ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು
ನಿಮ್ಮ ಬಾಯಿ ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ದಂತ ಲೇಸರ್ಸ್‌ನ MD, ಡಾ. ಗುಣಿತಾ ಸಿಂಗ್ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಹಲ್ಲುಜ್ಜುವುದು, ಫ್ಲಾಸ್ಸಿಂಗ್, ಬಾಯಿ ತೊಳೆಯುವುದು ಮತ್ತು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ಈ ಹಣ್ಣುಗಳು ಕೂಡ ನಿಮ್ಮ ಹಲ್ಲು ಮತ್ತು ಬಾಯಿಯನ್ನು ಸ್ವಚ್ಛವಾಗಿರಿಸುತ್ತದೆ. ಅವುಗಳು ಯಾವುವು ಇಲ್ಲಿದೆ ನೋಡಿ.
Updated on: Feb 11, 2025 | 4:45 PM

ನಮ್ಮ ದೈಹಿಕ ಆರೋಗ್ಯ, ಮನಸ್ಥಿತಿ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಉತ್ತಮ ಆಹಾರವು ನಮ್ಮ ಮನಸ್ಸನ್ನು ಪೋಷಿಸುತ್ತದೆ. ಜತೆಗೆ ನಮ್ಮ ಬಾಯಿ ರುಚಿಯನ್ನು ನೀಡಿ ಸಂತೋಷಗೊಳಿಸುತ್ತದೆ. ಕೆಲವು ಆಹಾರಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುವುದರಿಂದ ಬಾಯಿಯ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸಬಹುದು.

ದಿನಕ್ಕೆ ಒಂದು ಸೇಬನ್ನು ತಿಂದರೆ ಅದು ನೈಸರ್ಗಿಕ ಹಲ್ಲುಜ್ಜುವ ಬ್ರಷ್ ಎಂದು ಕರೆಯುತ್ತಾರೆ. ಏಕೆಂದರೆ ಅದು ಹಲ್ಲುಜ್ಜುವ ಬ್ರಷ್ನಷ್ಟೇ ಪರಿಣಾಮಕಾರಿ. ಇದು ಹಲ್ಲಿನಲ್ಲಿ ಉಂಟಾಗುವ ಹುಳು ತಿನ್ನುವುದು ಅಥವಾ ಕುಳಿ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬಾಯಿಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿ ಕೂಡ ನಿಮ್ಮ ಹಲ್ಲಿನ ಆರೋಗ್ಯಕ್ಕೆ ಉತ್ತಮ

ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಖನಿಜಗಳಿಂದ ತುಂಬಿರುವ ಬಾಳೆಹಣ್ಣು ಆರೋಗ್ಯಕ್ಕೆ ಮತ್ತು ಹಲ್ಲುಗಳಿಗೆ ಪ್ರಯೋಜನಕಾರಿ. ಊಟದ ನಂತರ ಮನೆಯಲ್ಲಿ ತಯಾರಿಸಿದ ಪುದೀನ ಹಸಿರು ಚಹಾವನ್ನು ಕುಡಿಯುವುದರಿಂದ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಉಸಿರಾಟವನ್ನು ತಾಜಾಗೊಳಿಸಲು ಮತ್ತು ಬಾಯಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಸಿಹಿ ಗೆಣಸು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಹಲ್ಲಿನ ದಂತಕವಚವನ್ನು ರಕ್ಷಿಸುತ್ತದೆ. ಹಾಗೂ ಹಲ್ಲುಗಳು ಬಳಿ ಇರುವಂತೆ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ವಿಶೇಷವಾಗಿ ಪಾಲಕ್, ವಿಟಮಿನ್ ಎ, ಬಿ2 ಮತ್ತು ಬಿ12 ಗಳಿಂದ ತುಂಬಿರುತ್ತದೆ, ಇದು ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ನೀಡುತ್ತದೆ. ಈ ಆಹಾರಗಳ ಜೊತೆಗೆ, ಚಳಿಗಾಲದ ಕೆಲವು ಆರೈಕೆ ಸಲಹೆಗಳನ್ನು ಅನುಸರಿಸುವುದು ಬಾಯಿಯ ಆರೋಗ್ಯವನ್ನು ರಕ್ಷಿಸಲು ಅತ್ಯಗತ್ಯ.

ನಿಮ್ಮ ಹಲ್ಲುಗಳನ್ನು ತಂಪಾದ ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ತೀವ್ರ ಶೀತದಲ್ಲಿ ಹೊರಗೆ ಹೋಗುವಾಗ, ನಿಮ್ಮ ಹಲ್ಲುಗಳನ್ನು ರಕ್ಷಿಸಲು, ಉಷ್ಣತೆ ಮತ್ತು ತೇವಾಂಶವನ್ನು ಒದಗಿಸಲು ಮತ್ತು ಬಾಯಿ ಒಣಗದಂತೆ ತಡೆಯಲು ಟೂತ್ ಗಾರ್ಡ್ ಧರಿಸಿ. ಇದು ಲಾಲಾರಸವನ್ನು ಕಡಿಮೆ ಮಾಡುತ್ತದೆ ಮತ್ತು ಹಲ್ಲು ಕುಳಿಗಳ ಅಪಾಯವನ್ನು ಹೆಚ್ಚಿಸುತ್ತದೆ.



















