ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer)ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಕಂಠದಲ್ಲಿರುವ ಜೀವಕೋಶಗಳು ಡೈಸ್ಪ್ಲಾಸಿಯಾಗೆ ಒಳಗಾಗುತ್ತವೆ. ಅಲ್ಲಿ ಜೀವಕೋಶಗಳು ಅಸಹಜವಾದ ಬೆಳವಣೀಗೆಯು ಗರ್ಭಕಂಠದ ಆಳವಾದ ಅಂಗಾಂಶಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.
ಹಿಂದಿನ ಹಂತಗಳಲ್ಲಿ ಅಸಹಜ ಬೆಳವಣೀಗೆಗೆ ಚಿಕಿತ್ಸೆ ನೀಡದಿದ್ದಲ್ಲಿ ಅದು ನಿಧಾನವಾಗಿ ಆಳವಾಗಿ ಬೆಳೆಯಲಾರಂಭಿಸುತ್ತದೆ. ಇದರಿಂದ ಶ್ವಾಸಕೋಶಗಳು, ಯಕೃತ್ತು, ಮೂತ್ರಕೋಶ, ಯೋನಿ ಮತ್ತು ಗುದನಾಳದಂತಹ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಗರ್ಭಕಂಠವು ಎರಡು ಪ್ರಮುಖ ಭಾಗಗಳನ್ನು ಒಳಗೊಂಡಿದೆ
ಸ್ಕ್ವಾಮಸ್ ಕೋಶಗಳಿಂದ ಆವೃತ್ತವಾಗಿರುವ ಗರ್ಭಕಂಠದ ಹೊರ ಭಾಗವನ್ನು ಎಕ್ಟೋಸರ್ವಿಕ್ಸ್ ಎಂದು ಕರೆಯಲಾಗುತ್ತದೆ (ಎಕ್ಸೋಸರ್ವಿಕ್ಸ್ ಎಂದೂ ಕರೆಯಲಾಗುತ್ತದೆ). ಇದನ್ನು ಸ್ತ್ರೀರೋಗ ಶಾಸ್ತ್ರದ ಪರೀಕ್ಷೆಯಲ್ಲಿ ಪರಿಶೀಲಿಸಬಹುದಾಗಿದೆ.
ಗರ್ಭಕಂಠದ ಒಳಭಾಗವನ್ನು ಎಂಡೋಸರ್ವಿಕ್ಸ್ ಎಂದು ಕರೆಯಲಾಗುತ್ತಿದ್ದು, ಇದು ಯೋನಿ ಮತ್ತು ಗರ್ಭಾಶಯದ ನಡುವೆ ಸಂಪರ್ಕ ಕಲ್ಪಿಸುವ ಕಾಲುವೆಯನ್ನು ರೂಪಿಸುತ್ತದೆ. ಎಂಡೋಸರ್ವಿಕ್ಸ್ ಅನ್ನು ಕಾಲಂ-ಆಕಾರದ ಗ್ರಂಥಿ ಕೋಶಗಳಿಂದ ಮುಚ್ಚಲಿದ್ದು, ಲೋಳೆಯ ರಚನೆಯನ್ನುಂಟು ಮಾಡುತ್ತದೆ.
ಎಂಡೋಸರ್ವಿಕ್ಸ್ ಮತ್ತು ಎಕ್ಟೋಸರ್ವಿಕ್ಸ್ ಎರಡೂ ಗಡಿಯನ್ನು ರೂಪಿಸಲು ಪರಸ್ಪರ ಭೇಟಿಯಾಗುತ್ತವೆ. ಇದನ್ನು ಪರಿವರ್ತನೆ ವಲಯವೆಂದು ಕರೆಯಲಾಗುತ್ತದೆ. ಬಹುಪಾಲು ಗರ್ಭಕಂಠದ ಕ್ಯಾನ್ಸರ್ ನ ಪರಿವರ್ತನೆ ವಲಯದಲ್ಲಿನ ಸ್ಕ್ವಾಮಸ್ ಕೋಶಗಳಲ್ಲಿ ಆರಂಭವಾಗುತ್ತದೆ.
ಗರ್ಭಕಂಠ ಕ್ಯಾನ್ಸರ್ ಗೆ ಕಾರಣಗಳು
ಗರ್ಭಕಂಠದ ಕ್ಯಾನ್ಸರ್ ಪ್ರಾಥಮಿಕವಾಗಿ ಲೈಂಗಿಕವಾಗಿ ಹರಡುವ ಸೋಂಕಿನ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಂದ ಉಂಟಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿರುತ್ತದೆ. ಪರಿಸರ ಅಥವಾ ಜೀವನಶೈಲಿಯ ಆಯ್ಕೆಗಳಂತಹ ಇತರ ಅಂಶಗಳು ಗರ್ಭಕಂಠದ ಕ್ಯಾನ್ಸರ್ ಅನ್ನು ಉಲ್ಬಣಗೊಳಿಸಬಹುದಾಗಿದೆ.
ಗರ್ಭಕಂಠದ ಕ್ಯಾನ್ಸರ್ ವಿಧಗಳು
ಗರ್ಭಕಂಠದ ಕ್ಯಾನ್ಸರ್ ಪ್ರಕಾರವನ್ನು ಗುರುತಿಸುವುದರಿಂದ ರೋಗಿಯ ರೋಗದ ಬೆಳವಣಿಗೆ ಮತ್ತು ಚಿಕಿತ್ಸೆಯನ್ನು ನಿರ್ಧಾರ ಮಾಡಲು ಸಹಕಾರಿಯಾಗುತ್ತದೆ.
ಗರ್ಭಕಂಠ ಕ್ಯಾನ್ಸರ್ ನ ವಿಧಗಳೆಂದರೆ
• ಸ್ಕ್ವಾಮಸ್ ಸೆಲ್ ಕಾರ್ಸಿನೋಮ: ಬಹುಪಾಲು ಗರ್ಭಕಂಠದ ಕ್ಯಾನ್ಸರ್ ಗಳು ಸ್ಕ್ವಾಮಸ್ ಸೆಲ್ ಕಾರ್ಸಿನೋಮಗಳಾಗಿವೆ. ಇದು ಗರ್ಭಕಂಠದ ಹೊರಭಾಗವಾದ ಎಕ್ಟೋಸರ್ವಿಕ್ಸ್ ನಲ್ಲಿರುವ ಜೀವಕೋಶಗಳಿಂದ ಬೆಳವಣಿಗೆಯಾಗುತ್ತದೆ.
• ಅಡಿನೊಕಾರ್ಸಿನೋಮ: ಗರ್ಭಕಂಠದ ಒಳಭಾಗದಲ್ಲಿರುವ ಎಂಡೋಸರ್ವಿಕ್ಸ್ ನ ಕಾಲಂ-ಆಕಾರದ ಗ್ರಂಥಿ ಕೋಶಗಳಲ್ಲಿ ಗರ್ಭಕಂಠದ ಗ್ರಂಥಿ ಕೋಶಗಳಲ್ಲಿ ಗರ್ಭಕಂಠದ ಅಡಿನೊಕಾರ್ಸಿನೋಮ ಬೆಳವಣಿಗೆಯಾಗುತ್ತದೆ.
ಕೆಲವು ಅಪರೂಪದ ಸಂದರ್ಭಗಳಲ್ಲಿ ಎರಡೂ ವಿಧದ ಜೀವಕೋಶಗಳು ಗರ್ಭಕಂಠದ ಕ್ಯಾನ್ಸರ್ ನಲ್ಲಿ ತೊಡಗಿಕೊಂಡಿವೆ. ಇದು ಮಿಶ್ರ ಕಾರ್ಸಿನೋಮ ಅಥವಾ ಅಡೆನೊಸ್ಕ್ವಾಮಸ್ ಕಾರ್ಸಿನೋಮಕ್ಕೆ ಕಾರಣವಾಗುತ್ತದೆ.
ಗರ್ಭಕಂಠ ಕ್ಯಾನ್ಸರ್ ನ ಅಪಾಯಕಾರಿ ಅಂಶಗಳು:
ಗರ್ಭಕಂಠ ಕ್ಯಾನ್ಸರ್ ನ ಮೂರು ಸಂಭವನೀಯ ಅಪಾಯಕಾರಿ ಅಂಶಗಳು:-
1. ಲೈಂಗಿಕ ಇತಿಹಾಸ: ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುವ ಎಚ್ ಪಿವಿ ಯೊಂದಿಗೆ ಸಂಪರ್ಕದಲ್ಲಿರುವ ಸಂದರ್ಭದಲ್ಲಿ ಹಲವಾರು ಅಂಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ:-
• 18 ವರ್ಷ ಅಥವಾ ಅದಕ್ಕಿಂತ ಮೊದಲು ಲೈಂಗಿಕವಾಗಿ ಸಕ್ರಿಯವಾಗಿರುವುದು.
• ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು.
• ಅಸುರಕ್ಷಿತ ಲೈಂಗಿಕತೆಯು ಕ್ಲಮೈಡಿಯಾ, ಗೊನೊರಿಯಾ, ಸಿಫಿಲಿಸ್ ಮತ್ತು ಎಚ್ಐವಿ/ಏಯ್ಡ್ಸ್ ನಂತಹ ಇತರ ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಕಾರಣವಾಗುತ್ತದೆ ಮತ್ತು ಎಚ್ ಪಿವಿ ಅಪಾಯವನ್ನು ಹೆಚ್ಚಿಸುತ್ತದೆ.
2. ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆ: ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ದೇಹದಲ್ಲಿ ಬೆಳೆಯಬಹುದಾದ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಹ್ಯೂಮನ್ ಇಮ್ಯುನೊ ಡಿಫಿಶಿಯನ್ಸಿ ವೈರಸ್ ಅಥವಾ ಎಚ್ಐವಿ ಗೆ ಒಡ್ಡಿಕೊಳ್ಳುವುದರಿಂದ ಲೈಂಗಿಕ ಸಂಭೋಗದಿಂದ ಅಥವಾ ಇನ್ನೊಂದು ಆರೋಗ್ಯ ಸ್ಥಿತಿಯಿಂದ ಸಂಕುಚಿತಗೊಂಡಾಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನಂತರದ ಹಂತಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
3. ಧೂಮಪಾನ: ಧೂಮಪಾನವು ರೋಗನಿರೋಧಕ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದು ಸ್ಕ್ವಾಮಸ್ ಸೆಲ್ ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ನಿಯಂತ್ರಣ ಕ್ರಮಗಳು:-
ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಈ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬಹುದಾಗಿದೆ:
• ಎಚ್ ಪಿವಿ ತಪಾಸಣಾ ಪರೀಕ್ಷೆಗಳು: ಎಚ್ ಪಿವಿ ತಡೆಗಟ್ಟುವಿಕೆ ಲಸಿಕೆಗಳನ್ನು ಸ್ವೀಕರಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಎಚ್ ಪಿವಿ ಸಂಬಂಧಿತ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
• ಪ್ಯಾಪ್ ತಪಾಸಣಾ ಪರೀಕ್ಷೆಗಳು: ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುವ ಜೀವಕೋಶಗಳಲ್ಲಿರುವ ಬದಲಾವಣೆಗಳನ್ನು ನಿರ್ಧರಿಸಲು ಪ್ಯಾಪ್ ಪರೀಕ್ಷೆಗಳು ಸಾಮಾನ್ಯ ಪರೀಕ್ಷೆಯಾಗಿದೆ. ಹೆಚ್ಚಿನ ವೈದ್ಯಕೀಯ ಸಂಸ್ಥೆಗಳು ಆರಂಭಿಸಿರುವ ರೋಗಲಕ್ಷಣಗಳನ್ನು ಪತ್ತೆ ಹಚ್ಚಲು 21 ನೇ ವಯಸ್ಸಿನಲ್ಲಿ ವಾಡಿಕೆಯಂತೆ ಪ್ಯಾಪ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸುತ್ತವೆ.
• ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡುವುದು: ಸುರಕ್ಷಿತ ಲೈಂಗಿಕತೆಯು ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದು ನಂತರ ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು. ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಮಿತಿಗೊಳಿಸುತ್ತದೆ ಹಾಗೂ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ ಗಳನ್ನು ಬಳಸುವುದನ್ನು ಸಕ್ರಿಯವಾಗಿ ಅಭ್ಯಾಸ ಮಾಡಿಕೊಳ್ಳಬೇಕು.
• ಧೂಮಪಾನ ತ್ಯಜಿಸಿ: ಸಿಗರೇಟ್ ಗಳು ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಟ ಮಾಡಲು ದೇಹಕ್ಕೆ ಕಷ್ಟವನ್ನುಂಟು ಮಾಡುತ್ತದೆ. ಈ ವಿಷಕಾರಿ ವಸ್ತುಗಳು ಜೀವಕೋಶದ ಡಿಎನ್ಎಗೆ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು.
ಪ್ಯಾಪ್ ಸ್ಮಿಯರ್ ಪರೀಕ್ಷೆಗಳು ಮತ್ತು ಅವುಗಳ ಪ್ರಾಮುಖ್ಯತೆ-
ಪ್ಯಾಪ್ ಸ್ಮೀಯರ್ ಪರೀಕ್ಷೆಯು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರನ್ನು ಪತ್ತೆ ಹಚ್ಚಲು ಸಾಮಾನ್ಯ ಸ್ಕ್ರೀನಿಂಗ್ ವಿಧಾನವಾಗಿದೆ. ಇದು ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಿಂದ ಜೀವಕೋಶಗಳ ಮಾದರಿಯನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ.
ಪ್ಯಾಪ್ ಸ್ಮೀಯರ್ ಪರೀಕ್ಷೆಯ ಉದ್ದೇಶವು ಗರ್ಭಕಂಠದ ಕೋಶಗಳಲ್ಲಿನ ಅಸಜಹತೆಗಳು ಅಥವಾ ಬದಲಾವಣೆಗಳನ್ನು ಗುರುತಿಸುವುದು ಅದು ಗರ್ಭಕಂಠದ ಕ್ಯಾನ್ಸರ್ ಆಗಿ ಬೆಳೆಯಬಹುದಾಗಿದೆ. ಆರಂಭಿಕ ಹಂತಗಳಲ್ಲಿ ಗರ್ಭಕಂಠದಲ್ಲಿನ ಸೆಲ್ಯುಲಾರ್ ಬದಲಾವಣೆಗಳನ್ನು ಪತ್ತೆ ಹಚ್ಚುವುದರಿಂದ ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಬಹುದಾಗಿದೆ.
ನಿರ್ಣಯ
ಗರ್ಭಕಂಠದ ಕ್ಯಾನ್ಸರನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಈ ತಡೆಗಟ್ಟುವ ಕ್ರಮಗಳನ್ನು ಅಭ್ಯಾಸ ಮಾಡುವುದು. ಅಂದರೆ, ನಿಯಮಿತ ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು ಹತ್ತಿರದ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ಎಚ್ ಪಿವಿ ಲಸಿಕೆ ಪಡೆಯಬೇಕು.
ಮಾಹಿತಿ: ಡಾ. ಡಾ. ಆಶಾ ಹಿರೇಮಠ, ಸ್ತ್ರೀರೋಗ ತಜ್ಞೆ,