ಕಂಚಿನ ಕಂಠ ಇದ್ದರೂ ಹಾಡುತ್ತಿರಲಿಲ್ಲ ರಾಜ್ಕುಮಾರ್; ಆ ವ್ಯಕ್ತಿಯ ಒತ್ತಾಯಕ್ಕೆ ಗಾಯಕರಾದರು
ರಾಜ್ ಕುಮಾರ್ ಅವರು ಆರಂಭದಲ್ಲಿ ಹಾಡು ಹಾಡಲು ಇಷ್ಟಪಡುತ್ತಿರಲಿಲ್ಲ. "ಸಂಪತ್ತಿಗೆ ಸವಾಲ್" ಚಿತ್ರದ "ಯಾರೇ ಕೂಗಾಡಲಿ" ಹಾಡು ಅವರ ಮೊದಲ ಹಾಡು. ತಮ್ಮ ಹಾಡಿನಿಂದ ಇತರ ಗಾಯಕರಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ಸಂಗೀತ ಸಂಯೋಜಕರ ಒತ್ತಾಯಕ್ಕೆ ಮಣಿದು ಹಾಡಿದ ಅವರು ನಂತರ ಖ್ಯಾತ ಗಾಯಕರಾದರು.

ರಾಜ್ಕುಮಾರ್ (Rajkumar) ಅವರು ನಮ್ಮನ್ನು ಬಿಟ್ಟುಹೋಗಿ ಬರೋಬ್ಬರಿ 19 ವರ್ಷಗಳು ಕಳೆದು ಹೋಗಿವೆ. ಇಂದು (ಏಪ್ರಿಲ್ 12) ಅವರ ಪುಣ್ಯತಿಥಿ. ರಾಜ್ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದರೂ ಅವರು ಹಾಕಿಕೊಟ್ಟ ಆದರ್ಶಗಳು, ಅವರು ಮಾಡಿದ ಸಿನಿಮಾಗಳು ಎಂದಿಗೂ ಅಮರ. ಈ ವ್ಯಕ್ತಿ ಮನಸ್ಸು ಮಾಡದೆ ಇದ್ದಿದ್ದರೆ ರಾಜ್ಕುಮಾರ್ ಹಾಡನ್ನು ಹಾಡುತ್ತಲೇ ಇರಲಿಲ್ಲ. ಶ್ರೇಷ್ಠ ಗಾಯಕರು ಸಿಗುತ್ತಾ ಇರಲಿಲ್ಲ. ಅಷ್ಟಕ್ಕೂ ಅವರು ಹಾಡದೇ ಇರಲು ಕಾರಣವಾದ ವಿಚಾರ ಏನು? ಆ ಬಗ್ಗೆ ಇಲ್ಲಿದೆ ವಿವರ.
ರಾಜ್ಕುಮಾರ್ ಅವರು ಮೊದಲು ಹಾಡಿದ್ದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡು. ಈ ಹಾಡು ಸೂಪರ್ ಹಿಟ್ ಆಯಿತು. ಈ ಹಾಡನ್ನು ಮೊದಲು ರಾಜ್ಕುಮಾರ್ ಹಾಡಲು ಒಪ್ಪಿರಲಿಲ್ಲ. ತಾವು ಹಾಡನ್ನೂ ಹಾಡಲು ಆರಂಭಿಸಿದರೆ ಉಳಿದ ಗಾಯಕರಿಗೆ ಇದರಿಂದ ಅವಕಾಶ ತಪ್ಪಿ ಹೋಗುತ್ತದೆ ಎಂಬುದು ಅವರ ಆಲೋಚನೆ ಆಗಿತ್ತು. ಈ ಕಾರಣದಿಂದ ರಾಜ್ಕುಮಾರ್ ಅವರು ಈ ಬಗ್ಗೆ ಸಾಕಷ್ಟು ಆಲೋಚಿಸುತ್ತಿದ್ದರು ಮತ್ತು ಹಾಡಲು ಹಿಂದೇಟು ಹಾಕುತ್ತಿದ್ದರು.
ಈ ಕಾರಣದಿಂದಲೇ ರಾಜ್ಕುಮಾರ್ ಅವರು ಹಲವು ಆಫರ್ಗಳನ್ನು ರಿಜೆಕ್ಟ್ ಮಾಡುತ್ತಾ ಬಂದರು. ಆದರೆ, ‘ಯಾರೇ ಕೂಗಾಡಲಿ..’ ಹಾಡನ್ನು ರಾಜ್ಕುಮಾರ್ ಬಳಿಯೇ ಹೇಳಿಸಬೇಕು ಎಂದು ಒತ್ತಾಯ ಹೇಳಿದರು. ಎಲ್ಲರ ಒತ್ತಾಯಕ್ಕೆ ಮಣಿದ ರಾಜ್ಕುಮಾರ್ ಅವರು ಹಾಡನ್ನು ಹಾಡಿದರು. ಅಲ್ಲಿಂದ ರಾಜ್ಕುಮಾರ್ ಅವರ ಅದೃಷ್ಟ ಬದಲಾಗಿ ಹೋಯಿತು. ಗಾಯಕನಾಗಿ ರಾಜ್ಕುಮಾರ್ಗೆ ಬೇಡಿಕೆ ಸೃಷ್ಟಿ ಆಯಿತು.
ಇದನ್ನೂ ಓದಿ: ‘ಓಂ’ ಚಿತ್ರಕ್ಕೆ ಕೇಳಿ ಬಂದಿತ್ತು ತಕರಾರು; ರಾಜ್ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್
‘ನಾರಿಯಾ ಸೀರೆ ಕದ್ದ..’, ‘ಬಾನಿಗೊಂದು ಎಲ್ಲೆ ಎಲ್ಲಿದೆ..’, ‘ನಾ ನಿನ್ನ ಮರೆಯಲಾರೆ..’, ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಆ ಬಳಿಕ ಪುನೀತ್ ರಾಜ್ಕುಮಾರ್ ನಟನೆಯ ಕೆಲವು ಸಿನಿಮಾಗಳ ಹಾಡಿಗೂ ರಾಜ್ಕುಮಾರ್ ಧ್ವನಿ ಆಗಿದ್ದರು. ರಾಜ್ಕುಮಾರ್ ಅವರನ್ನು ಪುನೀತ್ ಅವರು ಫಾಲೋ ಮಾಡಿದ್ದರು. ಪುನೀತ್ ಕೂಡ ಹಲವು ಹಾಡುಗಳನ್ನು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.