ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದಾಗಿ ಊಟ, ತಿಂಡಿ, ನಿದ್ರೆ ಎಲ್ಲವನ್ನೂ ಸರಿಯಾಗಿ ಮಾಡದೇ ಇರುವುದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಇದರಿಂದ ರಾತ್ರಿ ಸಮಯದಲ್ಲಿ ಹಠಾತ್ ಹಸಿವಾಗುತ್ತದೆ. ಕೆಲವೊಮ್ಮೆ ದೀರ್ಘ ದಿನವನ್ನು ಮುಗಿಸಿದ ಬಳಿಕ ಊಟ ಮಾಡುವಾಗ ಹಸಿವಾಗುವುದಿಲ್ಲ ಬದಲಾಗಿ ಮಧ್ಯರಾತ್ರಿ ಹಸಿವಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಇದಕ್ಕೆ ಸಂಬಂಧಿಸಬಲ್ಲರು. ಮಧ್ಯರಾತ್ರಿ ಕಡುಬಯಕೆ ಆಗುವುದು ಹಸಿವಿದ್ದಾಗ ಮಾತ್ರವಲ್ಲ. ಊಟ ಮಾಡಿದ ನಂತರವೂ ಆಗಬಹುದು. ರಾತ್ರಿಯಲ್ಲಿ ಸಾಮಾನ್ಯವಾಗಿ ನಮ್ಮ ಹಸಿವನ್ನು ನೀಗಿಸಲು ಬಿಸ್ಕತ್ತುಗಳು, ನಾಮ್ಕೀನ್, ಚಾಕೊಲೇಟ್ಗಳ ಪ್ಯಾಕ್ಗಳು ಅಥವಾ ಐಸ್ಕ್ರೀಮ್ಗಳಂತಹ ಏನನ್ನಾದರೂ ತಿನ್ನುತ್ತೇವೆ. ಆದರೆ ಈ ಅನಾರೋಗ್ಯಕರ ಆಹಾರಗಳು ಮಧ್ಯರಾತ್ರಿ ಹಸಿವನ್ನು ನಿಭಾಯಿಸುವ ಏಕೈಕ ಮಾರ್ಗವಲ್ಲ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಡರಾತ್ರಿಯಲ್ಲಿ ನೀವು ಆನಂದಿಸಬಹುದಾದ ಕೆಲವು ಆರೋಗ್ಯಕರ ತಿಂಡಿಗಳನ್ನು ಹಂಚಿಕೊಂಡಿದ್ದಾರೆ.
ಆದರೆ ಮಧ್ಯರಾತ್ರಿಯಲ್ಲಿ ನೀವು ಏನು ತಿನ್ನಬಹುದು ಎಂದು ನಾವು ಚರ್ಚಿಸುವ ಮೊದಲು, ಕಡುಬಯಕೆಗಳು ನಮ್ಮ ನಿದ್ರೆಗೆ ಏಕೆ ಅಡ್ಡಿಪಡಿಸುತ್ತವೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ಪೌಷ್ಟಿಕ ತಜ್ಞರ ಪ್ರಕಾರ, ರಾತ್ರಿ ತಡವಾಗಿ ಏನನ್ನಾದರೂ ತಿನ್ನುವ ಹಂಬಲವು ಅನೇಕ ಕಾರಣಗಳಿಂದಾಗಿರಬಹುದು. ಇವುಗಳಲ್ಲಿ ಅಸಮತೋಲಿತ ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಅನಿಯಮಿತ ಊಟದ ಮಾದರಿಗಳು ಮತ್ತು ರಾತ್ರಿ ತಿನ್ನುವ ಅಸ್ವಸ್ಥ ಆಹಾರಗಳು ಸೇರಿವೆ. ರಾತ್ರಿಯಲ್ಲಿ ಹಸಿವಿನಿಂದ ಬಳಲುತ್ತಿದ್ದರೆ ಅದು ಹಗಲಿನಲ್ಲಿ ನೀವು ಸಾಕಷ್ಟು ಪ್ರಮಾಣ ಆಹಾರ ತಿನ್ನದೇ ಇರಬಹುದರಿಂದಲೂ ಆಗಬಹುದು ಎಂದು ಅವರು ಹೇಳುತ್ತಾರೆ. ರಾತ್ರಿಯಲ್ಲಿ ಆಹಾರದ ಕಡುಬಯಕೆಯನ್ನು ಪ್ರಚೋದಿಸುವ ಇತರ ಅಂಶಗಳು ಬದಲಾದ ಸಿರ್ಕಾಡಿಯನ್ ಲಯ ಮತ್ತು ಒತ್ತಡ.
ರಾತ್ರಿಯಲ್ಲಿ ಜಂಕ್ ತಿನ್ನುವುದರಿಂದ ಬೆಳಿಗ್ಗೆ ನಿಮಗೆ ಗ್ಯಾಸ್ಟ್ರಿಕ್ ಅನುಭವವಾಗುತ್ತದೆ ಮತ್ತು ನೀವು ಕಿರಿಕಿರಿಯಿಂದ ಎಚ್ಚರಗೊಳ್ಳಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ನಿಜವಾಗಿಯೂ ಏನನ್ನಾದರೂ ತಿನ್ನಲು ಬಯಸಿದರೆ ಆರೋಗ್ಯಕರವಾದದನ್ನು ಆರಿಸಿಕೊಳ್ಳುವುದು ಉತ್ತಮ. ಇದರಿಂದ ಆರೋಗ್ಯಕರವಾಗಿ ತೂಕ ಇಳಿಕೆಯೂ ಸಾಧ್ಯವಾಗುತ್ತದೆ.
ಇದನ್ನೂ ಓದಿ: White Jamun Fruit: ಜಂಬು ನೇರಳೆ ಹಣ್ಣು ಈ ಆರೋಗ್ಯ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣ ಮಾಡುತ್ತೆ
-ಹಬೆಯಲ್ಲಿ ಬೇಯಿಸಿದ ತರಕಾರಿ, ಹಮ್ಮಸ್ ಟೋಸ್ಟ್.
-ಕೆಲವು ಆರೋಗ್ಯಕ ಬೀಜಗಳು.
-ಮಖಾನಾ.
-ಹಾಲು.
-ಅಮರಂತ್ ಪಫ್ಸ್ (ಅಂಗಡಿಗಳಲ್ಲಿ ಲಭ್ಯವಿದೆ).
ಪೌಷ್ಟಿಕತಜ್ಞರು ಈ ಆಹಾರಗಳನ್ನು ಸ್ಟಾಕ್ ನಲ್ಲಿ ಇರಿಸಿಕೊಳ್ಳಿ ಮತ್ತು ಅಗತ್ಯವಿದ್ದಾಗ ಅವುಗಳನ್ನು ಬಳಸಿಕೊಳ್ಳಿ ಇವೆಲ್ಲವೂ ಆರೋಗ್ಯಕ್ಕೂ ಒಳ್ಳೆಯದು ಅಲ್ಲದೆ ಇವುಗಳಿಂದ ತೂಕ ಇಳಿಕೆಗೂ ಸಹಾಯವಾಗುತ್ತದೆ ಎಂದು ಸೂಚಿಸುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ