- Kannada News Photo gallery Vijayapura Measles confirmed in hundreds of children in Alamela taluk of Vijayapura news in kannada
ಆಲಮೇಲ ತಾಲೂಕಿನ ನೂರಾರು ಮಕ್ಕಳಲ್ಲಿ ದಡಾರ ದೃಢ: ಸಾಂಕ್ರಾಮಿಕವಾಗಿ ಹರಡುವ ಭೀತಿ, ಅಧಿಕಾರಿಗಳ ತುರ್ತು ಸಭೆ
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕ ಕೇಂದ್ರದಲ್ಲಿ ನೂರಾರು ಮಕ್ಕಳಿಗೆ ಏಕಕಾಲಕ್ಕೆ ದಡಾರ ರೋಗ ಸಾಮೂಹಿಕವಾಗಿ ಹರಡಿಕೊಂಡಿದ್ದು, ಸಾಂಕ್ರಾಮಿಕವಾಗಿ ವ್ಯಾಪಿಸತೊಡಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಡಾರ ಪ್ರಕರಣ ಬೆಳಕಿಗೆ ಬಂದಿದೆ.
Updated on:Jan 26, 2023 | 10:14 PM

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕ ಕೇಂದ್ರದಲ್ಲಿ ನೂರಾರು ಮಕ್ಕಳಿಗೆ ಏಕಕಾಲಕ್ಕೆ ದಡಾರ ರೋಗ ಸಾಮೂಹಿಕವಾಗಿ ಹರಡಿಕೊಂಡಿದ್ದು, ಸಾಂಕ್ರಾಮಿಕವಾಗಿ ವ್ಯಾಪಿಸತೊಡಗಿದೆ. ಆಲಮೇಲ ಪಟ್ಟಣದಲ್ಲಿ 200ಕ್ಕೂ ಹೆಚ್ವಿನ ಮಕ್ಕಳಲ್ಲಿ ದಡಾರ ಮತ್ತು ರುಬೇಲ ಸಾಂಕ್ರಾಮಿಕ ಕಾಯಿಲೆ ದೃಡಪಟ್ಟಿರುವ ವರದಿಯಾಗಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಡಾರ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳಲ್ಲಿ ಸಾಂಕ್ರಾಮಿಕ ರೂಪದಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗದ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಇಂಡಿ ಕಂದಾಯ ಉಪ ವಿಭಾಗ ಅಧಿಕಾರಿ ನೇತೃತ್ವದಲ್ಲಿ ಗುರುವಾರ ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಡಾ .ವಿಜಯಮಹಾಂತೇಶ ದಾನಮ್ಮನವರ ಸೂಚನೆ ಮೇರೆಗೆ ಸಭೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಮುಕುಂದ ಗಲಗಲಿ ಮಾಹಿತಿ ನೀಡಿದ್ದಾರೆ.

ಆಲಮೇಲ ಪಟ್ಟಣದಲ್ಲಿ ಹಬ್ಬಿರುವ ದಡಾರ ರೋಗದ ಕುರಿತು ಸರ್ಕಾರಕ್ಕೂ ಮಾಹಿತಿ ಹೋಗಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ತುರ್ತು ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಲಸಿಕಾ ಅಭಿಯಾನ ಹಮ್ಮಿಕೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಡಾರವು ತೀವ್ರವಾದ ವೈರಲ್ ಉಸಿರಾಟದ ಕಾಯಿಲೆಯಾಗಿದೆ. ವೈರಸ್‌ನ ಸಂಪರ್ಕದ ನಂತರ 7 ರಿಂದ 14 ದಿನಗಳ ನಂತರ ದಡಾರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಸಾಮಾನ್ಯವಾಗಿ ಅಧಿಕ ಜ್ವರ, ಕೆಮ್ಮು, ಸ್ರವಿಸುವ ಮೂಗು ಮತ್ತು ನೀರಿನ ಕಣ್ಣುಗಳನ್ನು ಒಳಗೊಂಡಿರುತ್ತದೆ . ಮೊದಲ ರೋಗಲಕ್ಷಣಗಳ ನಂತರ 3 ರಿಂದ 5 ದಿನಗಳ ನಂತರ ದಡಾರ ದದ್ದು ಕಾಣಿಸಿಕೊಳ್ಳುತ್ತದೆ. (ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ)
Published On - 10:14 pm, Thu, 26 January 23



















