಗಳು ಸಂಭವಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ