ರಶ್ಮಿಕಾ, ಧನುಶ್, ನಾಗಾರ್ಜುನ ಸಿನಿಮಾಕ್ಕೆ ಬಿಡುಗಡೆಗೆ ಮುಂಚೆಯೇ ಸಂಕಷ್ಟ
Rashmika Mandanna: ನಟಿ ರಶ್ಮಿಕಾ ಮಂದಣ್ಣ, ಧನುಶ್ ಮತ್ತು ಅಕ್ಕಿನೇನಿ ನಾಗಾರ್ಜುನ ನಟಿಸಿರುವ ‘ಕುಬೇರ’ ಸಿನಿಮಾ ತಮ್ಮ ಪೋಸ್ಟರ್ ಹಾಗೂ ಕೆಲವು ಟೀಸರ್ಗಳಿಂದ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿರುವ ಹೊತ್ತಿನಲ್ಲೇ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದೆ. ನಿರ್ಮಾಪಕರೊಬ್ಬರು ಸಿನಿಮಾದ ವಿರುದ್ಧ ಛೇಂಬರ್ಗೆ ದೂರು ನೀಡಿದ್ದಾರೆ.

ನಟಿ ರಶ್ಮಕಾ ಮಂದಣ್ಣ, ಧನುಶ್ ಮತ್ತು ಅಕ್ಕಿನೇನಿ ನಾಗಾರ್ಜುನ ಒಟ್ಟಿಗೆ ನಟಿಸಿ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸುತ್ತಿರುವ ‘ಕುಬೇರ’ ಸಿನಿಮಾ ಹೆಚ್ಚಿನ ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಮುಗಿಸಿದೆ. ಸಿನಿಮಾದ ಕೆಲ ಪೋಸ್ಟರ್ ಮಾತ್ರವೇ ಬಿಡುಗಡೆ ಆಗಿದ್ದು, ಸಿನಿಮಾ ಕುತೂಹಲ ಮೂಡಿಸಿದೆ. ಧನುಶ್, ಭಿಕ್ಷುಕನಾಗಿ, ನಾಗಾರ್ಜುನ ಶ್ರೀಮಂತನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿರುವ ಹೊತ್ತಿನಲ್ಲೇ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದೆ.
ಸಿನಿಮಾಕ್ಕೆ ‘ಕುಬೇರ’ ಎಂದು ಹೆಸರಿಡಲಾಗಿದ್ದು, ಇದೀಗ ತೆಲುಗಿನ ನಿರ್ಮಾಪಕನೊಬ್ಬ ತಾವು ಈಗಾಗಲೇ ಆ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದು, ಸಿನಿಮಾ ಹೆಸರಿನ ಹಕ್ಕು ತಮ್ಮ ಬಳಿ ಇದೆ, ತಮ್ಮ ಸಿನಿಮಾದ ಚಿತ್ರೀಕರಣ ಸಹ ಈಗಾಗಲೇ ಬಹುತೇಕ ಪೂರ್ಣವಾಗಿದೆ ಎಂದು ಹೇಳಿಕೊಂಡಿದ್ದಾರೆ. ಧನುಶ್ ಅವರ ಸಿನಿಮಾ ತಂಡದವರು ಕೂಡಲೇ ತಮ್ಮ ಸಿನಿಮಾದ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ
ಕರಿಮಾಕೊಂಡ ನರೇಂದ್ರನ್ ಎಂಬುವರು, ‘ಕುಬೇರ’ ಟೈಟಲ್ ತಮ್ಮ ಬಳಿ ಇದೆ ಎಂದಿದ್ದು, ಟೈಟಲ್ ಅನ್ನು ತಾವು ತೆಲುಗು ಸಿನಿಮಾ ಛೇಂಬರ್ನಲ್ಲಿ 2023 ರಲ್ಲಿಯೇ ಹೆಸರು ನೊಂದಾವಣಿ ಮಾಡಿಸಿರುವುದಾಗಿ ಹೇಳಿದ್ದಾರೆ. ಟೈಟಲ್ ರಿಜಿಸ್ಟರ್ ಮಾಡಿರುವುದು ಮಾತ್ರವೇ ಅಲ್ಲದೆ ಸಿನಿಮಾದ ಅರ್ಧ ಭಾಗ ಚಿತ್ರೀಕರಣ ಸಹ ಮಾಡಿದ್ದೀನ ಎಂದಿದ್ದಾರೆ. ನಿರ್ದೇಶಕ ಶೇಖರ್ ಕಮ್ಮುಲ, ತಮ್ಮ ಸಿನಿಮಾ ಟೈಟಲ್ ಅನ್ನು ಕದ್ದಿದ್ದಾರೆ ಎಂದು ಆರೋಪ ಮಾಡಿರುವ ಕರಿಮಾಕೊಂಡ ನರೇಂದ್ರನ್, ಕಮ್ಮುಲ ಅವರು ತಮ್ಮ ಸಿನಿಮಾದ ಹೆಸರು ಬದಲಾವಣೆ ಮಾಡಬೇಕು ಇಲ್ಲವಾದರೆ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ ತೆಲುಗು ಫಿಲಂ ಚೇಂಬರ್ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಸಹ ಮಾಡಿದ್ದಾರೆ.
ಧನುಶ್ ಅವರ ‘ಕುಬೇರ’ ಸಿನಿಮಾ ಶ್ರೀಮಂತ ಭಿಕ್ಷುಕನೊಬ್ಬನ ಕತೆಯನ್ನು ಒಳಗೊಂಡಿದೆ. ಈ ಹಿಂದೆ ತಮಿಳಿನಲ್ಲಿ ಬಂದು ಸೂಪರ್ ಹಿಟ್ ಆಗಿದ್ದ ‘ಪಿಚ್ಚಕಾರನ್’ ಮಾದರಿಯ ಕತೆಯನ್ನೇ ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ರಶ್ಮಿಕಾ ನಾಯಕಿ, ಧನುಶ್ ನಾಯಕ, ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ