ಕೊರೊನಾ ನಂತರ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ, ತಜ್ಞರು ಹೇಳುವುದೇನು?

Mental Health: ಕೊರೊನಾ ಸಾಂಕ್ರಾಮಿಕ ಮಹಾಮಾರಿಯಿಂದಾಗಿ ಆನ್‌ಲೈನ್ ತರಗತಿಗಳಿಗೆ ಗುಡ್​ ಬೈ ಹೇಳಿ, ಎರಡು ವರ್ಷಗಳ ವಿರಾಮದ ನಂತರ ದೇಶಾದ್ಯಂತ ಶಾಲೆಗಳು ಈ ವರ್ಷ ಪುನಃ ತೆರೆಯಲ್ಪಟ್ಟಿವೆ. ಆದರೆ, ಇದರ ಪರಿಣಾಮ ಇನ್ನೂ ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಶಿಕ್ಷಕರು ಮತ್ತು ಮನಃಶಾಸ್ತ್ರಜ್ಞರು.

ಕೊರೊನಾ ನಂತರ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ, ತಜ್ಞರು ಹೇಳುವುದೇನು?
ಕೊರೊನಾ ನಂತರ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ, ತಜ್ಞರು ಹೇಳುವುದೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 23, 2022 | 5:18 PM

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಕೊರೊನಾ ಸಾಂಕ್ರಾಮಿಕವು ಪ್ರಪಂಚದಾದ್ಯಂತ ಇಡೀ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿದೆ. ಕೋವಿಡ್ -19 ರ ಪ್ರಭಾವದಿಂದಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಕುಸಿತ ಕಾಣಲಾಗಿದೆ. COVID-19 ಸಾಂಕ್ರಾಮಿಕ ರೋಗದಿಂದಾಗಿ ಆನ್‌ಲೈನ್ ತರಗತಿಗಳಿಗೆ ಎರಡು ವರ್ಷಗಳ ವಿರಾಮದ ನಂತರ ದೇಶಾದ್ಯಂತ ಶಾಲೆಗಳು ಈ ವರ್ಷ ಪುನಃ ತೆರೆಯಲ್ಪಟ್ಟಿವೆ. ಆದರೆ, ಇದರ ಪರಿಣಾಮ ಇನ್ನೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಶಿಕ್ಷಕರು, ಮನಶಾಸ್ತ್ರಜ್ಞರು. ಕರೋನಾ ನಂತರ ಶಾಲೆಗೆ ಬರುವ ಮಕ್ಕಳು ಮಾನಸಿಕವಾಗಿ ಸದೃಢವಾಗಿಲ್ಲ. ಶಾಲೆಗೆ ಮರಳುವ ಮಕ್ಕಳು ಖಿನ್ನತೆ, ಆತಂಕ ಮತ್ತು ಭಾವನಾತ್ಮಕ ಯಾತನೆಯಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಯಿದೆ.

ವಿಶೇಷವಾಗಿ, ಸಾಂಕ್ರಾಮಿಕ ರೋಗದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡ ವಿದ್ಯಾರ್ಥಿಗಳಲ್ಲಿ ಇದು ಸಾಮಾನ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. COVID-19 ಸಾಂಕ್ರಾಮಿಕವು ಅನೇಕ ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಮತ್ತು ಮಕ್ಕಳು ಮತ್ತು ಹದಿಹರೆಯದವರಿಗೆ ಸಮಾನವಾಗಿ ಸವಾಲುಗಳನ್ನು ತಂದಿದೆ. ದುಃಖ, ಭಯ, ಅನಿಶ್ಚಿತತೆ ಮತ್ತು ಸಾಮಾಜಿಕ ಏಕಾಂಗಿತನ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಎಂದೆಂದಿಗೂ ಪ್ರೀತಿ ವಾತ್ಸಲ್ಯ, ಸ್ನೇಹ ಮತ್ತು ಕುಟುಂಬದ ಬೆಂಬಲವು ಮಕ್ಕಳಿಗೆ ಬಲವಾದ ಶಕ್ತಿಯಾಗಿದೆ. ಆದರೆ COVID-19 ಇದಕ್ಕೆ ಅಡ್ಡಿಪಡಿಸಿದೆ ಎಂದು UNICEF ಹೇಳಿದೆ.

“ಶಾಲೆಗಳು ಇಂತಹ ಮಕ್ಕಳಿಗೆ ಸಹಾನುಭೂತಿ, ಅನುಭೂತಿ, ಒತ್ತಡ ಮತ್ತು ಆತಂಕದ ಸಮಯದಲ್ಲಿ ಪರಸ್ಪರ ಬೆಂಬಲ ನೀಡುವಂತಹ ಶಿಕ್ಷಣ ನೀಡಬೇಕು. ಶಾಲೆಗೆ ಹೋಗುವ ಮಕ್ಕಳಲ್ಲಿ ಮನಸ್ಥಿತಿ ಬದಲಾವಣೆ ಮತ್ತು ಆತಂಕದ ಸಮಸ್ಯೆಯನ್ನು ತಡೆಯಲು ಯಾವುದೇ ನಿರ್ದಿಷ್ಟ ಕಾರ್ಯವಿಧಾನವಿಲ್ಲ. ಆದರೆ ಇತರರು ಅಂತಹ ಪ್ರತಿ ಮಗುವಿನ ಬಗ್ಗೆಯೂ ಸಹಾನುಭೂತಿ ತೋರಿಸಲು ಕಲಿಸುವುದು ಸಹಾಯ ಮಾಡುತ್ತದೆ ಎಂದು ಪುದುಚೇರಿ ಮೂಲದ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಪುಲ್ಕಿತ್ ಶರ್ಮಾ ಹೇಳಿದ್ದಾರೆ.

ಯುವಕರಲ್ಲಿ ಉದ್ವಿಗ್ನತೆ

ಇನ್ನು ಯುವಕ ಜನತೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಎಂದು ತಜ್ಞರು ಒತ್ತಿಹೇಳುತ್ತಾರೆ.ಈ ಆತಂಕಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಗಂಭೀರ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. “ಹಿಂದಿನ ಅಧ್ಯಯನಗಳು ಯುವಕರಲ್ಲಿ ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳ ಪ್ರಕರಣಗಳು ಅನೇಕ ಪಟ್ಟು ಹೆಚ್ಚಾಗಿದೆ ಎಂದು ಸೂಚಿಸಿವೆ – ಏಕಾಗ್ರತೆಯ ಕೊರತೆಯು ಮಗುವಿನ ಜೀವನದಲ್ಲಿ ಕಾಲಾಂತರದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಸಂಕೇತವಾಗಿದೆ.” ಅವರು ಹೇಳಿದರು.

ತಮ್ಮ ಜೀವನದಲ್ಲಿ ಎದುರಾಗಿರುವ ಅನಿಶ್ಚಿತತೆ ಮತ್ತು ಒತ್ತಡವು ಮಕ್ಕಳ ಆತಂಕಗಳನ್ನು ಶಾಂತಗೊಳಿಸಲು ಪೋಷಕರಿಗೆ ಕಷ್ಟಕರವಾಗಿಸುತ್ತಿದೆ. ಪೋಷಕರು ಎದುರಿಸುವ ವೃತ್ತಿಪರ ಅಥವಾ ಭಾವನಾತ್ಮಕ ಸವಾಲುಗಳು ತಮ್ಮ ಮಕ್ಕಳ ಅಗತ್ಯತೆಗಳು ಮತ್ತು ಕಾಳಜಿಗಳನ್ನು ಪರಿಹರಿಸುವ ಅವರ ಸಾಮಾನ್ಯ ಸಾಮರ್ಥ್ಯದೊಂದಿಗೆ ಹಸ್ತಕ್ಷೇಪ ಮಾಡಬಹುದು.

ದೇಶಾದ್ಯಂತ ಶಾಲೆಗಳಲ್ಲಿ ಸಾಮಾಜಿಕ ಭಾವನಾತ್ಮಕ ಕಲಿಕೆಯ ಕಾರ್ಯಕ್ರಮಗಳು ಮತ್ತು ಸಮಾಲೋಚನೆ ಅವಧಿಗಳನ್ನು ಪರಿಚಯಿಸುವ ಬಗ್ಗೆ ಬಹಳಷ್ಟು ಹೇಳಬೇಕಾಗಿದೆ. ಈ ಸ್ಥಿತಿಗೆ ಸಂವೇದನಾಶೀಲವಾಗುವ ಅವಶ್ಯಕತೆಯಿದೆ ಎಂದು ತಜ್ಞರು ಹೇಳುತ್ತಾರೆ ಮತ್ತು ಪೀಡಿತ ಮಕ್ಕಳನ್ನು ಸಹಜ ಜೀವನಕ್ಕೆ ಮತ್ತು ಹೊರಗಿನ ಪ್ರಪಂಚಕ್ಕೆ ತರಲು ಕನಿಷ್ಠ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

NCERT ವಿಧಾನಗಳು..

ಇತ್ತೀಚೆಗೆ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಶಾಲಾ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ಅನುಸರಿಸಿ ಶಾಲೆಗೆ ಹೋಗುವ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು ಮತ್ತು ಸಮಾಲೋಚನೆಗಳಿಗಾಗಿ ಕೆಲವು ಮಾರ್ಗಸೂಚಿಗಳನ್ನು ಪರಿಚಯಿಸಿದೆ.

“ಶಾಲೆಗಳು ಆರೋಗ್ಯಕರ, ಸುರಕ್ಷಿತ ವಾತಾವರಣದಲ್ಲಿ ಸಾಮಾನ್ಯವಾಗಿ ಶಿಕ್ಷಣ ಹೊಂದುವ ಸ್ಥಳಗಳಾಗಿವೆ. ಶಾಲಾ ಆಡಳಿತ, ಪ್ರಾಂಶುಪಾಲರು, ಶಿಕ್ಷಕರು, ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎಲ್ಲರೂ ದಿನದ ಮೂರನೇ ಒಂದು ಭಾಗವನ್ನು ಶಾಲೆಗಳಲ್ಲಿ ಕಳೆಯುತ್ತಾರೆ. ಶಾಲೆಗಳು ವರ್ಷಕ್ಕೆ ಸರಿಸುಮಾರು 220 ದಿನಗಳಷ್ಟು ಕಾರ್ಯನಿರ್ವಹಿಸುತ್ತವೆ. ವಸತಿ ಶಾಲೆಗಳು ಇನ್ನೂ ಹೆಚ್ಚಿನ ವಿದ್ಯಾರ್ಥಿ ಸಮಯವನ್ನು ಹೊಂದಿವೆ. ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಎಲ್ಲಾ ಮಕ್ಕಳ ಸುರಕ್ಷತೆ, ಕಲಿಕೆ, ಆರೋಗ್ಯ, ಪೌಷ್ಟಿಕತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಶಾಲೆಗಳ ಜವಾಬ್ದಾರಿ ಎಂದು NCERT ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

To read more in Telugu click here

Published On - 5:17 pm, Fri, 23 September 22