ರಶ್ಮಿಕಾ ಮಂದಣ್ಣ ಯಶಸ್ಸಿನ ಓಟಕ್ಕೆ ಬ್ರೇಕ್; ಈ ವ್ಯಕ್ತಿಯಿಂದ ಸೋತಿತು ‘ಸಿಕಂದರ್’ ಸಿನಿಮಾ?
ರಶ್ಮಿಕಾ ಮಂದಣ್ಣ ಅವರ "ಸಿಕಂದರ್" ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಂತೆ ಯಶಸ್ಸು ಕಾಣದಿರುವುದು ನಿರ್ದೇಶಕ ಎ.ಆರ್. ಮುರುಗದಾಸ್ ಅವರ ನಿರ್ದೇಶನದ ಕೊರತೆಯಿಂದ ಎಂದು ಹಲವರು ಆರೋಪಿಸುತ್ತಿದ್ದಾರೆ. ಹೊಸ ಪ್ರೇಕ್ಷಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಮುರುಗದಾಸ್ ಅವರ ಹಳೆಯ ಶೈಲಿಯ ನಿರ್ದೇಶನವೇ ಸಿನಿಮಾದ ವೈಫಲ್ಯಕ್ಕೆ ಕಾರಣ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ‘ಅನಿಮಲ್’, ‘ಪುಷ್ಪ 2’, ‘ಛಾವಾ’ ಸಿನಿಮಾಗಳು ಹಿಟ್ ಆದವು. ಈ ಮೂಲಕ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡರು. ಈಗ ಇವರ ಯಶಸ್ಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. ‘ಸಿಕಂದರ್’ ಸೋಲಿಗೆ ಆ ಒಬ್ಬ ವ್ಯಕ್ತಿ ಕಾರಣ ಎನ್ನುವ ಆರೋಪಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಈ ಸೋಲಿಗೆ ಕಾರಣ ಆಗಿರೋದು ಯಾರು? ಅದು ಬೇರಾರೂ ಅಲ್ಲ ಚಿತ್ರದ ನಿರ್ದೇಶಕ ಎಆರ್ ಮುರುಗದಾಸ್.
ಎಆರ್ ಮುರುಗದಾಸ್ ಅವರು ‘ಘಜಿನಿ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಆಗಿನ ಕಾಲದಲ್ಲಿ ಪ್ರೇಕ್ಷಕರ ನಾಡಿ ಮಿಡಿತವನ್ನು ಸರಿಯಾಗಿ ತಿಳಿದುಕೊಂಡು ಅಂಥದ್ದೇ ಚಿತ್ರವನ್ನು ನೀಡಿದ್ದರು. ಇದು ಅವರ ಹೆಚ್ಚುಗಾರಿಕೆ ಆಗಿತ್ತು. ಆದರೆ ಈಗ? ಮುರುಗದಾಸ್ ಅವರು ಇತ್ತೀಚೆಗೆ ಹೊಸ ಟ್ರೆಂಡ್ನ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅದೇ ಹಳೆಯ ಮಸಾಲೆಯನ್ನು ಉಣ ಬಡಿಸಲು ಹೋಗಿ ಎಡವಿದ್ದಾರೆ.
ಅಟ್ಲಿ, ಸಂದೀಪ್ ರೆಡ್ಡಿ ವಂಗ ಸೇರಿದಂತೆ ಹೊಸ ಜನರೇಶನ್ ಡೈರೆಕ್ಟರ್ಗಳು ಈಗಿನ ಟ್ರೆಂಡ್ನ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ನೀಡುತ್ತಾ ಇದ್ದಾರೆ. ಆದರೆ, ಮುರುಗದಾಸ್ ಮಾತ್ರ ಈ ವಿಚಾರದಲ್ಲಿ ಬದಲಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ‘ಸಿಕಂದರ್’ನಲ್ಲಿ ಇರೋ ಹಳೆಯ ಕಾಲದ ಸ್ಟೋರಿ, ಮೇಕಿಂಗ್ ಸಿನಿಮಾ ಸೋಲಲು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. ಈ ಕಾರಣಕ್ಕೆ ಎಲ್ಲರೂ ಮುರುಗದಾಸ್ ಅವರನ್ನು ದೂಷಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಗೆಲುವು ಅನ್ನೋದು ಬೆಟ್ಟದ ಹೂವಾಗಿದೆ. ಏನೇ ಮಾಡಿದರೂ ಅವರಿಗೆ ಗೆಲುವು ಅನ್ನೋದು ಸಿಗುತ್ತಿಲ್ಲ. ದಕ್ಷಿಣದ ನಿರ್ದೇಶಕರ ಜೊತೆ ಸಿನಿಮಾ ಮಾಡಿದರೆ ಯಶಸ್ಸು ಕಾಣಬಹುದು ಎಂಬುದು ಅವರ ನಿರೀಕ್ಷೆ ಆಗಿತ್ತು. ಆದರೆ, ಆ ನಿರೀಕ್ಷೆಯೂ ಈಗ ಸುಳ್ಳಾಗಿದೆ.
ಇದನ್ನೂ ಓದಿ: ‘ಸಿಕಂದರ್’ ಗಳಿಕೆಯಲ್ಲಿ ಏರಿಕೆ; ಆದರೂ ನಿಂತಿಲ್ಲ ಸಲ್ಮಾನ್ ಖಾನ್ ಸಿನಿಮಾದ ಪರದಾಟ
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಮಾರ್ಚ್ 30ರಂದು ರಿಲೀಸ್ ಆಯಿತು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್ ಮೊದಲಾದವರು ನಟಿಸಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.