
ವಾಲ್ನಟ್ ಮತ್ತು ಬಾದಾಮಿ ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ದವಾಗಿದೆ. ಆದರೂ ಕೂಡ ಇವು ಕೆಲವೊಂದು ವಿಷಯಗಳಲ್ಲಿ ಸ್ವಲ್ಪ ಭಿನ್ನವಾಗಿದೆ. ಇವೆರಡೂ ಪೋಷಕಾಂಶಗಳ ಸಾಂದ್ರತೆಯಲ್ಲಿ ಸಮಾನವಾಗಿದ್ದರೂ ಅವುಗಳ ರಚನೆಯಲ್ಲಿ ವ್ಯತ್ಯಾಸಗಳಿವೆ. ವಾಲ್ನಟ್ಗಳು ಅಗತ್ಯ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ ಇವು ಮೆದುಳಿಗೆ ತುಂಬಾ ಒಳ್ಳೆಯದು. ವಾಲ್ನಟ್ನಲ್ಲಿ ವಿಟಮಿನ್ ಇ ಕಡಿಮೆ ಇದೆ. ಇನ್ನು ಬಾದಾಮಿಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಹೆಚ್ಚು ಮೆಗ್ನೀಸಿಯಮ್ ಅಂಶವಿದ್ದು ಇದು ಮೆದುಳಿನ ಕೋಶಗಳ ರಕ್ಷಣೆ ಮಾಡುತ್ತದೆ. ಹಾಗಾದರೆ ಮೆದುಳಿನ ಆರೋಗ್ಯ ಕಾಪಾಡಲು ಯಾವುದರ ಸೇವನೆ ಮಾಡಬೇಕು? ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಬಾದಾಮಿಯಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬುಗಳು ಕಡಿಮೆ ಇದ್ದರೂ, ವಾಲ್ನಟ್ಗಳಲ್ಲಿ ಆರೋಗ್ಯಕರ ಪಾಲಿಅನ್ಸಾಚುರೇಟೆಡ್ ಕೊಬ್ಬುಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇವೆರಡೂ ಒಟ್ಟಾರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಾಲ್ನಟ್ಗಳು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದಲ್ಲದೆ ವಾಲ್ನಟ್ನಲ್ಲಿ ಒಮೆಗಾ -3 ಗಳು ಹೆಚ್ಚಾಗಿರುತ್ತವೆ. ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ವಾಲ್ನಟ್ ಹೆಚ್ಚಿನ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ಗಳನ್ನು ಒದಗಿಸುತ್ತವೆ. ಅಲ್ಲದೆ ವಾಲ್ನಟ್ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ರಾತ್ರಿ ಊಟ ತಡವಾಗಿ ಮಾಡುತ್ತಿದ್ದರೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು
ವಾಲ್ನಟ್ನಲ್ಲಿರುವ ಪಾಲಿಫಿನಾಲ್ಗಳು ಮತ್ತು ಆರೋಗ್ಯಕರ ಕೊಬ್ಬುಗಳು ನರಕೋಶಗಳ ಕಾರ್ಯನಿರ್ವಹಣೆ ಮತ್ತು ಸಂವಹನವನ್ನು ಬೆಂಬಲಿಸುತ್ತವೆ. ಆದ್ದರಿಂದ, ಸ್ಮರಣೆ ಮತ್ತು ಮೆದುಳಿನ ಕಾರ್ಯ ಚಟುವಟಿಕೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಬಾದಾಮಿ ಏಕೆ ಒಳ್ಳೆಯದು?
ವಾಲ್ನಟ್ ಮತ್ತು ಬಾದಾಮಿ ಎರಡೂ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ವಾಲ್ನಟ್ಗಳು ಹೆಚ್ಚಿನ ಮಟ್ಟದ ಒಮೆಗಾ -3, ಉತ್ಕರ್ಷಣ ನಿರೋಧಕಗಳು ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರ ಹೊರತಾಗಿಯೂ ಇವೆರಡನ್ನೂ ದಿನನಿತ್ಯ ಸೇವನೆ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆಗೆ ಅಗತ್ಯವಾಗಿ ಬೇಕಾಗುವ ಮಿಶ್ರ ಪೌಷ್ಠಿಕಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಮೆದುಳನ್ನು ತೀಕ್ಷ್ಣವಾಗಿ ಮತ್ತು ಆರೋಗ್ಯಕರವಾಗಿಡಲು ಒಟ್ಟಾರೆ ಆರೋಗ್ಯಕರ ಆಹಾರದ ಭಾಗವಾಗಿ ಪ್ರತಿದಿನ ವಾಲ್ನಟ್ ಮತ್ತು ಬಾದಾಮಿಯನ್ನು ಸೇವಿಸುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Wed, 12 February 25