AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣನ್’ ಸಿನಿಮಾ ನಿರ್ದೇಶಕನ ಜೊತೆ ಮತ್ತೆ ಕೈಜೋಡಿಸಿದ ಧನುಶ್

Dhanush-Maari Selvaraj: 2021 ರಲ್ಲಿ ಬಿಡುಗಡೆ ಆಗಿದ್ದ ಧನುಶ್ ನಟನೆಯ ‘ಕರ್ಣನ್’ ಸಿನಿಮಾ ಭಾರಿ ಹಿಟ್ ಆಗಿತ್ತು. ಒಟಿಟಿಯಲ್ಲಿಯೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಸಿನಿಮಾದಲ್ಲಿ ಬಳಲಾಗಿರುವ ರೂಪಕಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆ ಸಿನಿಮಾದ ನಿರ್ದೇಶಕ ಮಾರಿ ಸೆಲ್ವರಾಜ್, ಇದೀಗ ಧನುಶ್ ಜೊತೆ ಮತ್ತೆ ಕೈ ಜೋಡಿಸಿದ್ದಾರೆ. ಇಬ್ಬರು ಹೊಸ ಸಿನಿಮಾ ಘೋಷಿಸಿದ್ದಾರೆ.

‘ಕರ್ಣನ್’ ಸಿನಿಮಾ ನಿರ್ದೇಶಕನ ಜೊತೆ ಮತ್ತೆ ಕೈಜೋಡಿಸಿದ ಧನುಶ್
Dhanush Mari Selvaraj
Follow us
ಮಂಜುನಾಥ ಸಿ.
|

Updated on: Apr 11, 2025 | 6:45 PM

ಧನುಶ್ (Dhanush) ಸಿನಿಮಾ ಆಯ್ಕೆ ಬಹಳ ಭಿನ್ನ. ದಳಪತಿ ವಿಜಯ್ (Thalapathy Vijay), ಅಜಿತ್ ಕುಮಾರ್ (Ajith Kumar) ಅಂಥಹಾ ನಟರುಗಳು ಲಾಜಿಕ್ ಇಲ್ಲದ ಮಾಸ್ ಸಿನಿಮಾಗಳ ಹಿಂದೆ ಬಿದ್ದು ಕಮರ್ಶಿಯಲ್ ಯಶಸ್ಸು ಕಾಣುತ್ತಿದ್ದಾರೆ ಆದರೆ ನಟ ಧನುಶ್ ಸಮಾಜಕ್ಕೆ ಕನ್ನಡಿ ಹಿಡಿಯುವ ರೀತಿಯ ಕತೆಗಳುಳ್ಳ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಒಳ್ಳೆ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ನಟ ಧನುಶ್, ‘ಕರ್ಣನ್’ ಸಿನಿಮಾದ ನಿರ್ದೇಶಕ ಮಾರಿ ಸೆಲ್ವರಾಜ್ ಜೊತೆಗೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ.

2021 ರಲ್ಲಿ ಬಿಡುಗಡೆ ಆಗಿದ್ದ ‘ಕರ್ಣನ್’ ಸಿನಿಮಾ ಧನುಶ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಜಾತಿ ವ್ಯವಸ್ಥೆಯ ಹಲವು ಪದರಗಳನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ಪ್ರೇಕ್ಷಕರ ಎದುರಿಗೆ ಇರಿಸಿದ್ದ ಸಿನಿಮಾ ಇದಾಗಿತ್ತು. ಹಲವು ರೂಪಕಗಳನ್ನು ಬಳಸಿಕೊಂಡು ನಿರ್ದೇಶಕ ಮಾರಿ ಸೆಲ್ವರಾಜ್ ಕತೆ ಹೇಳಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದೆ.

ಮಾರಿ ಸೆಲ್ವರಾಜ್ ಮುಂದಿನ ಸಿನಿಮಾ ಅನ್ನು ಧನುಶ್ ಅವರಿಗಾಗಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ಇದೀಗ ಬಿಡುಗಡೆ ಆಗಿದೆ. ಪೋಸ್ಟರ್​ನಲ್ಲಿ ಬೇರಿನಿಂದ ಸುತ್ತಿಕೊಂಡಿರುವ ಒಂದು ಕತ್ತಿಯಿದೆ, ಕತ್ತಿಯ ಮೇಲೊಂದು ಮಾನವನ ಬುರುಡೆ ಇದೆ. ‘ರೂಟ್ಸ್ ಬಿಗಿನ್ ಎ ಗ್ರೇಟ್ ವಾರ್’ (ಬೇರುಗಳು ದೊಡ್ಡ ಯುದ್ಧವನ್ನು ಪ್ರಾರಂಭಿಸುತ್ತವೆ) ಎಂದು ಬರೆದಿದೆ. ಆ ಮೂಲಕ ನೆಲದ ಮೂಲಕ್ಕಾಗಿ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದನ್ನು ಸೂಚ್ಯವಾಗಿ ಪೋಸ್ಟರ್​ ಮೂಲಕ ಹೇಳಲಾಗಿದೆ.

ಇದನ್ನೂ ಓದಿ
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
Image
‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದೂಡಿದ ಮಂಚು ಮನೋಜ್, ಯಾವುದರ ಭಯ?
Image
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
Image
ಎಲ್ 2:ಎಂಪುರಾನ್ ಕಲೆಕ್ಷನ್, ಮೂರೇ ದಿನಕ್ಕೆ ಹಳೆ ದಾಖಲೆಗಳು ಉಡೀಸ್

ಇದನ್ನೂ ಓದಿ:ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ಮಾಣ ಸಂಸ್ಥೆ

ಮಾರಿ ಸೆಲ್ವರಾಜ್ ಆರಂಭದಿಂದಲೂ ಜಾತಿಯತೆ, ಅಸ್ಪ್ರುಶ್ಯತೆ, ಅಸಮಾನತೆ, ದೌರ್ಜನ್ಯಗಳ ವಿಷಯಗಳ ಬಗ್ಗೆ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಅವರ ಮೊದಲ ಸಿನಿಮಾ ‘ಪರಿಯೇರುಮ್ ಪೆರುಮಾಳ್’ ಸೂಪರ್ ಹಿಟ್ ಆಗಿತ್ತು. ಅವರ ಎರಡನೇ ಸಿನಿಮಾ ‘ಕರ್ಣನ್’ ಅದೂ ಹಿಟ್. ಬಳಿಕ ಸ್ಟಾಲಿನ್ ಪುತ್ರ ಉದಯನಿಧಿ ನಾಯಕನಾಗಿ ನಟಿಸಿದ ‘ಮಾಮನ್ನನ್’ ಸಿನಿಮಾ ಸಹ ಹಿಟ್ ಆಯ್ತು. ಇತ್ತೀಚೆಗಷ್ಟೆ ಇಬ್ಬರು ಬಾಲಕರ ಕತೆ ‘ವಾಳೈ’ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದೀಗ ‘ಬೈಸನ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ನಟ ಕಾರ್ತಿ ಜೊತೆಗೂ ಒಂದು ಸಿನಿಮಾ ಮಾಡಲಿದ್ದಾರೆ ಮಾರಿ ಸೆಲ್ವರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ