ತೂಕ ಇಳಿಸಿಕೊಳ್ಳುವುದು ಖಂಡಿತ ಸುಲಭ ಅಲ್ಲ. ಸರಿಯಾದ ವ್ಯಾಯಾಮ, ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಮಾತ್ರ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಇದಕ್ಕೆ ನಿಮ್ಮ ಮಾನಸಿಕ ಬದ್ಧತೆಯೂ ಅಗತ್ಯ. ಹೊಟ್ಟೆಯ ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಪ್ರತಿಯೊಬ್ಬರೂ ಜಿಮ್‌ಗೆ ಹೋಗಲು ಸಾಧ್ಯವಿಲ್ಲ. ತೂಕ ಇಳಿಸಿಕೊಳ್ಳಲು ವ್ಯಾಯಾಮ ಅತ್ಯಗತ್ಯ. ಹೀಗಾಗಿ, ಮನೆಯಲ್ಲೇ ಸುಲಭವಾಗಿ ಮಾಡುವ ಕೆಲವು ವ್ಯಾಯಾಮಗಳ ಮೂಲಕ ನಿಮ್ಮ ದೇಹದ ಬೊಜ್ಜನ್ನು ಕರಗಿಸುವುದು ಹೇಗೆಂಬ ಬಗ್ಗೆ ಮಾಹಿತಿ ಇಲ್ಲಿದೆ.
ದೇಹದ ಕೊಬ್ಬನ್ನು ಕಡಿಮೆ ಮಾಡಲು ಮನೆಯಲ್ಲಿ ಪ್ರಯತ್ನಿಸಬಹುದಾದ 5 ಅತ್ಯುತ್ತಮ ವ್ಯಾಯಾಮಗಳಿವು…
ಜಂಪಿಂಗ್ ಜ್ಯಾಕ್ಸ್:
ಇದು ನಿಮ್ಮ ದೇಹದ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ಸ್ನಾಯುಗಳ ಬಲವನ್ನು ಹೆಚ್ಚಿಸಲು, ಹೊಟ್ಟೆ ಮತ್ತು ತೋಳಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೂದಿಕುಂಬಳಕಾಯಿ ಜ್ಯೂಸ್ ಕುಡಿದರೆ ಬೊಜ್ಜು ಕರಗುವುದರಲ್ಲಿ ಅನುಮಾನವೇ ಇಲ್ಲ!
ಸ್ಪಾಟ್ ರನ್ನಿಂಗ್:
ಓಡುವುದರಿಂದ ನಮ್ಮ ದೇಹಕ್ಕೆ ಪರಿಣಾಮಕಾರಿಯಾದ ಪೂರ್ಣ ಪ್ರಮಾಣದ ವ್ಯಾಯಾಮ ಸಿಗುತ್ತದೆ. ಎಲ್ಲ ಅಂಗಗಳೂ ಆ್ಯಕ್ಟಿವ್ ಆಗುತ್ತದೆ. ಇದು ನಿಮ್ಮ ಕಾಲುಗಳು, ನಿಮ್ಮ ದೇಹದ ಮೇಲಿನ ಭಾಗದ ಸ್ನಾಯುಗಳನ್ನು ಆರಾಮದಾಯಕವಾದ ವೇಗದಿಂದ ಪ್ರಾರಂಭಿಸಿ, ನಂತರ ಆ ಸ್ಪೀಡ್ ಅನ್ನು ಹೆಚ್ಚಿಸುತ್ತಾ ಹೋಗಿ.
ಜಂಪಿಂಗ್ ರೋಪ್:
ಜಂಪಿಂಗ್ ರೋಪ್ ಕ್ಯಾಲೊರಿಗಳನ್ನು ಬರ್ನ್ ಮಾಡಲು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ನೀವು ಬ್ಯಾಲೆನ್ಸ್ ಮಾಡುವಾಗ ಇದು ನಿಮ್ಮ ಕಾಲುಗಳು ಮತ್ತು ತೋಳುಗಳಿಗೆ ವ್ಯಾಯಾಮ ನೀಡುತ್ತದೆ. ಜೊತೆಗೆ, ಇದು ಹೆಚ್ಚು ಪೋರ್ಟಬಲ್ ಆಗಿದ್ದು, ಇದನ್ನು ಎಲ್ಲಿ ಬೇಕಾದರೂ ಮಾಡಬಹುದು.
ಬರ್ಪಿ:
ಬರ್ಪೀಸ್ ಮಾಡುವುದರಿಂದ ನಿಮ್ಮ ಸ್ನಾಯುಗಳಿಗೆ ಸರಿಯಾದ ವ್ಯಾಯಾಮ ಸಿಗುತ್ತದೆ. ಇದು ಸ್ಕ್ವಾಟ್‌ಗಳು, ಪುಷ್ ಅಪ್ ಮತ್ತು ಜಿಗಿತಗಳನ್ನು ಒಳಗೊಂಡಿರುತ್ತದೆ. ತೂಕ ಇಳಿಸಿಕೊಳ್ಳಲು ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ದ್ರಾಕ್ಷಿ ತಿಂದರೆ ತೂಕ ಕಡಿಮೆಯಾಗುತ್ತಾ?; ಈ ರೀತಿ ಮಾಡಿ ನೋಡಿ
ಪ್ಲ್ಯಾಂಕ್ ಮತ್ತು ಲಂಗಸ್:
ಕ್ಯಾಲೊರಿಗಳನ್ನು ಬರ್ನ್ ಮಾಡಲು ಉತ್ತಮ ಕಾರ್ಡಿಯೋ ವ್ಯಾಯಾಮ ಇದಾಗಿದೆ. ನೆನಪಿಡಿ, ವ್ಯಾಯಾಮದ ಮೂಲಕ ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ನೀವು ಗಟ್ಟಿ ಮನಸು ಮಾಡಬೇಕಾದುದು ಮತ್ತು ಬದ್ಧತೆಯಿಂದ ದಿನವೂ ವ್ಯಾಯಾಮ ಮಾಡಬೇಕಾದುದು ಕೂಡ ಬಹಳ ಮುಖ್ಯ. ನೀವು ನಿಧಾನವಾಗಿ ವ್ಯಾಯಾಮವನ್ನು ಪ್ರಾರಂಭಿಸಿ ಮತ್ತು ಕ್ರಮೇಣ ನಿಮ್ಮ ವ್ಯಾಯಾಮದ ತೀವ್ರತೆ ಮತ್ತು ಅವಧಿಯನ್ನು ಹೆಚ್ಚಿಸಿ. ಹಾಗೇ, ನಿಮ್ಮ ವ್ಯಾಯಾಮಕ್ಕೆ ತಕ್ಕಂತೆ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಸೇವನೆಯೂ ಅಗತ್ಯ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ