“ಆರೋಗ್ಯವೇ ಭಾಗ್ಯ” ಆ ಭಾಗ್ಯ ಪಡೆಯುವುದು ಹೇಗೆ? ಮತ್ತು ಏನು ಮಾಡಬೇಕು ಎಂದು ಯೋಚಿಸುತ್ತೀದ್ದೀರಾ. ನಾವು ಹೇಳುತ್ತೇವೆ ಕೇಳಿ. ಕೆಲವರು ಆರೋಗ್ಯವಾಗಿರಲು ಬೆಳಿಗ್ಗೆ ವಾಕಿಂಗ್, ಓಟ ಮತ್ತು ಯೋಗ ಮಾಡಲು ಯೋಚಿಸುತ್ತಾರೆ. ಆದರೆ ಇವತ್ತಲ್ಲ ಮರುದಿನ ಎಂದುಕೊಂಡು ಮತ್ತೆ ನಿದ್ದೆ ಮಾಡುತ್ತಾರೆ. ಆದರೆ ನಾವು ಆರೋಗ್ಯವಾಗಿರಬೇಕಾದರೆ ಪೌಷ್ಠಿಕ ಆಹಾರ ಮತ್ತು ವ್ಯಾಯಾಮವನ್ನು ಪ್ರತಿನಿತ್ಯ ತೆಗೆದುಕೊಳ್ಳಬೇಕು. ಆದರೆ ವ್ಯಾಯಾಮ ತುಂಬಾ ಸುಲಭವಾಗಿದ್ದು, ಏಕೆಂದರೆ ವೆಚ್ಚವೇ ಇಲ್ಲ. ಇದರಲ್ಲಿ ಜಿಮ್ಗಿಂತ ವಾಕಿಂಗ್ ಉತ್ತಮ ಆಯ್ಕೆ ಎಂದು ಹೇಳಬಹುದು. ದೈನಂದಿನ ನಡಿಗೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಜನರು ತಮ್ಮ ತೂಕವನ್ನು ನಿಯಂತ್ರಿಸಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಆಹಾರ ಕ್ರಮವನ್ನು ನಿಯಂತ್ರಿಸುವುದರಿಂದ ಮತ್ತು ಗಂಟೆಗಟ್ಟಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುವುದರಿಂದ ನೀವು ತೂಕವನ್ನು ಕಳೆದುಕೊಳ್ಳುವುದಿಲ್ಲ.
ಆದರೆ ಕೆಲವು ದಿನಗಳ ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರ ಜಿಮ್ನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ವ್ಯಾಯಾಮ ಮಾಡುವ ಅಗತ್ಯವಿಲ್ಲ. ನಿಯಮಿತವಾಗಿ ವಾಕಿಂಗ್ ಮಾಡುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ವಾಕಿಂಗ್ ಮಾಡುವುದರಿಂದ ತೂಕ ಹೇಗೆ ಕಡಿಮೆ ಆಗುತ್ತದೆ?
ನಿಯಮಿತವಾದ ನಡಿಗೆ ಕೂಡ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ವಾಕಿಂಗ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಜರ್ನಲ್ ಆಫ್ ಎಕ್ಸರ್ಸೈಸ್ ನ್ಯೂಟ್ರಿಷನ್ ಮತ್ತು ಬಯೋಕೆಮಿಸ್ಟ್ರಿಯಲ್ಲಿನ ಅಧ್ಯಯನದ ಪ್ರಕಾರ, ವಾಕಿಂಗ್ ದೇಹದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಿಯಮಿತ ನಡಿಗೆಯು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅವರ ಅಧ್ಯಯನದ ಪ್ರಕಾರ, ಮಹಿಳೆಯರು ವಾರದಲ್ಲಿ 3 ದಿನಗಳು 50-70 ನಿಮಿಷಗಳು ಒಟ್ಟು 12 ವಾರಗಳವರೆಗೆ ನಡೆಯಬೇಕು. ಈ ಅಧ್ಯಯನದ ನಂತರದ ಫಲಿತಾಂಶಗಳು ಸರಾಸರಿ 1.5% ದೇಹದ ಕೊಬ್ಬು ಮತ್ತು ಸೊಂಟದ ಸುತ್ತ 1.1 ಇಂಚುಗಳಷ್ಟು ಕೊಬ್ಬು ಕಂಡುಬಂದಿದೆ.
ನಡಿಗೆಯ ಪ್ರಯೋಜನಗಳು:
ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಲಾರೆನ್ಸ್ ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿ, ಲೈಫ್ ಸೈನ್ಸ್ ವಿಭಾಗದಲ್ಲಿ ನಡೆಸಿದ ಹೊಸ ಅಧ್ಯಯನದ ಪ್ರಕಾರ, ವೇಗದ ನಡಿಗೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ. ನಡಿಗೆಯಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸುತ್ತದೆ. ಬೊಜ್ಜು, ಹೃದಯ ಮತ್ತು ಮಧುಮೇಹ ಕಾಯಿಲೆಗಳನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಈ ರೋಗಗಳು ಬರುವ ಅಪಾಯ ಹೆಚ್ಚು. ಆದರೆ ನಡೆಯುವವರು ದಿನಕ್ಕೆ ಕನಿಷ್ಠ ಒಂದು ಗಂಟೆ ನಡೆಯಲು ಮೊದಲೇ ಯೋಜನೆ ಹಾಕಿಕೊಳ್ಳಬೇಕು. ಆಗ ಮಾತ್ರ ವಾಕಿಂಗ್‌ನಿಂದ ಆರೋಗ್ಯ ಪ್ರಯೋಜನಗಳು ಬರುತ್ತವೆ. ಒಂದೇ ಬಾರಿಗೆ ಒಂದು ಗಂಟೆ ನಡೆಯಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ ಮತ್ತು ಸಂಜೆ 30 ನಿಮಿಷಗಳ ಕಾಲ ಮಾಡಬಹುದು. ಈ ರೀತಿಯಾಗಿ, ವಾಕಿಂಗ್ನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.