ನಾವು ತೂಕ(Weight) ಮಾಡುವ ಯಂತ್ರದ ಮೇಲೆ ನಿಂತಾಗ ತೋರಿಸುವ ನಮ್ಮ ದೇಹದ ತೂಕ ನಮ್ಮ ಎತ್ತರ(Height)ಕ್ಕೆ ಸರಿಯಾಗಿರಬೇಕು. ನಮ್ಮ ಕಾಲಿನಿಂದ ತಲೆಯವರೆಗೆ ಇರುವ ಒಟ್ಟು ತೂಕವನ್ನುನಾವು ಗಮನಿಸಬೇಕು. ಹಾಗೆಯೇ ನಮ್ಮ ದೇಹದಲ್ಲಿ ಕೊಬ್ಬು(Cholesterol) ಹೆಚ್ಚಾಗಿದೆ ಎಂಬುದಕ್ಕೆ ಕೆಲವು ಲಕ್ಷಣಗಳಿಂದ ಪತ್ತೆ ಹಚ್ಚಬಹುದು.ಆರೋಗ್ಯಯುತ ವ್ಯಕ್ತಿ ತನ್ನ ದೇಹದಲ್ಲಿ ಸುಮಾರು ಶೇ. 15-20 ರಷ್ಟು ಪ್ರಮಾಣದಲ್ಲಿ ಆರೋಗ್ಯಯುತ ಕೊಬ್ಬು ಇರಬೇಕು.
ನಾವು ಹೆಚ್ಚಿನ ಆಹಾರ ತಿನ್ನುತ್ತೇವೆ, ಆದರೆ ಇಂದಿನ ಜೀವನ ಶೈಲಿಯಲ್ಲಿ ತಿಂದ ಅಷ್ಟು ಆಹಾರವನ್ನು ಶಕ್ತಿಯಾಗಿ ಬದಲಾಯಿಸುವಷ್ಟು ನಾವು ಕಸರತ್ತು ಮಾಡುವುದಿಲ್ಲ, ಆಹಾರಗಳು ಜೀರ್ಣವಾಗದೇ ಬೇಡದ ಕೊಬ್ಬಾಗಿ ಮಾರ್ಪಾಟಾಗುತ್ತದೆ.
ಆರ್ಕಸ್ ಸೆನಿಲಿಸ್ ಎನ್ನುವ ಚಿಹ್ನೆಯು ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ. ಆಗ ಕಣ್ಣಿನಲ್ಲಿ ಬೂದು ಹಾಗೂ ನೀಲಿಬಣ್ಣದ ಗೆರೆಗಳು ಉತ್ಪತ್ತಿಯಾಗುತ್ತದೆ. ಬಳಿಕ ಕೊಬ್ಬು ಹೆಚ್ಚಾದಂತೆ ಆ ಗೆರೆಯೂ ಕೂಡ ತೀಕ್ಷ್ಣವಾಗುತ್ತದೆ.
ಅಮೆರಿಕನ್ ಅಕಾಡೆಮಿ ಫಾರ್ ಆಫ್ತೋಲ್ಮೋಲಜಿ ನಡೆಸಿದ ಸಮೀಕ್ಷೆಯಲ್ಲಿ ಆ ಲಕ್ಷಣಗಳು ಕೊಬ್ಬಿನ ತೀವ್ರತೆಯನ್ನು ಹೇಳುತ್ತವೆ ಎಂಬುದು ತಿಳಿದುಬಂದಿದೆ.ಈ ಆರ್ಕಸ್ ಸೆನ್ಸಿಲ್ಸ್ ಕಣ್ಣು ಗುಡ್ಡೆಯ ಮೇಲೆ ಹಾಗೂ ಕೆಳಗಡೆ ಕಂಡುಬರುತ್ತದೆ. ಒಂದೊಮ್ಮೆ 45 ವರ್ಷದೊಳಗಿನವರಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ಹೆಚ್ಚು ಕೊಬ್ಬು ನಿಮ್ಮ ದೇಹದಲ್ಲಿದೆ ಎಂದರ್ಥ.
ಒಂದೊಮ್ಮೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂಬ ಅರಿವು ನಿಮಗೆ ಬಂದರೆ ರಕ್ತದ ಪರೀಕ್ಷೆ ಮಾಡಿಸಿ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ. ಜೀವನಶೈಲಿ ಬದಲಾಯಿರಿ, ಜಂಕ್ ಆಹಾರಗಳಿಂದ ದೂರವಿರಿ, ಧೂಮಪಾನ, ಮದ್ಯಪಾನ ಬಿಡಿ, ತೂಕ ಇಳಿಕೆಗೆ ಕೆಲವು ವ್ಯಾಯಾಮಗಳನ್ನು ನಿತ್ಯ ಮಾಡಿ.
ದೇಹದ ಕೊಬ್ಬಿನಲ್ಲಿ ಎರಡು ರೀತಿಯಿರುತ್ತದೆ. ಒಂದು ನಮ್ಮ ಚರ್ಮದ ಕೆಳಗೆ ಇರುವಂಥದ್ದು, ಇದನ್ನು ನಾವು ಸುಲಭವಾಗಿ ಕರಗಿಸಬಹುದು, ಇದರಿಂದ ಯಾವುದೇ ತೊಂದರೆಯಿಲ್ಲ, ಮತ್ತೊಂದು ರೀತಿಯ ಕೊಬ್ಬು ಎಲ್ಲರಿಗೂ ಕಾಣಿಸುವಂಥದ್ದು, ಹೊಟ್ಟೆಯಲ್ಲಿ ಮತ್ತು ತೊಡೆಯಲ್ಲಿ ಸಂಗ್ರಹವಾಗಿರುವ ಕೊಬ್ಬು. ಇದು ಅಪಾಯಕಾರಿ, ಇಲ್ಲಿ ಶೇಖರವಾಗುವ ಕೊಬ್ಬು ದೇಹದ ಇತರ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ., ಇದರಿಂದ ಹಲವು ಕಾಯಿಲೆಗಳು ಬರುತ್ತವೆ, ಮಧುಮೇಹ, ಹೃದಯ ರೋಗ, ಥೈರಾಯಿಡ್ ಮತ್ತು ಪಿಸಿಒಡಿಗೆ ಕಾರಣವಾಗುತ್ತದೆ,
ನಾವು ಕರಗಿಸಬೇಕಾಗಿರುವುದು ಹೊಟ್ಟೆ ಮತ್ತು ತೊಡೆಯಲ್ಲಿ ಶೇಖರವಾಗಿರುವ ಕೊಬ್ಬನ್ನು, ನಿಯಮಿತ ಆಹಾರ ಶೈಲಿ, ಜೀವನ ಶೈಲಿ ಉತ್ತಮ ಅಬ್ಯಾಸ, ವ್ಯಾಯಾಮ ಹಾಗೂ ನಿಯಮಿತ ಜೀವನ ಶೈಲಿ ರೂಢಿಸಿಕೊಂಡರೇ ಕೊಬ್ಬು ಕರಗಿಸಬಹುದಾಗಿದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ತೂಕ ಹೆಚ್ಚಳ, ಕೊಲೆಸ್ಟ್ರಾಲ್ ಸಮಸ್ಯೆಗಳು ನಿಮ್ಮಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ