AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು... ಪ್ರಯತ್ನಿಸಿ ನೋಡಿ

Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
TV9 Web
| Updated By: ಸಾಧು ಶ್ರೀನಾಥ್​|

Updated on: Oct 04, 2022 | 12:57 PM

Share

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು… ಪ್ರಯತ್ನಿಸಿ ನೋಡಿ

ಚಪ್ಪಾಳೆ ತಟ್ಟುವುದು ಹೇಗೆ? ನೇರವಾಗಿ ನಿಲ್ಲಿರಿ, ನಿಮ್ಮ ಎರಡೂ ಕೈಗಳನ್ನು ಭುಜಕ್ಕೆ ಎದುರು-ಬದುರಾಗಿ ಮೇಲೆತ್ತಿರಿ. ಕೈಗಳನ್ನು ಸಾಧ್ಯವಾದಷ್ಟೂ ಅಗಲಿಸಿ. ನಿಧಾನವಾಗಿ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಸ್ವಲ್ಪ ಆಯಾಸವಾದಂತೆನಿಸಿದರೆ ಒಂದರ್ಧ ನಿಮಿಷ ಕೈ ಕೆಳಗೆ ಬಿಟ್ಟು ವಿಶ್ರಾಂತಿ ಪಡೆಯಿರಿ. ಮತ್ತೇ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಹೀಗೆ 4-5 ಸಲ ಮಾಡಿರಿ. ಒಂದು ವಾರದಲ್ಲಿ ನಿಮಗಿದು ರೂಢಿಯಾಗುವುದು. ನಿಮಿಷಕ್ಕೆ 50 ರಿಂದ 100 ಚಪ್ಪಾಳೆಯನ್ನು ನೀವು ಹೊಡೆಯಬಹುದು. ಅಂದರೆ, 5 ನಿಮಿಷದಲ್ಲಿ 300 ರಿಂದ 500 ಚಪ್ಪಾಳೆ ಹೊಡೆಯಬಹುದು (Clapping has Incredible Benefits).

ಮುಂಜಾನೆ ನಿತ್ಯ ಕರ್ಮಾದಿಗಳನ್ನು ಮಾಡಿದ ಮೇಲೆ 5 ನಿಮಿಷ ಚಪ್ಪಾಳೆ ಹೊಡೆಯುವ ಕಾರ್ಯಕ್ರಮವನ್ನು ನಿಯಮಿತವಾಗಿ ಮಾಡಿರಿ. ನಂತರ 5 ನಿಮಿಷ ಮಲಗಿ, ಅಂಗಾಂಗಗಳನ್ನು ಸಡಿಲ ಬಿಟ್ಟು ಶವಾಸನ ಮಾಡಿರಿ. ನಿಮಗೆ ಮಾಡಬೇಕೆಂಬ ಜರೂರತ್ತು ಮೂಡಿದರೆ ಸಂಜೆ ಊಟಕ್ಕೆ ಮೊದಲು ಇದೇ ಕಾರ್ಯಕ್ರಮ ಮಾಡಬಹುದು. ಇದನ್ನು ಒಬ್ಬರೇ ಮಾಡಬಹುದು ಅಥವಾ ತಂಡೋಪಾದಿಯಲ್ಲಿಯೂ ಮಾಡಬಹುದು.

ತಿಂಗಳಲ್ಲಿ ಬೊಜ್ಜು ಕರಗುವುದು. ರಕ್ತದ ಒತ್ತಡ ಸಮಾಧಾನಕರ ಸ್ಥಿತಿಗೆ ಇಳಿಯುವುದು. ಸಕ್ಕರೆ ರೋಗ ನಿಯಂತ್ರಣಕ್ಕೆ ಬರುವುದು. ಕಣ್ಣಿನ ದೃಷ್ಟಿ ಸ್ಪಷ್ಟವಾಗುವುದು. ಕಿವಿಗಳು ಚುರುಕಾಗುವವು. ಒಟ್ಟಾರೆ ಶರೀರ ಲವಲವಿಕೆಯಿಂದ ಕೂಡಿರುವ (motivation) ಅನುಭವ ನಿಮ್ಮದಾಗುವುದು.

“ಆಕ್ಯುಪ್ರೆಶರ್” ತತ್ವ ಇದರಲ್ಲಿ ಅಡಗಿದ್ದು, ಎರಡೂ ಅಂಗೈಯಲ್ಲಿರುವ ಸಹಸ್ರಾರು ಬಿಂದುಗಳಲ್ಲಿ ಚಪ್ಪಾಳೆಯಿಂದ ಒತ್ತಡ ಉಂಟಾಗಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತಾಗುವುದರಿಂದ ಆರೋಗ್ಯ ಲಾಭವಾಗುವುದಕ್ಕೆ ಕಾರಣವೆಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ರೋಗರುಜಿನಗಳಿಂದ ಔಷಧೋಪಚಾರ ದಿನೇ ದಿನೇ ದುಬಾರಿಯಾಗುತ್ತಿರುವಾಗ ಯಾವ ಖರ್ಚು, ವೆಚ್ಚವಿಲ್ಲದೆ ಚಪ್ಪಾಳೆ ಹೊಡೆಯುವ ಪ್ರಯೋಗವನ್ನು ಆರೋಗ್ಯದ ಬಗೆಗೆ ಕಾಳಜಿಯುಳ್ಳವರು ಯಾಕೆ ಮಾಡಿ ನೋಡಬಾರದು? ಅವಶ್ಯವಾಗಿ ಮಾಡಿ ನೋಡಿ, ಅದರ ಪ್ರಯೋಜನವನ್ನು ಪಡೆಯಿರಿ. (ಬರಹ- ಎಸ್.​ಹೆಚ್.​ ನದಾಫ್)​

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?