AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಲ್ ರಾಹುಲ್ ವಿನ್ನಿಂಗ್ ಸೆಲೆಬ್ರೇಷನ್​ಗೆ ಸ್ಪೂರ್ತಿ ಕನ್ನಡದ ಈ ಸಿನಿಮಾ

KL Rahul: ನಿನ್ನೆ (ಏಪ್ರಿಲ್ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​ಸಿಬಿ ಪಂದ್ಯದಲ್ಲಿ ಡೆಲ್ಲಿ ಗೆದ್ದಿದೆ. ಕನ್ನಡಿಗ ಕೆಎಲ್ ರಾಹುಲ್ ಅವರ ವಿರೋಚಿತ ಆಟ ಡೆಲ್ಲಿಯ ಗೆಲುವಿಗೆ ಕಾರಣವಾಗಿದೆ. ಪಂದ್ಯವನ್ನು ಗೆಲ್ಲಿಸಿದ ಬಳಿಕ ಕೆಎಲ್ ರಾಹುಲ್ ಗೆಲುವನ್ನು ಸಂಭ್ರಮಿಸಿದ ರೀತಿ ಭಿನ್ನವಾಗಿತ್ತು. ಅವರ ಈ ಸೆಲೆಬ್ರೇಷನ್​ಗೆ ಸ್ಪೂರ್ತಿ ಕನ್ನಡದ ಒಂದು ಪ್ಯಾನ್ ಇಂಡಿಯಾ ಸಿನಿಮಾ.

ಕೆಎಲ್ ರಾಹುಲ್ ವಿನ್ನಿಂಗ್ ಸೆಲೆಬ್ರೇಷನ್​ಗೆ ಸ್ಪೂರ್ತಿ ಕನ್ನಡದ ಈ ಸಿನಿಮಾ
Kl Rahul
Follow us
ಮಂಜುನಾಥ ಸಿ.
|

Updated on: Apr 11, 2025 | 4:49 PM

ನಿನ್ನೆ (ಏಪ್ರಿಲ್ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ (IPL 2025) ಬೆಂಗಳೂರು, ಡೆಲ್ಲಿ ಪಂದ್ಯದಲ್ಲಿ ಡೆಲ್ಲಿ ಗೆದ್ದಿದೆ. ಕನ್ನಡಿಗ ಕೆಎಲ್ ರಾಹುಲ್ (KL Rahul) ಅತ್ಯದ್ಭುತ ಆಟವಾಡಿ ಆರ್​ಸಿಬಿ ಇಂದ ಗೆಲುವು ಕಸಿದುಕೊಂಡಿದ್ದಾರೆ. ಅದ್ಭುತ ಇನ್ನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್, ತಂಡವನ್ನು ಗೆಲುವಿನ ದಟ ದಾಟಿಸಿದ ಮೇಲೆ ಮಾಡಿದ ಸೆಲೆಬ್ರೇಷನ್ ವಿಡಿಯೋ ಸಖತ್ ವೈರಲ್ ಆಗಿದೆ. ಕೆಎಲ್ ರಾಹುಲ್ ಮಾಡಿದ ಈ ವಿನ್ನಿಂಗ್ ಸೆಲೆಬ್ರೇಷನ್​ಗೆ ಕನ್ನಡದ ಒಂದು ಸಿನಿಮಾ ಸ್ಪೂರ್ತಿ, ನೀವಂದುಕೊಂಡಂತೆ ಅದು ‘ಉಗ್ರಂ’ ಅಲ್ಲ!

ಸಾಮಾನ್ಯವಾಗಿ ಫೀಲ್ಡ್​ನಲ್ಲಿ ಶಾಂತಿಯಿಂದ, ವಿನಯದಿಂದ ವರ್ತಿಸುವ ಕೆಎಲ್ ರಾಹುಲ್, ನಿನ್ನೆಯ ಪಂದ್ಯ ಮುಗಿದ ಬಳಿಕ ತುಸು ಅಗ್ರೆಷನ್ ಪ್ರದರ್ಶಿಸಿದರು. ಬ್ಯಾಟಿನಿಂದ ವೃತ್ತವೊಂದನ್ನು ಬರೆದು, ವೃತ್ತದ ಮಧ್ಯೆ ಬಾಟನ್ನು ಗುದ್ದಿದರು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಲ್ಲರೂ ಶ್ರೀಮುರಳಿಯ ‘ಉಗ್ರಂ’ ಸಿನಿಮಾದ ‘ವೃತ್ತ ಬರೆದಾಗಿದೆ, ವೃತ್ತದಲ್ಲಿರುವುದೆಲ್ಲ ನಂದೇ’ ಎಂಬ ಡೈಲಾಗ್​ ಅನ್ನು ವಿಡಿಯೋಕ್ಕೆ ಹಿನ್ನೆಲೆಯಾಗಿ ಹಾಕಿ ವೈರಲ್ ಮಾಡುತ್ತಿದ್ದಾರೆ. ಆದರೆ ಕೆಎಲ್ ರಾಹುಲ್ ಆ ವಿನ್ನಿಂಗ್ ಸೆಲೆಬ್ರೇಷನ್​ಗೆ ‘ಉಗ್ರಂ’ ಸಿನಿಮಾ ಸ್ಪೂರ್ತಿ ಅಲ್ಲ.

ಮ್ಯಾಚ್ ಮುಗಿದ ಬಳಿಕ ತಮ್ಮ ಅಗ್ರೆಸ್ಸಿವ್ ವಿನ್ನಿಂಗ್ ಸೆಲೆಬ್ರೇಷನ್ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್, ‘ಚಿನ್ನಸ್ವಾಮಿ ಕ್ರೀಡಾಂಗಣ ನನಗೆ ಬಹಳ ವಿಶೇಷವಾದುದು, ಆ ಸೆಲೆಬ್ರೇಷನ್ ಸಹ ನನ್ನ ಮೆಚ್ಚಿನ ಸಿನಿಮಾ ‘ಕಾಂತಾರ’ ಸ್ಪೂರ್ತಿ’ ಎಂದಿದ್ದಾರೆ. ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ನಾಯಕ ರಿಷಬ್ ಶೆಟ್ಟಿ ಮೇಲೆ ಗುಳಿಗನ ಆವಾಹನೆಯಾದಾಗ ರಿಷಬ್ ಶೆಟ್ಟಿ, ಕತ್ತಿ ಹಿಡಿದು ನೆಲದ ಮೇಲೆ ವೃತ್ತ ಬರೆದು ಅದರಲ್ಲಿ ಕತ್ತಿಯನ್ನು ಜೋರಾಗಿ ಚುಚ್ಚುತ್ತಾರೆ. ಆ ದೃಶ್ಯದಿಂದ ಸ್ಪೂರ್ತಿ ಪಡೆದು ಅದೇ ಸೆಲೆಬ್ರೇಷನ್ ಮಾಡಿದ್ದಾರೆ ಕೆಎಲ್ ರಾಹುಲ್.

ಇದನ್ನೂ ಓದಿ:KL Rahul: ಇದು ನನ್ನ ಊರು.. ನನ್ನ ಗ್ರೌಂಡ್: ಪೋಸ್ಟ್ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಮಾತು ಕೇಳಿ ಕೊಹ್ಲಿ ಸೈಲೆಂಟ್

ಕೆಎಲ್ ರಾಹುಲ್ ತಮ್ಮ ಕ್ರಿಕೆಟ್ ಜೀವನದ ಬಹುತೇಕ ಸಮಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದಿದ್ದಾರೆ. ಚಿನ್ನಸ್ವಾಮಿ ಅವರಿಗೆ ಹೋಂ ಗ್ರೌಂಡ್, ಮ್ಯಾಚ್ ಗೆಲ್ಲಿಸಿದ ಬಳಿಕ ಅದನ್ನೇ ಅವರು ಹೆಮ್ಮೆಯಿಂದ ಹೇಳಿದ್ದಾರೆ. ಜೊತೆಗೆ ಬ್ಯಾಟ್ ಮೇಲಕ್ಕೆತ್ತಿ ಬೆಂಗಳೂರಿನ ಪ್ರೇಕ್ಷಕರಿಗೆ ಧನ್ಯವಾದ ಸಹ ಹೇಳಿದರು. ಮ್ಯಾಚ್ ಮುಗಿದ ಬಳಿಕವೂ ಸಹ ‘ಇದು ನನ್ನ ಗ್ರೌಂಡ್’ ಎಂದು ತನ್ನ ಸಹ ಆಟಗಾರರ ಬಳಿ ಕೆಎಲ್ ರಾಹುಲ್ ಹೇಳಿದ ವಿಡಿಯೋ ತುಣುಕು ಸಹ ವೈರಲ್ ಆಗಿದೆ.

ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ 53 ಎಸೆತಕ್ಕೆ 93 ರನ್ ಭಾರಿಸಿದರು. ಆರಂಭಿಕ ಕುಸಿತ ಕಂಡು ಸಂಕಷ್ಟದಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಹೋರಾಡಿ ಗೆಲುವಿನ ದಡಕ್ಕೆ ಕೊಂಡು ತಂದರು. ಈ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಪಂದ್ಯಾವಳಿಯಲ್ಲಿ ಈ ವರೆಗೆ ಒಂದೂ ಸೋಲನ್ನು ಡೆಲ್ಲಿ ಕ್ಯಾಪಿಟಲ್ಸ್ ಕಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್