ತಮಿಳಿನಲ್ಲಿ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನ ಜೊತೆ ಯಶ್ ಮುಂದಿನ ಸಿನಿಮಾ?
ರಾಕಿಂಗ್ ಸ್ಟಾರ್ ಯಶ್ ಅವರು 'ಕೆಜಿಎಫ್ 2' ಯಶಸ್ಸಿನ ನಂತರ ಹಲವಾರು ಚಿತ್ರಗಳಿಗೆ ಅವಕಾಶ ಪಡೆದಿದ್ದಾರೆ. ಸದ್ಯ ಅವರು 'ಟಾಕ್ಸಿಕ್' ಮತ್ತು 'ರಾಮಾಯಣ' ಚಿತ್ರಗಳಲ್ಲಿ ತೊಡಗಿದ್ದಾರೆ. ಇತ್ತೀಚೆಗೆ, ತಮಿಳು ನಿರ್ದೇಶಕ ಪಿಎಸ್ ಮಿತ್ರನ್ ಅವರೊಂದಿಗೆ ಒಂದು ಹೊಸ ಚಿತ್ರದಲ್ಲಿ ಅಭಿನಯಿಸುವ ಸುದ್ದಿ ಹರಡಿದೆ.

ಸಿನಿಮಾ ಆಯ್ಕೆಯಲ್ಲಿ ಯಶ್ ಅವರು ಜಾಗರೂಕರಾಗಿದ್ದಾರೆ. ‘ಕೆಜಿಎಫ್ 2’ ಗೆಲುವಿನ ಬಳಿಕ ಅವರ ಮನೆ ಬಾಗಿಲು ತಟ್ಟಿದ ನಿರ್ಮಾಪಕರು ಅದೆಷ್ಟೋ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಯಶ್ ಅವರು ತಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾತ್ರ ಮಾಡುತ್ತಿದ್ದಾರೆ. ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅದೇ ರೀತಿ ‘ರಾಮಾಯಣ’ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈಗ ಅವರು ತಮಿಳಿನ ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ ಎಂದು ವರದಿ ಆಗಿದೆ. ಕಾಲಿವುಡ್ ಅಂಗಳದಿಂದ ಹೀಗೊಂದು ಸುದ್ದಿ ಹೊರ ಬಿದ್ದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಿಂದ ಯಶ್ ಅವರ ವೃತ್ತಿಜೀವನ ಬದಲಾಗಿದೆ. ಈಗ ಅವರ ಕೈಯಲ್ಲಿ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಇದೆ. ಈ ಎರಡು ಚಿತ್ರಗಳ ಬಳಿಕ ಅವರು ತಮಿಳು ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೂ ಅಂತಿಮ ಆಗಿಲ್ಲ.
ಹಾಗಾದರೆ ಯಾರು ಆ ನಿರ್ದೇಶಕ? ಪಿಎಸ್ ಮಿತ್ರನ್. 2022ರಲ್ಲಿ ರಿಲೀಸ್ ಆದ ‘ಸರ್ದಾರ್’ ಸಿನಿಮಾನ ಮಿತ್ರನ್ ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರದ ಸೀಕ್ವೆಲ್ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ಮಿತ್ರನ್ ಸಿನಿಮಾಗೆ ಯಶ್ ಓಕೆ ಎಂದಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಮೊಗದಲ್ಲಿ ಸಂತಸ ಮೂಡಿದೆ.
ಅಂದಹಾಗೆ, ಯಶ್ ಹಾಗೂ ಮಿತ್ರನ್ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. 2023ರಲ್ಲಿ ಈ ಸುದ್ದಿ ಹುಟ್ಟಿಕೊಂಡು ತಣ್ಣಗಾಗಿತ್ತು. ‘ಯಶ್ 19’ ಚಿತ್ರಕ್ಕೆ ನಿರ್ದೇಶಕರ ಹುಡುಕಾಟ ನಡೆಯುತ್ತಿತ್ತು. ಆಗ ಮಿತ್ರನ್ ಹೆಸರು ಕೇಳಿ ಬಂದಿತ್ತು. ಕೊನೆಗೆ ಈ ಚಿತ್ರ ಗೀತು ಮೋಹನ್ದಾಸ್ ಪಾಲಾಗಿತ್ತು. ಈಗ ಇಬ್ಬರೂ ಮತ್ತೆ ಒಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ನಿರ್ದೇಶಕ ಮಿತ್ರನ್ ಪ್ರಸ್ತುತ ಕಾರ್ತಿ ನಾಯಕನಾಗಿ ನಟಿಸುತ್ತಿರುವ ಸರ್ದಾರ್ 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಂತರ ಅವರು ಯಶ್ ಜೊತೆ ಹೊಸ ಚಿತ್ರ ಮಾಡುತ್ತಾರೆ ಎಂಬ ಮಾತು ಕಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ಚಿತ್ರವು ಒಂದು ದೊಡ್ಡ ಆಕ್ಷನ್ ಎಂಟರ್‌ಟೈನರ್ ಕೂಡ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಬರಲಿದೆ. ಈ ಚಿತ್ರವೂ ಕನ್ನಡದಲ್ಲೇ ತಯಾರಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ: