
ಕಾನ್ಪುರದಲ್ಲಿ, ನಾಲ್ಕು ವರ್ಷದ ಮಗುವೊಂದು ಎಲೆಕ್ಟ್ರಾಲ್ ಪೌಡರ್ ಕುಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಧಿವಿಜ್ಞಾನ ಇಲಾಖೆ ಆ ಪ್ಯಾಕೆಟ್ ಮತ್ತು ಬಾಟಲಿಯನ್ನು ತನಿಖೆಗಾಗಿ ಕಳುಹಿಸಿದೆ. ಆದರೆ ಈ ಘಟನೆಯ ನಂತರ, ಎಲೆಕ್ಟ್ರಾಲ್ ಪೌಡರ್ (Electral Powder) ಆರೋಗ್ಯಕ್ಕೆ ಮಾರಕವಾಗಬಹುದೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ನಿಮಗೆ ತಿಳಿದಿರಬಹುದು ಇದು ನಿರ್ಜಲೀಕರಣ (dehydration) ಸಮಸ್ಯೆ ತಡೆಯಲು ಬಳಸುವ ಒಂದು ರೀತಿಯ ಓಆರ್ಎಸ್ ಆಗಿದೆ. ಮಕ್ಕಳಾಗಲಿ ಅಥವಾ ವಯಸ್ಕರಲ್ಲಾಗಲಿ ಅತಿಸಾರ ಅಥವಾ ವಾಂತಿ ಕಂಡುಬಂದು ದೇಹದಲ್ಲಿರುವ ನೀರಿನ ಪ್ರಮಾಣ ಕಡಿಮೆಯಾದಾಗ ಈ ನಷ್ಟವನ್ನು ಪತ್ತೆ ಪುನಃ ತುಂಬಲು ವೈದ್ಯರು ಎಲೆಕ್ಟ್ರಾಲ್ ಕುಡಿಯಲು ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಲು ಸಹಕಾರಿಯಾಗಿದೆ. ಆದರೆ ಇತರ ಔಷಧಿಯಂತೆ, ಇದರ ಮಿತಿಮೀರಿದ ಪ್ರಮಾಣ ಅಪಾಯಕಾರಿಯಾಗಬಹುದೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ತಿಳಿದುಕೊಳ್ಳಿ.
ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಸಂತ್ರಮ್ ಯಾದವ್ ಅವರು ಹೇಳುವ ಪ್ರಕಾರ, ಎಲೆಕ್ಟ್ರೋಲ್ ನ ಮಿತಿಮೀರಿದ ಸೇವನೆಯು ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟ ತೊಂದರೆಗೊಳಗಾಗುತ್ತದೆ, ಇದು ಹೃದಯ ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಆದರೆ ಇದು ಸಾವಿಗೆ ಕಾರಣವಾಗುತ್ತದೆ ಎಂಬುದು ನಿಜವಲ್ಲ, ಆದರೆ ಆರೋಗ್ಯದ ಸ್ಥಿತಿ ಗಂಭೀರವಾಗುವ ಅಪಾಯವಿರುತ್ತದೆ. ಹಾಗಾಗಿ ಇದನ್ನು ನಿಗದಿತ ಪ್ರಮಾಣದಲ್ಲಿ ಮತ್ತು ಅಗತ್ಯವಿರುವವರು ಮಾತ್ರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮಿತಿಮೀರಿದ ಸೇವನೆ ಹೃದಯಕ್ಕೂ ಹಾನಿ ಮಾಡುತ್ತದೆ.
ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ರಾಕೇಶ್ ಕುಮಾರ್ ಹೇಳುವ ಪ್ರಕಾರ, ಎಲೆಕ್ಟ್ರಾಲ್ ಪೌಡರ್ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಬೇಕು. ಯಾರಿಗಾದರೂ ತೀವ್ರ ವಾಂತಿ ಅಥವಾ ಅತಿಸಾರ ಕಂಡುಬಂದಾಗ ಮಾತ್ರ ಇದನ್ನು ಸೇವಿಸಬೇಕು. ಕಾರಣವಿಲ್ಲದೆ ಪ್ರತಿದಿನ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಇದರ ಡೋಸ್ ಕೂಡ ಪ್ರತಿಯೊಬ್ಬರಿಗೂ ಬೇರೆಬೇರೆಯಾಗಿರುತ್ತದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ: 1 ಲೀಟರ್ ಶುದ್ಧ ನೀರಿಗೆ 1 ಪ್ಯಾಕೆಟ್ ಎಲೆಕ್ಟ್ರಾಲ್ ಅನ್ನು ಮಿಶ್ರಣ ಮಾಡಿ. ಈ ದ್ರಾವಣವನ್ನು ದಿನವಿಡೀ ಕುಡಿಯುತ್ತಿರಬೇಕು.
ಮಕ್ಕಳಿಗೆ (2 ವರ್ಷಕ್ಕಿಂತ ಮೇಲ್ಪಟ್ಟವರು): 500 ಮಿ. ಲೀ ನೀರಿನಲ್ಲಿ 1 ಪೌಚ್ ಮಿಶ್ರಣ ಮಾಡಿ. ಮಗುವಿಗೆ ಪ್ರತಿ 5- 10 ನಿಮಿಷಗಳಿಗೊಮ್ಮೆ ಸಣ್ಣ ಸಿಪ್ಸ್ ನೀಡಿ.
2 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ: ತೀರಾ ಚಿಕ್ಕ ಮಕ್ಕಳಿಗೆ, ವೈದ್ಯರ ಸಲಹೆಯ ಪ್ರಕಾರ ಅವರು ತಿಳಿಸಿರುವ ಡೋಸೇಜ್ ಅನ್ನು ಅನುಸರಿಸುವ ಮೂಲಕ ಎಲೆಕ್ಟ್ರೋಲ್ ನೀಡಿ.
ಇದನ್ನೂ ಓದಿ: ಚಿಕ್ಕ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯವಹಿಸದಿರಿ, ಅವರ ಜೀವಕ್ಕೆ ಅಪಾಯ ತರಬಹುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ