Cholesterol: ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆಯೇ? ತಿಳಿಯುವುದು ಹೇಗೆ?

Cholesterol:ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದರೆ ಅನೇಕ ರೀತಿಯ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಕೊಬ್ಬು(Cholesterol) ರಕ್ತದಲ್ಲಿನ ಲಿಪಿಡ್‍ನಂತಿರುವ ಮೇಣದಂಥ ವಸ್ತುವಾಗಿದ್ದು, ಇದು ಆರೋಗ್ಯಕರ ಕೋಶ ರೂಪುಗೊಳ್ಳಲು ಹಾಗೂ ಕೋಶಗಳ ಪೊರೆಯನ್ನು ಬಲಿಷ್ಠಗೊಳಿಸಲು ನೆರವು ನೀಡುತ್ತದೆ.

Cholesterol: ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆಯೇ? ತಿಳಿಯುವುದು ಹೇಗೆ?
Cholesterol
Follow us
TV9 Web
| Updated By: ನಯನಾ ರಾಜೀವ್

Updated on: May 30, 2022 | 9:07 AM

ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದರೆ ಅನೇಕ ರೀತಿಯ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಕೊಬ್ಬು(Cholesterol) ರಕ್ತದಲ್ಲಿನ ಲಿಪಿಡ್‍ನಂತಿರುವ ಮೇಣದಂಥ ವಸ್ತುವಾಗಿದ್ದು, ಇದು ಆರೋಗ್ಯಕರ ಕೋಶ ರೂಪುಗೊಳ್ಳಲು ಹಾಗೂ ಕೋಶಗಳ ಪೊರೆಯನ್ನು ಬಲಿಷ್ಠಗೊಳಿಸಲು ನೆರವು ನೀಡುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅದರ ಲಕ್ಷಣಗಳು ಕಾಲುಗಳಲ್ಲಿಯೂ ಕಂಡುಬರುತ್ತವೆ. ನೀವು ಸರಿಯಾದ ಸಮಯದಲ್ಲಿ ಅದರ ಬಗ್ಗೆ ಗಮನ ಹರಿಸದಿದ್ದರೆ, ನಂತರ ನಿಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು. ಸಾಧ್ಯವಾದರೆ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಇಲ್ಲದಿದ್ದರೆ, ನೀವು ಹೃದಯಾಘಾತಕ್ಕೆ ಬಲಿಯಾಗಬಹುದು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆ ಇದೆ.

ಈ ಕೊಬ್ಬಿನಲ್ಲಿ ಎರಡು ವಿಧವಿದೆ: ಉತ್ತಮ ಕೊಬ್ಬು ಹಾಗೂ ಕೆಟ್ಟ ಕೊಬ್ಬು. ಉತ್ತಮ ಕೊಬ್ಬಿನ ಪ್ರಮಾಣವನ್ನು ಎಚ್‍ಡಿಎಲ್‍ (HDL) (ಹೈ-ಡೆನ್ಸಿಟಿ ಲಿಪೊಪ್ರೋಟೀನ್) ಮಟ್ಟದ ಮೂಲಕ ವ್ಯಾಖ್ಯಾನಿಸಿದರೆ, ಕೆಟ್ಟ ಕೊಬ್ಬನ್ನು ಎಲ್‍ಡಿಎಲ್‍ (LDL) (ಲೋ-ಡೆನ್ಸಿಟಿ ಲಿಪೊಪ್ರೋಟೀನ್) ಮಟ್ಟದ ಮೂಲಕ ಅಳೆಯಲಾಗುತ್ತದೆ.

ಪೆರಿಫೆರಲ್ ಆರ್ಟರಿ ಡಿಸೀಸ್ ಬೆಳೆಯುತ್ತಿದ್ದಂತೆಯೇ ಶರೀರವು ವಿಶ್ರಾಂತಿಯಲ್ಲಿದ್ದರೂ ರೋಗಲಕ್ಷಣಗಳು ಪದೇ ಪದೇ ಕಾಣಿಸಿಕೊಳ್ಳತೊಡಗುತ್ತವೆ. ಈ ರೋಗವು ಉಲ್ಬಣಿಸಿದಾಗ ಯಾವುದೇ ಕಾರಣಕ್ಕೂ ಬದಲಾಗದ ದೇಹದ ಅಂಗವಾದ ಪಾದದ ಬೆರಳಿನಲ್ಲಿ ರೋಗ ಚಿಹ್ನೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ.

ಕೊಲೆಸ್ಟ್ರಾಲ್​ನ ಲಕ್ಷಣಗಳು -ಪಾದದ ಬೆರಳಿನ ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ -ಪಾದದ ಬೆರಳುಗಳಲ್ಲಿ ಉರಿಯ ಅನುಭವವಾಗುತ್ತದೆ -ಗಡುಸಾದ ಪಾದದ ಬೆರಳಿನ ಉಗುರು-

ಕಾಲ ಮೇಲಿನ ಚರ್ಮ ಮೃದುವಾಗುವುದು -ಕಳೆರಹಿತ ಚರ್ಮ

ಅಸಮರ್ಪಕ ರಕ್ತ ಸಂಚಾರದಿಂದ ಜೀವಕೋಶಗಳು ಸಾವಿಗೀಡಾಗುವುದರಿಂದ ಚರ್ಮದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯನ್ನು ಗ್ಯಾಂಗ್ರೀನ್ ಎಂದು ಕರೆಯುತ್ತಾರೆ.

-ಸುಲಭವಾಗಿ ಗುಣವಾಗದ ಅಲ್ಸರ್‌ ಹುಣ್ಣುಗಳು

-ಕಾಲಿನಲ್ಲಿ ಕಡಿಮೆ ಪ್ರಮಾಣದ ಕೂದಲು ಬೆಳವಣಿಗೆ

-ಕಾಲುಗಳು ತಣ್ಣಗಿರುವುದು, ನಿರ್ದಿಷ್ಟವಾಗಿ ಅಂಗಾಲು

-ವಿಶ‍್ರಾಂತಿಯಲ್ಲಿದ್ದಾಗಲೂ ಶಮನವಾಗದ ನೋವು

ಕಾಲಿನ ಸೆಳೆತ: ಪಾದದ ಹೊರತಾಗಿ, ತೋರುಬೆರಳು, ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿಯೂ ಸೆಳೆತವಿದ್ದರೆ, ಅದು ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವಾಗ ಹಲವು ರೀತಿಯಲ್ಲಿ ಕಾಲು ನೋವು ಇರುವ ಸಾಧ್ಯತೆ ಇರುತ್ತದೆ, ಇದು ಅಧಿಕ ಕೊಲೆಸ್ಟ್ರಾಲ್‌ನ ಒಂದು ಸಾಮಾನ್ಯ ಲಕ್ಷಣವಾಗಿದೆ.

ಪಾದದ ಚರ್ಮದ ಬಣ್ಣ ಬದಲಾವಣೆ: ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಕಾರಣ, ಪಾದಗಳ ರಕ್ತ ಪೂರೈಕೆಯ ಮೇಲೆ ಪರಿಣಾಮವೂ ಉಂಟಾಗುತ್ತದೆ, ಈ ಪರಿಣಾಮವನ್ನು ನೀವು ಪಾದಗಳ ಮೇಲೆ ಸ್ಪಷ್ಟವಾಗಿ ಕಾಣಬಹುದು. ರಕ್ತದ ಕೊರತೆಯಿಂದಾಗಿ, ರಕ್ತದ ಮೂಲಕ ತಲುಪುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ ಚರ್ಮದ ಮತ್ತು ಕಾಲುಗಳ ಉಗುರುಗಳ ಬಣ್ಣವು ಬದಲಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ