AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ಮಾಣ ಸಂಸ್ಥೆ

Dhanush: ಕೆಲ ತಿಂಗಳ ಹಿಂದಷ್ಟೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘವು ಧನುಶ್ ವಿರುದ್ಧ ನಿಷೇಧ ಹೇರಲು ಮುಂದಾಗಿದ್ದವು. ಆದರೆ ಮಾತುಕತೆ ಮೂಲಕ ಸಂಧಾನ ಮಾಡಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ನಿರ್ಮಾಣ ಸಂಸ್ಥೆ ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಅಡ್ವಾನ್ಸ್ ಪಡೆದು ಡೇಟ್ಸ್ ಕೊಡುತ್ತಿಲ್ಲ, ಹಣ ವಾಪಸ್ ಕೊಡುತ್ತಿಲ್ಲ ಎಂದಿದೆ.

ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ಮಾಣ ಸಂಸ್ಥೆ
Dhanush
ಮಂಜುನಾಥ ಸಿ.
|

Updated on: Apr 01, 2025 | 12:55 PM

Share

ತಮಿಳು ಚಿತ್ರರಂಗದ (Kollywood) ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ಧನುಶ್ ವಿರುದ್ಧ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಆರೋಪ ಮಾಡಿದೆ. ನಟ ಧನುಶ್ ಈ ಹಿಂದೆ ತಮ್ಮ ನಿರ್ಮಾಣ ಸಂಸ್ಥೆಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಅಡ್ವಾನ್ಸ್ ಹಣ ಪಡೆದುಕೊಂಡಿದ್ದರು. ಆದರೆ ಸಿನಿಮಾ ಮಾಡಿಕೊಟ್ಟಿಲ್ಲ, ಅಲ್ಲದೆ ಅಡ್ವಾನ್ಸ್ ಹಣವನ್ನು ಸಹ ಮರಳಿಸಿಲ್ಲ ಎಂದು ಆರೋಪಿಸಿದೆ. ಇದೀಗ ಸಾಕಷ್ಟು ಒತ್ತಾಯದ ಬಳಿಕವೂ ಸಹ ಧನುಶ್ ತಮಗೆ ಡೇಟ್ಸ್ ನೀಡಿಲ್ಲ ಬದಲಿಗೆ ತಮ್ಮ ‘ಇಡ್ಲಿ ಕಡೈ’ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಆರೋಪಿಸಿದೆ.

ತಮಿಳಿನ ಫೈವ್ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಧನುಶ್ ಮೇಲೆ ಈ ಗಂಭೀರ ಆರೋಪ ಮಾಡಿದೆ. ಧನುಶ್ ಮಾತ್ರವೇ ಅಲ್ಲದೆ ಸೆಲ್ವಮನಿಯ ಬಗ್ಗೆಯೂ ಆರೋಪಗಳನ್ನು ಮಾಡಿದೆ. ಸೆಲ್ವಮನಿಯಿಂದಾಗಿಯೇ ನಿರ್ಮಾಪಕರುಗಳಿಗೆ ಸಿಗಬೇಕಾಗಿರುವ ನ್ಯಾಯ ಸಿಗುತ್ತಿಲ್ಲ, ಸೆಲ್ವಮಣಿಯಿಂದಲೇ ಧನುಶ್, ನಮಗೆ ಡೇಟ್ಸ್ ಕೊಡುತ್ತಿಲ್ಲ ಎಂದು ಫೈವ್ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರೋಪ ಮಾಡಿದೆ.

ಫೈನ್ ಸ್ಟಾರ್ ಕ್ರಿಯೇಷನ್ಸ್ ಈ ಹಿಂದೆ ಧನುಶ್​ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಟ್ಟಿವೆ. ಧನುಶ್ ಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ‘ಆಡುಕುಲಂ’, ಮೊದಲ ಸೂಪರ್ ಹಿಟ್ ಸಿನಿಮಾ ‘ಪೊಲ್ಲಾಧವನ್’ ಸಿನಿಮಾಗಳಿಗೆ ಬಂಡವಾಳ ಹಾಕಿದ್ದು ಇದೇ ನಿರ್ಮಾಣ ಸಂಸ್ಥೆ. ಈಗ ಧನುಶ್​ ಕಾಲ್​ಶೀಟ್​ಗಾಗಿ ನಿರ್ಮಾಪಕರ ಸಂಘದ ಮೆಟ್ಟಿಲು ಏರುವಂತಾಗಿದೆ. ಮುಂದೆ ನ್ಯಾಯಾಲಯದ ಮೆಟ್ಟಿಲು ಸಹ ಏರುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.

ಇದನ್ನೂ ಓದಿ
Image
ಕಂಡಕ್ಟರ್ ಆಗಿದ್ದಾಗಲೇ ರಜನಿಕಾಂತ್ ಸ್ಟೈಲಿಶ್​
Image
ಕನ್ನಡ ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪುಷ್ಪ ಚಿತ್ರದ ಸಂಗೀತ ಸಂಯೋಜಕ
Image
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
Image
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ರಶ್ಮಿಕಾ, ಧನುಶ್, ನಾಗಾರ್ಜುನ ಸಿನಿಮಾಕ್ಕೆ ಬಿಡುಗಡೆಗೆ ಮುಂಚೆಯೇ ಸಂಕಷ್ಟ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡು ನಿರ್ಮಾಪಕರ ಸಂಘವು ಧನುಶ್ ವಿರುದ್ಧ ನಿಷೇಧ ಹೇರಿತ್ತು. ಹಲವು ನಿರ್ಮಾಪಕರ ಬಳಿ ಅಡ್ವಾನ್ಸ್ ಹಣ ಪಡೆದುಕೊಂಡು ಸಿನಿಮಾ ಮಾಡಿಕೊಡದೇ ಇರುವ ಬಗ್ಗೆ ಕೆಲ ನಿರ್ಮಾಪಕರು ಸಂಘದ ಬಳಿ ದೂರು ನೀಡಿದ್ದರು. ಆಗ ಸಂಘವು ಧನುಶ್ ಗೆ ನಿಷೇಧ ಹೇರಿತ್ತು. ಬಳಿಕ ಧನುಶ್ ಹಾಗೂ ಇನ್ನೂ ಕೆಲವರು ಮಾತುಕತೆ ಮೂಲಕ ಸಂಧಾನ ಮಾಡಿಕೊಂಡಿದ್ದರು. ಆದರೆ ಈಗ ಮತ್ತೆ ವಿವಾದ ಭುಗಿಲೆದ್ದಿದೆ.

ಧನುಶ್ ಪ್ರಸ್ತುತ ‘ಕುಬೇರ’, ‘ಇಡ್ಲಿ ಕಡೈ’ ಹಿಂದಿಯ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಇಡ್ಲಿ ಕಡೈ’ ಮತ್ತು ‘ಕುಬೇರ’ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಇಡ್ಲಿ ಕಡೈ’ ಸಿನಿಮಾವನ್ನು ಸ್ವತಃ ಧನುಶ್ ನಿರ್ದೇಶನ ಮಾಡಿದ್ದಾರೆ. ‘ಕುಬೇರ’ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ, ನಾಗಾರ್ಜುನ ಸಹ ಸಿನಿಮಾದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ