Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪತ್ನಿಯರ ಜತೆ ಈದ್ ಆಚರಿಸಿದ ಆಮಿರ್ ಖಾನ್; ಕಿರಣ್ ರಾವ್, ರೀನಾ ದತ್ತ ಫೋಟೋ ವೈರಲ್

ಮೂರನೇ ಮದುವೆಗೆ ಸಜ್ಜಾಗುತ್ತಿರುವ ಆಮಿರ್ ಖಾನ್ ಅವರು ಮಾಜಿ ಪತ್ನಿಯರ ಜೊತೆಗಿನ ಸಂಬಂಧವನ್ನು ಅಂತ್ಯಗೊಳಿಸಿಕೊಂಡಿಲ್ಲ. ಈಗಲೂ ಅವರು ಕುಟುಂಬದವರ ರೀತಿಯೇ ಇದ್ದಾರೆ. ಅದಕ್ಕೆ ಈ ವರ್ಷದ ರಂಜಾನ್ ಆಚರಣೆಯೇ ಸಾಕ್ಷಿ. ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಜೊತೆ ಸೇರಿ ಆಮಿರ್ ಖಾನ್ ಅವರು ಈದ್ ಆಚರಿಸಿದ್ದಾರೆ.

ಮಾಜಿ ಪತ್ನಿಯರ ಜತೆ ಈದ್ ಆಚರಿಸಿದ ಆಮಿರ್ ಖಾನ್; ಕಿರಣ್ ರಾವ್, ರೀನಾ ದತ್ತ ಫೋಟೋ ವೈರಲ್
Aamir Khan, Kiran Rao, Reena Dutta
Follow us
ಮದನ್​ ಕುಮಾರ್​
|

Updated on: Mar 31, 2025 | 10:53 PM

ನಟ ಆಮಿರ್ ಖಾನ್ (Aamir Khan) ಅವರ ಜೀವನ ಶೈಲಿ ಬಹಳ ಭಿನ್ನವಾಗಿದೆ. ಮಾಜಿ ಪತ್ನಿಯರಿಗೆ ಅವರು ವಿಚ್ಛೇದನ ನೀಡಿದ್ದರೂ ಕೂಡ ಅವರೊಂದಿಗಿನ ಆತ್ಮೀಯತೆಯನ್ನು ಇನ್ನೂ ಕಡಿದುಕೊಂಡಿಲ್ಲ. ವಿಶೇಷ ಸಂದರ್ಭಗಳಲ್ಲಿ ಅವರೆಲ್ಲ ಒಟ್ಟಿಗೆ ಸೇರುತ್ತಾರೆ. ದೂರ ದೂರ ವಾಸಿಸುತ್ತಿದ್ದರೂ ಸಹ ಅವರ ನಡುವೆ ಒಂದೇ ಕುಟುಂಬದವರ ರೀತಿ ಭಾವನೆ ಇದೆ. ಅದಕ್ಕೆ ಈಗ ಮತ್ತೆ ಸಾಕ್ಷಿ ಸಿಕ್ಕಿದೆ. ಇಂದು (ಮಾರ್ಚ್​ 31) ಆಮಿರ್ ಖಾನ್ ಮನೆಯಲ್ಲಿ ರಂಜಾನ್ ಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಮಾಜಿ ಪತ್ನಿಯರಾದ ಕಿರಣ್ ರಾವ್ (Kiran Rao) ಮತ್ತು ರೀನಾ ದತ್ತ (Reena Dutta) ಅವರು ಭಾಗಿಯಾಗಿದ್ದಾರೆ. ಈ ಫ್ಯಾಮಿಲಿಯ ಫೋಟೋಗಳು ವೈರಲ್ ಆಗಿವೆ.

1986ರಲ್ಲಿ ರೀನಾ ದತ್ತ ಜೊತೆ ಆಮಿರ್ ಖಾನ್ ಮದುವೆ ಆಗಿದ್ದರು. ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಜನಿಸಿದರು. 2002ರಲ್ಲಿ ರೀನಾ ದತ್ತಾಗೆ ಆಮಿರ್ ಖಾನ್ ವಿಚ್ಛೇದನ ನೀಡಿದರು. 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಜೊತೆ ಆಮಿರ್ ಖಾನ್ 2ನೇ ಮದುವೆ ಆದರು. 2021ರಲ್ಲಿ ಅವರಿಗೂ ವಿಚ್ಛೇದನ ನೀಡಿದರು. ಹಾಗಿದ್ದರೂ ಕೂಡ ಈ ಮಾಜಿ ಪತ್ನಿಯರ ಜೊತೆ ಆಮಿರ್ ಖಾನ್ ಇಂದಿಗೂ ಆತ್ಮೀಯವಾಗಿದ್ದಾರೆ.

ಮುಂಬೈನಲ್ಲಿ ಇರುವ ಆಮಿರ್ ಖಾನ್ ಅವರ ಮನೆಯಲ್ಲಿ ಈದ್ ಆಚರಣೆ ಮಾಡಲಾಗಿದೆ. ಕಿರಣ್ ರಾವ್, ರೀನಾ ದತ್ತಾ, ಜುನೈದ್ ಖಾನ್, ಆಜಾದ್ ರಾವ್ ಖಾನ್ ಮುಂತಾದವರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಆಮಿರ್ ಖಾನ್ ಅವರು ಮನೆಯ ಬಾಲ್ಕನಿಗೆ ಬಂದು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ವೈರಲ್ ಆದ ಫೋಟೋ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
Image
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
Image
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
Image
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಈಗ ಆಮಿರ್ ಖಾನ್ ಅವರ ಬಾಳಿನಲ್ಲಿ ಬೇರೆ ಮಹಿಳೆಯ ಪ್ರವೇಶ ಆಗಿದೆ ಎಂಬ ವಿಷಯ ಇತ್ತೀಚೆಗೆ ಬಹಿರಂಗ ಆಯಿತು. ಬೆಂಗಳೂರು ಮೂಲದ ಗೌರಿ ಎಂಬ ಮಹಿಳೆಯ ಜೊತೆ ಆಮಿರ್ ಖಾನ್ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಈ ವಿಷಯವನ್ನು ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಮೂರನೇ ವಿವಾಹಕ್ಕೆ ಅವರು ಸಜ್ಜಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮಾಜಿ ಪತ್ನಿಯರ ನಡುವೆಯೂ ಅವರು ಆಪ್ತವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಮಾಜಿ ಪತ್ನಿಯ ಸಿನಿಮಾಗೆ ಆಡಿಷನ್ ಕೊಟ್ಟು ಫೇಲ್ ಆದ ಆಮಿರ್ ಖಾನ್; ವಿಡಿಯೋ ವೈರಲ್

ಇನ್ನು, ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್ ಮುಂತಾದವರ ಮನೆಯಲ್ಲೂ ರಂಜಾನ್ ಸಡಗರ ಜೋರಾಗಿದೆ. ಮನೆ ಮುಂದೆ ಸೇರಿದ್ದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ