ವಾಲ್ನಟ್ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬ ಆತಂಕ ಬಿಡಿ.. ನಿಯಮಿತವಾಗಿ ಸೇವಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
ವಾಲ್ನಟ್ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪೋಷಕಾಂಶಗಳು ಯಥೇಚ್ಛವಾಗಿವೆ. ಹೀಗೆ ಕೊಬ್ಬು ಇದ್ದರೂ ಕೂಡ ತೂಕವನ್ನು ಹೆಚ್ಚಿಸುವುದಿಲ್ಲ. ಕಾರಣ ಇದರಲ್ಲಿರುವ ಒಮೆಗಾ -3 ಫ್ಯಾಟಿ ಆ್ಯಸಿಡ್ ಮತ್ತು ನಾರಿನ ಅಂಶಗಳು.
ಉತ್ತಮ ಆರೋಗ್ಯ ಹೊಂದಲು ಫ್ರೂಟ್ಗಳಷ್ಟೇ ಅಲ್ಲ, ನಟ್ಸ್ಗಳೂ ಸಹಕಾರಿ. ನಟ್ಸ್ಗಳು ಪೋಷಕಾಂಶಗಳ ಆಗರ. ಹಾಗೇ ಕ್ಯಾಲರಿಗಳ ಪ್ರಮಾಣವೂ ಅಧಿಕವಾಗಿರುತ್ತದೆ. ಒಳ್ಳೆಯ ಕೊಬ್ಬನ್ನೂ ಹೊಂದಿರುತ್ತವೆ. ಹೀಗಾಗಿ ನಿಯಮಿತವಾಗಿ ನಟ್ಸ್ಗಳ ಸೇವನೆಯಿಂದ ಹಲವು ಕಾಯಿಲೆಗಳಿಂದ ದೂರ ಇರಬಹುದು..ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿ ಒಂದಾದ ವಾಲ್ನಟ್ಗಳ ಸೇವನೆಯಿಂದ ಏನೇನು ಅನುಕೂಲವಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ವಾಲ್ನಟ್ಗಳು ವರ್ಷದ ಎಲ್ಲ ಸೀಸನ್ಗಳಲ್ಲೂ ಸಿಗುತ್ತವೆ. ಅವನ್ನು ಚೆನ್ನಾಗಿ ಪ್ಯಾಕ್ ಮಾಡಿಟ್ಟರೆ ಕೆಡುವುದಿಲ್ಲ. ವಾಲ್ನಟ್ನ್ನು ಹಾಗೆಯೇ ತಿನ್ನಬಹುದು. ಇನ್ನು ವಾಲ್ನಟ್ ಕೇಕ್, ಬರ್ಫಿ, ಮಿಠಾಯಿ, ಹಲ್ವಾದಂಥ ತಿಂಡಿಯನ್ನೂ ತಯಾರಿಸಿ, ಸವಿಯಬಹುದು. ಇನ್ನು ಒಣದ್ರಾಕ್ಷಿ, ಬಾದಾಮಿಗಳಂತೆ ವಾಲ್ನಟ್ನ್ನೂ ಕೂಡ ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆಯೂ ತಿನ್ನಬಹುದು. ಆದರೆ ಕೆಲವರಿಗೆ ವಾಲ್ನಟ್ ಇಷ್ಟವಿದ್ದರೂ ತಿನ್ನಲು ಹಿಂದೇಟು ಹಾಕುತ್ತಾರೆ. ಇದರ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ವಾಲ್ನಟ್ಗಳಿಂದ ತೂಕ ಹೆಚ್ಚುವುದಿಲ್ಲ.
ವಾಲ್ನಟ್ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪೋಷಕಾಂಶಗಳು ಯಥೇಚ್ಛವಾಗಿವೆ. ಹೀಗೆ ಕೊಬ್ಬು ಇದ್ದರೂ ಕೂಡ ತೂಕವನ್ನು ಹೆಚ್ಚಿಸುವುದಿಲ್ಲ. ಕಾರಣ ಇದರಲ್ಲಿರುವ ಒಮೆಗಾ -3 ಫ್ಯಾಟಿ ಆ್ಯಸಿಡ್ ಮತ್ತು ನಾರಿನ ಅಂಶಗಳು. ಇದರ ನಿಯಮಿತ ಸೇವನೆಯಿಂದ ಚಯಾಪಚಯ ಪ್ರಕ್ರಿಯೆ ಸರಾಗವಾಗಿ ಆಗುತ್ತದೆ. ಮಧುಮೇಹ, ಬೊಜ್ಜು ಮತ್ತು ಹೃದಯಸಂಬಂಧಿ ಕಾಯಿಲೆಗಳಿಂದಲೂ ನಮ್ಮನ್ನು ಪಾರು ಮಾಡುತ್ತದೆ.
ಏನೇನೆಲ್ಲ ಅನುಕೂಲಗಳು? ಹೃದಯದ ಆರೋಗ್ಯಕ್ಕೆ ಒಳ್ಳೆಯದು: ವಾಲ್ನಟ್ನಲ್ಲಿರುವ ಉತ್ತಮ ಕೊಬ್ಬುಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ಗಳನ್ನು ನಿಯಂತ್ರಿಸುತ್ತವೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ದೂರ ಇರಬಹುದು.
ಜೀರ್ಣಕ್ರಿಯೆಗೆ ಸಹಕಾರಿ: ವಾಲ್ನಟ್ ನಾರಿನ ಅಂಶ ಹೊಂದಿದ್ದು, ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಾಗೇ ಇದರಲ್ಲಿರುವ ವಿಟಮಿನ್ ಇ ಮತ್ತು ಒಮೆಗಾ 3 ಫ್ಯಾಟಿ ಆ್ಯಸಿಡ್ಗಳು ಮಿದುಳಿನ ಆರೋಗ್ಯಕ್ಕೂ ತುಂಬ ಒಳ್ಳೆಯದು.
ಅಲರ್ಜಿಯುಂಟಾಗಬಹುದು ಎಚ್ಚರ ! ವಾಲ್ನಟ್ ಸೇವನೆಯಿಂದ ಅನೇಕ ಉಪಯೋಗಗಳು ಇವೆ. ಹಾಗಂತ ತುಂಬ ತಿನ್ನಬಾರದು. ಇನ್ನು ಕೆಲವರಿಗೆ ಇದು ಅಲರ್ಜಿಯನ್ನೂ ಉಂಟು ಮಾಡಬಹುದು. ಹಾಗಾಗಿ ನಿಮ್ಮ ದೇಹಕ್ಕೆ ಹೊಂದುತ್ತದೆಯೋ ಎಂಬುದನ್ನು ನೋಡಿಕೊಂಡು, ಹಿತಮಿತವಾಗಿ ಸೇವಿಸಿ.
ಇದನ್ನೂ ಓದಿ: Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..