Weight Loss: ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳುವುದರಿಂದ ನೀವು ದಪ್ಪವಾಗುತ್ತೀರಾ?
ನೀವು ಡಯಟ್ ಮಾಡುತ್ತಿರುವಾಗ, ಕಾರ್ಡಿಯೊವನ್ನು ಬಿಟ್ಟುಬಿಡುವುದು ಉತ್ತಮ ಆದರೆ ನಿಮ್ಮ ಸ್ನಾಯುಗಳು ಸಕ್ರಿಯವಾಗಿರಲು ಸ್ಟ್ರೆಂತ್ ಮತ್ತು ರೆಸಿಸ್ಟನ್ಸ ತರಬೇತಿಯನ್ನು ಪಡೆಯಿರಿ, ಇದರಿಂದ ನೀವು ನಿಮ್ಮ ಸ್ನಾಯುಗಳು ಇಳಿಕೆಯಾಗದಂತೆ ತಡೆಯಬಹುದು
ದೇಹದ ತೂಕ ಕಳೆದುಕೊಳ್ಳಲು ನೀವು ವ್ಯಾಯಾಮ ಮಾಡದೆ ಕಟ್ಟುನಿಟ್ಟಾದ ಡಯಟ್ ಅನ್ನು ಅನುಸರಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಇದನ್ನು ಓದಲೇ ಬೇಕು! ಕೇವಲ ಆಹಾರವನ್ನು ನಿಯಂತ್ರಿಸಿ ಯಾವುದೇ ವ್ಯಾಯಾಮ ಮಾಡದೆ ತೂಕವನ್ನು ಇಳಿಸಿದರೆ ನಿಮ್ಮ ದೇಹದ ತೂಕ ಇಳಿಯುವುದರ ಬದಲು ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಹೌದು, ತೂಕ ಇಳಿಕೆಯ ಹಿಂದಿನ ವಿಜ್ಞಾನವನ್ನು ವಿವರಿಸುತ್ತಾ, ಸಾಮಾಜಿಕ ಮಾಧ್ಯಮದಲ್ಲಿ ಡಾ. ಸಿದ್ಧಾಂತ್ ಭಾರ್ಗವ “ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳುವುದು ನಿಮ್ಮನ್ನು ದಪ್ಪವಾಗಿಸುತ್ತದೆ”. ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಂ ವೀಡಿಯೊದಲ್ಲಿ, ನೀವು ತೂಕವನ್ನು ಕಳೆದುಕೊಳ್ಳುತ್ತಿರುವಾಗ ಅಥವಾ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ, ಸಂಪೂರ್ಣವಾಗಿ ಕೊಬ್ಬನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ನೀವು ಸ್ವಲ್ಪ ಕೊಬ್ಬು, ಕೆಲವು ಸ್ನಾಯುಗಳು ಮತ್ತು ಕೆಲವು ನೀರಿನ ಧಾರಣವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಒಟ್ಟು ಕ್ಯಾಲೋರಿ ಇಳಿಕೆಯು ಕಡಿಮೆ ತಿನ್ನುವ ಮೂಲಕ ಮಾತ್ರ ಸೃಷ್ಟಿಯಾ್ದರೆ ನೀವು ನಿಮ್ಮ ದೇಹಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತೀರಿ, ”ಎಂದು ಡಾ. ಸಿದ್ಧಾಂತ್ ವಿವರಿಸಿದರು.
ಇದರ ಕುರಿತು ಮಾತನಾಡುತ್ತ ಡಾ. ಸಿದ್ಧಾಂತ್, “ನೀವು ಕ್ಯಾಲೋರಿ ಇಳಿಸುತ್ತಿರುವಾಗ, ನಿಮ್ಮ ದೇಹವು ಸ್ನಾಯುಗಳನ್ನು ಕರಗಿಸುತ್ತದೆ. ನಿಮ್ಮ ಸ್ನಾಯುವಿನ ದ್ರವ್ಯರಾಶಿ (muscle mass) ಕಡಿಮೆಯಾದರೆ, ನಿಮ್ಮ ಚಯಾಪಚಯ ದರವು (metabolic rate) ನಿಧಾನಗೊಳ್ಳುತ್ತದೆ. ನಿಮ್ಮ ಚಯಾಪಚಯ ದರವು ನಿಧಾನಗೊಂಡರೆ, ನೀವು ಬೇಗನೆ ತೂಕ ಇಳಿಸುತ್ತಿದ್ದೀರಿ ಎಂದು ನೀವು ಅಂದುಕೊಳ್ಳಬಹುದು ಆದರೆ ನಂತರ ನೀವು ಕೆಲವು ಬಾರಿ ಹೆಚ್ಚು ಆಹಾರ ಸೇವಿಸಿದರೂ ಸಾಕು ನಿಮ್ಮ ದೇಹದ ತೂಕ ಕೂಡಲೇ ಜಾಸ್ತಿಯಾಗುತ್ತದೆ.” ಎಂದರು
ತೂಕ ನಷ್ಟ ಸಮಸ್ಥಿತಿ (weight-loss plateau) ಎಂದರೆ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವ ಪ್ರತಿಯೊಬ್ಬರೂ ಅಂತಿಮವಾಗಿ ತೂಕ ನಷ್ಟ ಸಮಸ್ಥಿತಿಯನ್ನು ತಲುಪುತ್ತಾರೆ. ಹೆಚ್ಚಿನ ಜನ ಇದನ್ನು ನಂಬಲಾಗದೆ ನಂತರವೂ ಆರೋಗ್ಯಕರ ಆಹಾರ ತಿನ್ನುತ್ತಾ, ವ್ಯಾಯಾಮ ಮಾಡುವುದನ್ನು ಮುಂದುವರಿಸುತ್ತಾರೆ.
ತೂಕ ನಷ್ಟದ ಸಮಸ್ಥಿತಿಯನ್ನು ತಲುಪಲು ಡಾ. ಭಾರ್ಗವ ಅವರು ಕೆಲವು ಟಿಪ್ಸ್ ಅನ್ನು ಹಂಚಿಕೊಂಡಿದ್ದಾರೆ. ಶಕ್ತಿ ತರಬೇತಿಯ ಕಡೆ ಗಮನ ಹರಿಸಿ, ನೀವು ಡಯಟ್ ಮಾಡುತ್ತಿರುವಾಗ, ಕಾರ್ಡಿಯೊವನ್ನು ಬಿಟ್ಟುಬಿಡುವುದು ಉತ್ತಮ ಆದರೆ ನಿಮ್ಮ ಸ್ನಾಯುಗಳು ಸಕ್ರಿಯವಾಗಿರಲು ಸ್ಟ್ರೆಂತ್ ಮತ್ತು ರೆಸಿಸ್ಟನ್ಸ ತರಬೇತಿಯನ್ನು ಪಡೆಯಿರಿ, ಇದರಿಂದ ನೀವು ನಿಮ್ಮ ಸ್ನಾಯುಗಳು ಇಳಿಕೆಯಾಗದಂತೆ ತಡೆಯಬಹುದು”. ಈ ಮೂಲಕ ತೂಕ ಇಳಿದರೆ ನೀವು ಮತ್ತೆ ತೂಕ ಏರಿಕೆಯಾಗುವ ಸಂಭವ ಕಡಿಮೆ ಇರುತ್ತದೆ.