Chikkaballapur: ನಾಟಿ ಅಣಬೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಹೈಬ್ರೀಡ್ ಯಾರಿಗೂ ಬೇಡ, ನಾಟಿಗೇ ಮಣೆ ಈಗ!
local mushroom: ಪಕ್ಕಾ ಹಳ್ಳಿಯ ರೈತರು ಸ್ವಾಭಾವಿಕವಾಗಿ ಬೆಳೆದ ನಾಟಿ ಅಣಬೆಯನ್ನು ಬಕೇಟ್, ಬುಟ್ಟಿ, ಚೀಲಗಳಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಸೀರೆ ಇಲ್ಲವೇ ಹಳೆಬಟ್ಟೆಯನ್ನು ಹಾಸಿ ಅದರ ಮೇಲೆ ರಾಶಿ-ರಾಶಿ ಗುಡ್ಡೆ ಮಾಂಸದ ರೀತಿಯಲ್ಲಿ ಅಣಬೆಗಳನ್ನು ಪೇರಿಸಿಟ್ಟು ಮಾರಾಟ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ : ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (chikkaballapur) ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿ, ರೇಷ್ಮೆ ಸೇರಿದಂತೆ ಕೃಷಿ ಬೆಳೆಗಳು ಹಾಳಾಗಿ ಕೆಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮತ್ತೊಂದಡೆ ಅದೇ ಮಳೆಯ ಅವಕಾಶ ಪಡೆದುಕೊಂಡ ಅಣಬೆಗಳು, ಯಥೇಚ್ಛವಾಗಿ ಅಕ್ಷರಶಃ ನಾಯಿಕೊಡೆಗಳಂತೆ ( local mushroom) ಮೈದುಂಬಿ ಬೆಳೆದು, ಅಣಬೆ ಮಾರಾಟಗಾರರಿಗೆ ಸುವರ್ಣಾವಕಾಶ ಸಿಗುವಂತೆ ಮಾಡಿದೆ!
ಚಿಕ್ಕಬಳ್ಳಾಪುರದಲ್ಲಿ ಎಲ್ಲೆಲ್ಲೂ ನಾಟಿ ಅಣಬೆಯದ್ಧೇ ಹವಾ..
ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಇರುವ ಅಜ್ಜವರ ಅರಣ್ಯಪ್ರದೇಶ, ಸಾಂಬರ್‌ಗಿಡ ಕಾವಲು, ಸೂಲಾಲಪ್ಪನದಿನ್ನೆ ಸೇರಿದಂತೆ ಪಂಚಗಿರಿಗಳ ಅರಣ್ಯ ಸಾಲಿನಲ್ಲಿ ಮರದ ಕೆಳಗೆ ಯಥೇಚ್ಛವಾಗಿ ಅಣಬೆಗಳು ಬೆಳೆದು ನಿಂತಿವೆ. ಇದನ್ನು ಗಮನಿಸಿದ ಸ್ಥಳೀಯ ಕೆಲ ರೈತರು ಅಣಬೆಗಳನ್ನು ಕಿತ್ತುಕೊಂಡು ಬಂದು, ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಎದುರು ಸೇರಿದಂತೆ ವಿವಿಧಡೆ ಅಣಬೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಗುಡ್ಡೆಮಾಂಸದ ರೀತಿಯಲ್ಲಿ ಅಣಬೆಗಳ ಮಾರಾಟ!
ಪಕ್ಕಾ ಹಳ್ಳಿಯ ರೈತರು ಸ್ವಾಭಾವಿಕವಾಗಿ ಬೆಳೆದ ನಾಟಿ ಅಣಬೆಯನ್ನು ಬಕೇಟ್, ಬುಟ್ಟಿ, ಚೀಲಗಳಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಸೀರೆ ಇಲ್ಲವೇ ಹಳೆಬಟ್ಟೆಯನ್ನು ಹಾಸಿ ಅದರ ಮೇಲೆ ರಾಶಿ-ರಾಶಿ ಗುಡ್ಡೆ ಮಾಂಸದ ರೀತಿಯಲ್ಲಿ ಅಣಬೆಗಳನ್ನು ಪೇರಿಸಿಟ್ಟು ಮಾರಾಟ ಮಾಡುತ್ತಿದ್ದಾರೆ. ಕೆಜಿ/ ಗ್ರಾಂಗಳ ಬದಲು ಗುಡ್ಡೆಗುಡ್ಡೆಯಾಗಿ ಮಾರಾಟ ಮಾಡುತ್ತಿದ್ದಾರೆ. ತಲಾ ಗುಡ್ಡೆ ಅಣಬೆಗೆ 50-80 ರೂಪಾಯಿಯವರೆಗೂ ಮಾರಾಟ ಮಾಡುತ್ತಿದ್ದಾರೆ. ಇನ್ನು ಹೈಬ್ರೀಡ್ ಅಣಬೆಗಳನ್ನು ತಿಂದು ಬಾಯಿ ಸಪ್ಪೆ ಮಾಡಿಕೊಂಡಿದ್ದ ಅಣಬೆ ಪ್ರಿಯರು ಇದೀಗ ನಾಟಿ ಅಣಬೆಯನ್ನು ಚಪ್ಪರಿಸುತ್ತಿದ್ದಾರೆ.
ಅಣಬೆಯಲ್ಲಿ ಏನೆಲ್ಲಾ ಮಾಡಬಹುದು
ಅಣಬೆಯಿಂದ ಪಲ್ಯ, ಸಾಂಬಾರು, ಅಣಬೆ ಪಲಾವ್, ಅಣಬೆ ಬೋಂಡಾ ಸೇರಿದಂತೆ ಇತರೆ ಖಾದ್ಯಗಳನ್ನು ತಯಾರಿಸಬಹುದು. – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಪುರ