ನಾನು ಕಾನೂನು ಓದಿದ್ದೇನೆ ಆದ್ರೆ ಬೊಮ್ಮಾಯಿ ಕಾನೂನು ಓದಿಲ್ಲ, ಕ್ರಮಕ್ಕೆ ಮುಂದಾದ್ರೆ ನಾವು ಸುಮ್ಮನಿರ್ತಿವಾ? ಮಾಜಿ ಸಿಎಂ ಸಿದ್ಧರಾಮಯ್ಯ

ಕಾಂಗ್ರೆಸ್​ನಿಂದ ಲಿಂಗಾಯತ ಸಮುದಾಯದ ಸಿಎಂ ಟಾರ್ಗೆಟ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ನಮಗೆ ಎಲ್ಲಾ ಜಾತಿಯವರು ಒಂದೇ. ಜಾತಿ ವ್ಯವಸ್ಥೆ ಸರಿ ಮಾಡುವವರೆಗೂ ಸಮಾಜ ಉದ್ದಾರ ಆಗಲ್ಲ.

ನಾನು ಕಾನೂನು ಓದಿದ್ದೇನೆ ಆದ್ರೆ ಬೊಮ್ಮಾಯಿ ಕಾನೂನು ಓದಿಲ್ಲ, ಕ್ರಮಕ್ಕೆ ಮುಂದಾದ್ರೆ ನಾವು ಸುಮ್ಮನಿರ್ತಿವಾ? ಮಾಜಿ ಸಿಎಂ ಸಿದ್ಧರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 24, 2022 | 5:53 PM

ಚಿಕ್ಕಬಳ್ಳಾಪುರ: ನಾನು ಕಾನೂನು ಓದಿದ್ದೇನೆ ಆದ್ರೆ ಬೊಮ್ಮಾಯಿ ಕಾನೂನು ಓದಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಆಗಲ್ಲ. ಕಾನೂನು ಕ್ರಮಕ್ಕೆ ಮುಂದಾದ್ರೆ ನಾವು ಸುಮ್ಮನಿರ್ತಿವಾ ಎಂದು ಗೌರಿಬಿದನೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದರು. ಪ್ರಗತಿಪರ ಚಿಂತಕ ಪ್ರೋ.ಗಂಗಾಧರಮೂರ್ತಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಕಾಂಗ್ರೆಸ್​ನಿಂದ ಲಿಂಗಾಯತ ಸಮುದಾಯದ ಸಿಎಂ ಟಾರ್ಗೆಟ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ನಮಗೆ ಎಲ್ಲಾ ಜಾತಿಯವರು ಒಂದೇ. ಜಾತಿ ವ್ಯವಸ್ಥೆ ಸರಿ ಮಾಡುವವರೆಗೂ ಸಮಾಜ ಉದ್ದಾರ ಆಗಲ್ಲ. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಕಸ ಸೇರುವಂತೆ ಮತ್ತೆ ಮತ್ತೆ ಸೇರುತ್ತದೆ. ಬಸವಣ್ಣನವರ ವಚನ ಹೇಳುವುದಕ್ಕೆ ಇದೆ ಆದ್ರೆ ಸಮಾಜದಲ್ಲಿ ಬದಲಾವಣೆ ಆಗಿಲ್ಲ. ಸಾಮಾಜಿಕವಾಗಿ ಮುಂದುವರೆದವರಿಗೆ ಮೀಸಲಾತಿ ನೀಡುವ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರ ಮಾಡಿದೆ, ಅದಕ್ಕೆ ಪಲಾಯನ ಮಾಡುತ್ತಿದ್ದಾರೆ: ಸಿದ್ಧರಾಮಯ್ಯ

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಭಟನೆ ಚಳುವಳಿ ಸ್ವಾತಂತ್ರ್ಯ ಕಿತ್ತುಕೊಳ್ಳಲು ಆಗಲ್ಲ ಎಂದು ಹೇಳಿದರು. 40% ಕಮಿಷನ್​ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. 1 ವರ್ಷ ಕಳೆದರೂ ಸಿಎಂ ಬೊಮ್ಮಾಯಿ ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ. ಇವರ ಬಣ್ಣ ಬಯಲಾಗುತ್ತೆ ಎಂದು ಈವರೆಗೆ ಕ್ರಮ ಕೈಗೊಂಡಿಲ್ಲ. ಕೆಂಪಣ್ಣ ವಿರುದ್ಧ ಬೊಮ್ಮಾಯಿ ಕ್ರಮಕೈಗೊಳ್ಳಲಿ ನೋಡೋಣ. ಬಿಜೆಪಿಯವರು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಅವರು ತಪ್ಪು ಮಾಡಿದ್ದಾರೆ, ಅದಕ್ಕಾಗಿಯೇ ಪಲಾಯನ ಮಾಡಿದ್ದಾರೆ. ಅಧಿವೇಶನದಲ್ಲಿ 40 ಪರ್ಸೆಂಟ್ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಬಡವರ ರಕ್ತ ಕುಡಿಯುವುದೇ ಬಿಜೆಪಿ ಸಾಧನೆ.

ಸಿದ್ದರಾಮಯ್ಯನವರ ಕೊಲೆಗೆ ಸ್ಕೆಚ್​ ಹಾಕಿದ್ರು: ನಿಡುಮಾಮಿಡಿ ಶ್ರೀ

ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು  ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಗೌರಿಬಿದನೂರಿನಲ್ಲಿ ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮೀಜಿ ಹೇಳಿದ್ದಾರೆ. ಗೌರಿಬಿದನೂರಿನ ಸಮಾನತಾ ಸೌಧದಲ್ಲಿ ನಡೆದ ಪ್ರಗತಿಪರ ಚಿಂತಕ ಪ್ರೋ. ಗಂಗಾಧರಮೂರ್ತಿ  ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ಯಾಸಿಸ್ಟ್ ಸಂಸ್ಕೃತಿಯ ಜನರು ಸಂಶೋಧಕ ಡಾ. ಎಂ.ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶರ್​ರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ಇನ್ನೂ ಹಲವರ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಜೀವ ಕಾಯುವುದಕ್ಕೆ ಮೇಲೆ ಇದ್ದಾನೆ ಎಂದು ಹೇಳಿದರು.

ಜಾತಿ ತಾರತಮ್ಯ ತೊಡೆದು ಹಾಕಲು ಮುಂದಾಗಿದ್ದಕ್ಕೆ ನನ್ನನ್ನೆ ಬಹಿಷ್ಕಾರ ಹಾಕಿದರು. 1991ರಲ್ಲಿ ದೇವಾಲಯದಲ್ಲಿ ಅರ್ಚಕನನ್ನು ನೇಮಕ ಮಾಡಿದ್ದಕ್ಕೆ ಬಹಿಷ್ಕಾರ ಹಾಕಿದರು. ಜನರ ಬದಲಾವಣೆಯನ್ನು ಮತವಾಗಿ ಬದಲಾಯಿಸಿ. ನೀವು ಹೇಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತೀರಿ ಅನ್ನೊದು ನಿಮ್ಮ ಮೇಲೆ ನಿಂತಿದೆ. ಸಿದ್ದರಾಮಯ್ಯ ನಾಡಿನ ಮುಂದಿನ ಆಶಾ ಕಿರಣ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್