ಗ್ಯಾಸ್ಟ್ರಿಕ್​ ಹೇಳಿಕೊಳ್ಳಲಾಗದ ಸಂಕಟ; ತೊಂದರೆಗೆ ಇಲ್ಲಿದೆ ಪರಿಹಾರ!

ಹೇಳಿಕೊಳ್ಳಲು ನಾಚಿಕೆ, ಹೇಳದೇ ಇದ್ದರೆ ಸಂಕಟ ಎಂಬಂತಹ ಪರಿಸ್ಥಿತಿ ಎದುರಾಗುವುದು ಗ್ಯಾಸ್​ ಟ್ರಬಲ್​ ಅಥವಾ ಗ್ಯಾಸ್ಟ್ರಿಕ್​ನಿಂದ. ಹಾಗಿದ್ದಲ್ಲಿ ಇದಕ್ಕೆ ಪರಿಹಾರ ಮದ್ದು ಏನು? ನಿಜವಾಗಿಯೂ ಗ್ಯಾಸ್ಟ್ರಿಕ್​ ಟ್ರಬಲ್​ ಅಂದರೆ ಏನು? ಎಂಬುದರ ಕುರಿತು ತಿಳಿಯೋಣ.

ಗ್ಯಾಸ್ಟ್ರಿಕ್​ ಹೇಳಿಕೊಳ್ಳಲಾಗದ ಸಂಕಟ; ತೊಂದರೆಗೆ ಇಲ್ಲಿದೆ ಪರಿಹಾರ!
ಪ್ರಾತಿನಿಧಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Mar 17, 2021 | 6:48 AM

ಗ್ಯಾಸ್ ಟ್ರಬಲ್ ಅಥವಾ ಗ್ಯಾಸ್ಟ್ರಿಕ್​ ಎಂಬುದು ಎಲ್ಲರಿಗೆ ಚಿರಪರಿಚಿತ. ಎಲ್ಲರೂ ಗ್ಯಾಸ್​ ಟ್ರಬಲ್​ ಬಾಧೆಯಿಂದ ಬಳಲಿಯೇ ಇರುತ್ತೇವೆ. ಹೇಳಿಕೊಳ್ಳಲು ನಾಚಿಕೆ, ಹೇಳದೇ ಇದ್ದರೆ ಸಂಕಟ ಎಂಬಂತಹ ಪರಿಸ್ಥಿತಿ ಎದುರಾಗುವುದು ಗ್ಯಾಸ್​ ಟ್ರಬಲ್​ ಅಥವಾ ಗ್ಯಾಸ್ಟ್ರಿಕ್​ನಿಂದ. ಹಾಗಿದ್ದಲ್ಲಿ ಇದಕ್ಕೆ ಪರಿಹಾರ ಮದ್ದು ಏನು? ನಿಜವಾಗಿಯೂ ಗ್ಯಾಸ್ಟ್ರಿಕ್​ ಟ್ರಬಲ್​ ಅಂದರೆ ಏನು? ಎಂಬುದರ ಕುರಿತು ತಿಳಿಯೋಣ.

ನಾವು ಊಟ ಮಾಡುವಾಗ, ಕುಡಿಯುವಾಗ ಅಥವಾ ಉಗುಳುವಾಗ ನಮ್ಮ ದೇಹದ ಒಳಗೆ ಗಾಳಿಯು ಪ್ರವೇಶಿಸುತ್ತದೆ. ಅಥವಾ ಹೊರಗೆ ಹೋಗುತ್ತದೆ. ದೇಹದಲ್ಲಿ ಪ್ರವೇಶಿಸಿದ ಗಾಳಿ ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಹೊಟ್ಟೆಗೆ ಹೋದ ಆಹಾರ ಜೀರ್ಣವಾಗದಿದ್ದಾಗ, ಗ್ಯಾಸ್ಟ್ರಿಕ್​ ಉಂಟಾಗುತ್ತದೆ. ಸಣ್ಣ ಕರುಳಿನಲ್ಲಿ ಸರಿಯಾಗಿ ಜೀರ್ಣವಾಗದ ಆಹಾರ ದೊಡ್ಡ ಕರುಳಿನಲ್ಲಿ ಅನಿಲವನ್ನು(ಗ್ಯಾಸ್​) ಉತ್ಪತ್ತಿ ಮಾಡುತ್ತದೆ.

ಸಾಮಾನ್ಯವಾಗಿ ದೇಹದಲ್ಲಿ ನಾರಿನ ಪದಾರ್ಥಗಳು ಗ್ಯಾಸ್​ ಉತ್ಪತ್ತಿ ಮಾಡುತ್ತವೆ. ಎಲೆಕೋಸು, ಹೂಕೋಸು, ಗೆಡ್ಡೆಗೆಣಸು, ದ್ವಿದಳ ಧಾನ್ಯಗಳು, ಹಾಲು, ತುಪ್ಪ, ಎಣ್ಣೆ ಈ ರೀತಿಯ ಪದಾರ್ಥಗಳನ್ನು ಅತಿಯಾಗಿ ಸೇವಿಸಬಾರದು. ದೇಹದಲ್ಲಿ ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುವ ಪದಾರ್ಥಗಳು ಇವಾಗಿವೆ. ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಗ್ಯಾಸ್ಟ್ರಿಕ್​ ತೊಂದರೆ ಉಂಟಾಗುತ್ತದೆ.

ಗ್ಯಾಸ್ಟ್ರಿಕ್​ನಿಂದ ಬಳಲುತ್ತಿರುವವರು ಗಮನಿಸಲೇಬೇಕಾದ ಅಂಶಗಳು * ಗ್ಯಾಸ್​ ಉತ್ಪತ್ತಿ ಮಾಡುವ ಆಹಾರ ಪದಾರ್ಥವನ್ನು ಕಡಿಮೆ ಸೇವಿಸುವುದು. * ಸಮಯಕ್ಕೆ ಸರಿಯಾಗಿ ಪ್ರತಿನಿತ್ಯ ಆಹಾರ ಸೇವಿಸುವುದು. * ಊಟ ಮಾಡುವಾಗ ಆಹಾರವನ್ನು ಚೆನ್ನಾಗಿ ಅಗೆದು ನುಂಗಬೇಕು ಮತ್ತು ನಿಧಾನವಾಗಿ ಊಟ ಮಾಡಬೇಕು. * ಧೂಮಪಾನದಿಂದ ದೂರವಿರಿ. ಧೂಮಪಾನವು ಜೀರ್ಣಾಂಗ ವ್ಯವಸ್ಥೆಗೆ ಹಾನಿಗೊಳಿಸುತ್ತದೆ. * ದ್ವಿದಳ ಧಾನ್ಯವನ್ನು ಸರಿಯಾಗಿ ನೀರಿನಲ್ಲಿ ನೆನೆಸಿ ನಂತರ ಸಿಪ್ಪೆ ಸುಲಿದು ಸೇವಿಸಬೇಕು. ಇದರಿಂದ ಗ್ಯಾಸ್​ ಉತ್ಪತ್ತಿ ಮಾಡುವ ಪ್ರಮಾಣವನ್ನು ಕಡಿಮೆ ಮಾಡಬಹುದು. * ಪ್ರತಿ ನಿತ್ಯ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಆಹಾರ ಸೇವಿಸಿದ ತಕ್ಷಣ ಮಲಗುವುದು ಅಥವಾ ಕುಳಿತುಕೊಳ್ಳುವುದರಿಂದ ಆಹಾರ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್​ ತೊಂದರೆ ಉಂಟಾಗುತ್ತದೆ. ಹಾಗಾಗಿ ಪ್ರತಿನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುವುದು ಉತ್ತಮ. * ಹೆಚ್ಚು ಮಸಾಲೆ ಪದಾರ್ಥದಿಂದ ದೂರವಿರಿ. ಇದರಿಂದ ಆರೋಗ್ಯವೂ ಚೆನ್ನಾಗಿರುವುದರ ಜೊತೆಗೆ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ತಪ್ಪಿಸಬಹುದು. * ಹೆಚ್ಚು ಚಹ ಕಾಫಿಯನ್ನು ಕುಡಿಯಬೇಡಿ. * ಮದ್ಯಪಾನ ಸೇವಿಸದಿರಿ.

ಗ್ಯಾಸ್ಟ್ರಿಕ್​ ಪರಿಹಾರಕ್ಕೆ ಮನೆಮದ್ದು ಓಮಕಾಳು: ಸಾಮಾನ್ಯವಾಗಿ ಅಡುಗೆಯಲ್ಲಿ ಓಮಕಾಳನ್ನು ಬಳಸುತ್ತೇವೆ. ಪದಾರ್ಥದಲ್ಲಿ ರುಚಿ ಸವಿಯಲು ಓಮಕಾಳನ್ನು ಬಳಸುತ್ತೇವೆ. ಹಾಗೆಯೇ ಗ್ಯಾಸ್ಟ್ರಿಕ್​ ಸಮಸ್ಯೆ ಪರಿಹಾರವಾಗಿಯೂ ಓಮಕಾಳನ್ನು ಬಳಸಲಾಗುತ್ತದೆ. ಒಂದು ಲೋಟ ನೀರಿಗೆ ಅರ್ಧ ಚಮಚ ಓಮಕಾಳನ್ನು ಹಾಕಿ, ಒಂದೆರಡು ಪುದೀನಾ ಎಲೆ ಹಾಗಿ ಚೆನ್ನಾಗಿ ಕುದಿಸಿ. ನಂತರ ಸಿದ್ಧಗೊಂಡ ಕಷಾಯವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್​ ಕಡಿಮೆ ಮಾಡಿಕೊಳ್ಳಬಹುದು.

ಜೀರಿಗೆ: ಜೀರಿಗೆ ಲಾಲಾರಸದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗೂ ಜೀರಿಗೆ, ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ. ಹೊಟ್ಟೆ ನೋವು, ಎದೆ ಉರಿಯಂತಹ ಸಮಸ್ಯೆಗೆ ಜೀರಿಗೆಯನ್ನು ಸೇವಿಸುತ್ತಾರೆ.

ಇಂಗು: ಗ್ಯಾಸ್​ ಉತ್ಪಾದನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಇಂಗು ನಾಶಪಡಿಸುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ಚೂರೇ ಚೂರು ಇಂಗಿನಕಾಳನ್ನು ಹಾಕಿ, ನೀರನ್ನು ಕುಡಿಯುವುದರಿಂದ ಗ್ಯಾಸ್​ ಉತ್ಪಾದನೆ ಕಡಿಮೆ ಮಾಡಬಹುದು.

ಶುಂಠಿ: ಸಾಮಾನ್ಯವಾಗಿ ಅಡುಗೆಯಲ್ಲಿ ಹೆಚ್ಚು ಶುಂಠಿಯನ್ನು ಬಳಸುತ್ತಾರೆ. ಶುಂಠಿ ಆರೋಗ್ಯಕ್ಕೆ ಉತ್ತಮವೂ ಹೌದು. ತಲೆ ನೋವು ಕಾಣಿಸಿಕೊಂಡಾಗ ಶುಂಠಿಯನ್ನು ತೇಯ್ದು(ಪೇಸ್ಟ್​) ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್​ ಸಮಸ್ಯೆಗೂ ಶುಂಠಿ ಒಳ್ಳೆಯ ಮದ್ದಾಗಿದ್ದು, ಶುಂಠಿ ಚೂರನ್ನು ನೀರಿನಲ್ಲಿ ಹಾಕಿ ಅದನ್ನು ಕುಡಿಯುವುದರಿಂದ ಗ್ಯಾಸ್​​ ಟ್ರಬಲ್​ನಿಂದ ಪರಿಹಾರ ಕಂಡುಕೊಳ್ಳಬಹುದು. ಇಲ್ಲವೇ, ಶುಂಠಿ ಚೂರಿಗೆ ಸ್ವಲ್ಪ ಉಪ್ಪು ಜೊತೆಗೆ ಲಿಂಬು ರಸ ಸೇವಿಸುವುದರಿಂದ ಹೊಟ್ಟೆನೋವು, ಗ್ಯಾಸ್ಟ್​ ಟ್ರಬಲ್​ಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಹೊಟ್ಟೆ ಕೆಟ್ಟರೆ ಎಷ್ಟು ಕಷ್ಟ! ಕರುಳಿನ ಆರೋಗ್ಯ ಚೆನ್ನಾಗಿರಲು ಈ ನಿಯಮಗಳನ್ನು ಪಾಲಿಸಿ..

ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್