Melanoma: ನಿಮ್ಮ ದೇಹದಲ್ಲಿ ಹೊಸ ಮಚ್ಚೆಗಳು ಕಾಣಿಸಿಕೊಳ್ಳುತ್ತಿದೆಯೇ? ನಿರ್ಲಕ್ಷ್ಯ ಬೇಡ ಮೆಲನೋಮಾ ಕ್ಯಾನ್ಸರ್ ಇರಬಹುದು

| Updated By: ನಯನಾ ರಾಜೀವ್

Updated on: Aug 15, 2022 | 10:28 AM

ನಿಮ್ಮ ದೇಹದಲ್ಲಿ ಹೊಸದಾಗಿ ಯಾವುದೇ ರೀತಿಯ ಮಚ್ಚೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ ಅದು ಮೆಲನೋಮಾ ಕ್ಯಾನ್ಸರ್​ನ ಲಕ್ಷಣಗಳಾಗಿರಬಹುದು.

Melanoma: ನಿಮ್ಮ ದೇಹದಲ್ಲಿ ಹೊಸ ಮಚ್ಚೆಗಳು ಕಾಣಿಸಿಕೊಳ್ಳುತ್ತಿದೆಯೇ? ನಿರ್ಲಕ್ಷ್ಯ ಬೇಡ ಮೆಲನೋಮಾ ಕ್ಯಾನ್ಸರ್ ಇರಬಹುದು
Melanoma
Image Credit source: Prevention.com
Follow us on

ನಿಮ್ಮ ದೇಹದಲ್ಲಿ ಹೊಸದಾಗಿ ಯಾವುದೇ ರೀತಿಯ ಮಚ್ಚೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ ಅದು ಮೆಲನೋಮಾ ಕ್ಯಾನ್ಸರ್​ನ ಲಕ್ಷಣಗಳಾಗಿರಬಹುದು. 29 ವರ್ಷದ ಪತ್ರಕರ್ತೆಯೊಬ್ಬರ ತಲೆಯಲ್ಲಿ ಇಂತಹ ಮಚ್ಚೆ ಕಾಣಿಸಿಕೊಂಡಿತ್ತು, ವೈದ್ಯರ ಬಳಿ ತೆರಳಿದಾಗ ಅವರು ಫಂಗಲ್ ಇನ್​ಫೆಕ್ಷನ್ ಎಂದು ಹೇಳಿದ್ದರು, ಬಳಿಕ ಆಕೆ ಮತ್ತೊಂದು ವೈದ್ಯರನ್ನು ಸಂಪರ್ಕಿಸಿದಾಗ ಅದು ಮೆಲನೋಮಾ ಕ್ಯಾನ್ಸರ್ ಎಂಬುದು ತಿಳಿದುಬಂದಿದೆ.

ಇದೀಗ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಮೋಲ್‌ಗಳನ್ನು ಬಯಾಪ್ಸಿ ಮಾಡಲಾಯಿತು. ಕ್ಯಾನ್ಸರ್ ಎಲ್ಲೆಡೆ ಹರಡುತ್ತಿದ್ದ ಕಾರಣ ಆಕೆಯ ಕುತ್ತಿಗೆಯಿಂದ 24 ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಮೆಲನೋಮ ಎಂದರೇನು?
ಮೆಲನೋಮವು ಚರ್ಮದ ಕ್ಯಾನ್ಸರ್​ನ ಒಂದು ರೂಪವಾಗಿದೆ ಇದು ಅತ್ಯಂತ ಗಂಭೀರ ಕ್ಯಾನ್ಸರ್ ಸ್ವರೂಪಗಳಲ್ಲಿ ಒಂದಾಗಿದೆ. ಇದನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಿ ಪರಿಣಮಿಸಬಹುದು.

ಈ ಕ್ಯಾನ್ಸರ್ ಮೆಲನೋಸೈಟ್‌ಗಳಲ್ಲಿ ಬೆಳವಣಿಗೆಯಾಗುತ್ತದೆ, ಮೆಲನಿನ್ ಅನ್ನು ಉತ್ಪಾದಿಸುವ ಮತ್ತು ನಿಮ್ಮ ಚರ್ಮಕ್ಕೆ ಬಣ್ಣವನ್ನು ನೀಡುವ ಜೀವಕೋಶಗಳು.

ಆದಾಗ್ಯೂ, ಮೆಲನೋಮಾದ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ ಆದರೆ ನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಮೆಲನೋಮ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಮೆಲನೋಮಾ ಲಕ್ಷಣ
ಆರಂಭದಲ್ಲಿ ಕ್ಯಾನ್ಸರ್ ಯುಕ್ತ ಮಚ್ಚೆಗಳನ್ನು ಪತ್ತೆ ಮಾಡುವುದು ಸುಲಭವಲ್ಲ,  ಹೀಗಾಗಿ, ದೇಹದ ಮೇಲೆ ಹೆಚ್ಚು ಪ್ರಕಾರದ ಮಚ್ಚೆಗಳನ್ನು ಹೊಂದಿರುವವರು ನಿಗದಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.
– ಶುಷ್ಕವಾದ ಕೆಂಪು ಸ್ಪಾಟ್
– ಮಚ್ಚೆಯಲ್ಲಿ ಕಡಿತ
– ಕಾಲುಗಳು ಅಥವಾ ಕೈಗಳ ಉಗುರುಗಳಲ್ಲಿ ಕಪ್ಪು ಬಣ್ಣದ ಎಳೆಗಳು ಮೂಡುತ್ತವೆ.
– ಚರ್ಮದಲ್ಲಿ ಯಾವುದೇ ರೀತಿಯ ಬದಲಾವಣೆ, ಮೊದಲೇ ಇರುವ ಮಚ್ಚೆಯ ಬಣ್ಣ ಹಾಗೂ ಗಾತ್ರದಲ್ಲಿ ವ್ಯತ್ಯಾಸ
– ಮಚ್ಚೆಯಲ್ಲಿ ನೋವು, ದ್ರಾವಣದಂತಹ ಅಂಟು ಹೊರಬರುವುದು ಅಥವಾ ರಕ್ತ ಬರಬಲ್ಲದು.
– ಮಚ್ಚೆ ಹೊಳೆಯುವುದು, ವ್ಯಾಕ್ಸ್ (Wax)ನಂತೆ ನುಣುಪಾಗುವುದು.

ಮೆಲನೋಮಾಕ್ಕೆ ಕಾರಣವೇನು?
ಮೆಲನಿನ್ ಉತ್ಪಾದಿಸುವ ಕೋಶಗಳಾದ ಮಿಲಾನೋಸೈಟ್ಸ್ ನಲ್ಲಿ ವ್ಯತ್ಯಾಸವಾದಾಗ ಮೆಲನೋಮಾ ಉಂಟಾಗುತ್ತದೆ. ಸಾಮಾನ್ಯವಾಗಿ ಚರ್ಮದ ಕೋಶಗಳು ಸುವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದುತ್ತವೆ. ಚರ್ಮದ ಸ್ತರದಲ್ಲಿ ಹಳೆಯ ಕೋಶಗಳು ಸತ್ತು ಹೊಸ ಕೋಶಗಳು ಹುಟ್ಟುತ್ತವೆ.

ಈ ಸಮಯದಲ್ಲಿ ಕೆಲವು ಕೋಶಗಳ ಡಿಎನ್ಎಗೆ ತೊಂದರೆಯುಂಟಾಗುತ್ತದೆ. ಆಗ ಹೊಸ ಹೊಸ ಕೋಶಗಳ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚಲು ಶುರುವಾಗುತ್ತದೆ. ಇದರಿಂದ ಕ್ಯಾನ್ಸರ್ ಯುಕ್ತ ಕೋಶಗಳು ನಿರ್ಮಾಣವಾಗುತ್ತವೆ.