ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?

ಬೇಕಾದ ಮಾಹಿತಿ, ಬೇಕಾದ ದಾಖಲೆಗಳನ್ನು ಪಡೆದು, ನಂತರ ಛೇಂಬರ್ ನಲ್ಲಿದ್ದ ಚಿಕ್ಕಬಳ್ಳಾಪುರ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಬಳಿ ಹೋದ ನಕಲಿ ಅಧಿಕಾರಿಗಳು... ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯನ್ನು ಮಾತನಾಡಿಸಿದ್ದಾರೆ. ಆ ವೇಳೆ ತಹಶೀಲ್ದಾರ್ ಗೆ ಅನುಮಾನ ಬಂದಿದೆ.

ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?
ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 23, 2022 | 4:05 PM

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ಕೊಟ್ಟಿದ್ದೆ ತಡ, ಎಸಿಬಿ ಹೆಸರಿನಲ್ಲಿ ವಂಚನೆ ಮೋಸ ಮಾಡ್ತಿದ್ದ ಕೆಲವು ಕಿರಾತಕರು ಸಹ, ಈಗ ಲೋಕಾಯುಕ್ತ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ತಹಶೀಲ್ದರ್ ಕಚೇರಿಯೊಂದಕ್ಕೆ ಹೋಗಿ ತಾವು ಲೋಕಾಯುಕ್ತ ಅಧಿಕಾರಿಗಳು. ಆ ಕಡತ ಪರಿಶೀಲನೆ ಮಾಡಬೇಕು- ಈ ಕಡತ ಪರಿಶೀಲನೆ ಮಾಡಬೇಕು. ಅವರನ್ನು ತನಿಖೆ ಮಾಡಬೇಕು -ಇವರನ್ನು ತನಿಖೆ ಮಾಡಬೇಕು.. ಅಂತೆಲ್ಲಾ ಬಿಲ್ಡಪ್ ಮೇಲೆ ಬಿಲ್ಡಪ್ ಕೊಟ್ಟು… ಕೊನೆಗೆ ಬಂದಿದ್ದವರು ನಕಲಿಗಳು ಅಂತಾ ಪತ್ತೆ ಹಚ್ಚುತ್ತಿದ್ದಂತೆ ಆತ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ಓದಿ.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ವ್ಯಕ್ತಿಯೊರ್ವ, ತಾನು ಲೋಕಾಯುಕ್ತ ಇನ್ಸ್​ಪೆಕ್ಟರ್… ತನ್ನ ಜೊತೆ ಇರುವವರು ತಮ್ಮ ಸಿಬ್ಬಂದಿ ಅಂತ ಪರಿಚಯ ಮಾಡಿಕೊಂಡು… ತಮಗೆ ಅರ್ಜೆಂಟಾಗಿ ಜಮೀನೊಂದರ ಒರಿಜಿನಲ್ ದಾಖಲೆಗಳು ಬೇಕು, ಅದಕ್ಕೆ ಸಂಬಂಧಿಸಿದ ತನಿಖೆ ಮಾಡಬೇಕು ಸರ್ವೆಯರ್ ಎಲ್ಲಿ? ತಹಶೀಲ್ದಾರ್ ಎಲ್ಲಿ? ಕೇಸ್ ವರ್ಕರ್ ಎಲ್ಲಿ? ಅಂತಾ ಬಿಲ್ಡಪ್ ಕೊಟ್ಟು, ರೆಕಾರ್ಡ ರೂಮ್ ನಲ್ಲಿ ದಾಖಲೆಗಳನ್ನು ಪಡೆದಿದ್ದಾನೆ. ನಂತರ ಎಲ್ಲೊ ಹಳ್ಳಿಯಲ್ಲಿದ್ದ ಸರ್ವೆ ಸೂಪರ್ ವೈಜರ್ ಗಳು, ಎದ್ನೊ ಬಿದ್ನೊ ಅಂತ ಕಚೇರಿಗೆ ಓಡೊಡಿ ಬಂದು ದಾಖಲೆಗಳನ್ನು ನೀಡಿ ಕಚೇರಿಗೆ ಬಂದ ವ್ಯಕ್ತಿಗೆ ಜ್ಯೂಸ್ ಕುಡಿಸಿ ಸಮಧಾನ ಮಾಡಿ ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ಆದ್ರೆ ಕೊನೆಗೆ ಗೊತ್ತಾಗಿದ್ದು ಲೋಕಾಯುಕ್ತ ಅಧಿಕಾರಿಗಳು ಅಂತಾ ಬಂದಿದ್ದವರು ನಕಲಿ ಅಧಿಕಾರಿಗಳು ಅಂತಾ!

ಬೇಕಾದ ಮಾಹಿತಿ, ಬೇಕಾದ ದಾಖಲೆಗಳನ್ನು ಪಡೆದು, ನಂತರ ಛೇಂಬರ್ ನಲ್ಲಿದ್ದ ಚಿಕ್ಕಬಳ್ಳಾಪುರ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಬಳಿ ಹೋದ ನಕಲಿ ಅಧಿಕಾರಿಗಳು… ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯನ್ನು ಮಾತನಾಡಿಸಿದ್ದಾರೆ. ಇದ್ರಿಂದ ಅನುಮಾನಗೊಂಡ ತಹಶೀಲ್ದಾರ್… ಲೋಕಾಯುಕ್ತ ಐಡಿ ತೋರಿಸಿ, ಹಿರಿಯ ಅಧಿಕಾರಿಗಳ ಪತ್ರ ತೋರಿಸಿ ಅಂತ ಕೇಳಿದಾಗ ತಬ್ಬಿಬ್ಬು ಆಗಿ, ತಡಬಡಾಯಿಸುತ್ತಾ… ಕಚೇರಿಯಿಂದ ಎಸ್ಕೇಪ್ ಆಗಿದ್ದಾರೆ! ಇದೀಗ ನಕಲಿ ಅಧಿಕಾರಿಗಳ ಚಲನವಲನ, ಎಸ್ಕೇಪ್ ಆಗುವ ದೃಶ್ಯ ಎಲ್ಲವೂ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇದ್ರಿಂದ ಚಿಕ್ಕಬಳ್ಳಾಫುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ದೂರು ದಾಖಲು ಮಾಡಿದ್ದಾರೆ.

ಸರ್ಕಾರಿ ಕಚೇರಿಗಳು, ಸರ್ಕಾರಿ ಅಧಿಕಾರಿಗಳ ಬಳಿ ಹೋಗಿ ತಾವು ಎಸಿಬಿ ಅಧಿಕಾರಿಗಳು ಅಂತ ಪುಂಗಿ ಬಿಟ್ಟು ಎಸಿಬಿ ಹೆಸರಿನಲ್ಲಿ ವಂಚನೆ ಮಾಡ್ತಿದ್ದ ಕೆಲವು ಖದೀಮರು ಈಗ ಎಸಿಬಿ ಬದಲು ಮತ್ತೆ ಲೋಕಾಯುಕ್ತ ಹೆಸರಿನಲ್ಲಿ ವಂಚನೆ ಇಳಿದಿದ್ದಾರೆ. ಅಸಲಿ ಅಧಿಕಾರಿಗಳು ನಕಲಿ ವ್ಯಕ್ತಿಗಳಿಂದ ಹುಷಾರಾಗಿ ಇರಬೇಕಿದೆ -ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

Published On - 4:03 pm, Fri, 23 September 22