AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದ್ಯಾ, ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ನೋಡಿ

ಹೆಚ್ಚಿನವರು ಚಹಾದ ಜೊತೆಗೆ ಬಿಸ್ಕತ್ತುಗಳನ್ನು ತಿನ್ನಲು ಬಯಸುತ್ತಾರೆ. ಈ ಅಭ್ಯಾಸ ಕೆಲವರಿಗೆ ಬಹಳ ಇಷ್ಟ. ಅಷ್ಟು ಮಾತ್ರವಲ್ಲ, ಹಲವರು ಇದನ್ನು ಆರೋಗ್ಯಕರ ಆಯ್ಕೆಯೆಂದು ತಿಳಿದಿರುತ್ತಾರೆ. ಆದರೆ ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆ ತಂಬಾಕಿನಷ್ಟೇ ಅಪಾಯಕಾರಿಯಾಗಿದ್ದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿಲ್ಲ. ಹೌದು, ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಆರೋಗ್ಯಕರ ಆಯ್ಕೆಯಲ್ಲ. ನೀವು ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವುದನ್ನು ಇಷ್ಟ ಪಡುತ್ತಿದ್ದರೆ ಈ ಸ್ಟೋರಿಯನ್ನು ತಪ್ಪದೆ ಓದಿ.

ನಿಮಗೂ ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದ್ಯಾ, ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ನೋಡಿ
Tea And Biscuits
ಪ್ರೀತಿ ಭಟ್​, ಗುಣವಂತೆ
|

Updated on: Dec 09, 2025 | 6:32 PM

Share

ಚಹಾ (Tea) ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ!… ಈ ಪಾನೀಯವನ್ನು ಮನಸ್ಸೋ ಇಚ್ಛೆ ಇಷ್ಟಪಡುವವರ ಸಂಖ್ಯೆ ತುಸು ಹೆಚ್ಚಿದೆ. ಕೆಲವರು ತಮ್ಮ ದಿನವನ್ನು ಒಂದು ಕಪ್ ಬಿಸಿ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಬ್ರೆಡ್, ಟೋಸ್ಟ್, ಚಪಾತಿ ಅಥವಾ ಮತ್ತಾವುದಾದರೂ ತಿಂಡಿಯ ಜೊತೆ ಚಹಾ ಕುಡಿದರೆ, ಸಂಜೆಯ ಚಹಾವನ್ನು ಬಿಸ್ಕತ್ತುಗಳ ಜೊತೆ ಸೇವನೆ ಮಾಡುತ್ತಾರೆ. ಕೆಲವರು ಇದನ್ನು ಆರೋಗ್ಯಕರ ಆಯ್ಕೆಯೆಂದು ತಿಳಿದಿರುತ್ತಾರೆ. ಆದರೆ ಈ ಸಂಯೋಜನೆ ತಂಬಾಕಿನಷ್ಟೇ ಅಪಾಯಕಾರಿ ಎಂಬುದು ಕೆಲವರಿಗೆ ತಿಳಿದಿಲ್ಲ. ಹೌದು, ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಆರೋಗ್ಯಕರ ಆಯ್ಕೆಯಲ್ಲ. ನೀವು ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವುದನ್ನು ಇಷ್ಟ ಪಡುತ್ತಿದ್ದರೆ ಈ ಸ್ಟೋರಿಯನ್ನು ತಪ್ಪದೆ ಓದಿ.

ಹೆಚ್ಚಿನವರು ಬಿಸ್ಕತ್ತುಗಳನ್ನು ಚಹಾದಲ್ಲಿ ಮುಳುಗಿಸಿ ತಿನ್ನುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಬಿಸ್ಕತ್ತುಗಳು ಸಂಸ್ಕರಿಸಿದ ಹಿಟ್ಟು, ಅತಿಯಾದ ಸಕ್ಕರೆ, ಉಪ್ಪು ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ. ಹಾಗಾಗಿ ಚಹಾದೊಂದಿಗೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯಾಗುತ್ತದೆ. ಅಷ್ಟೇ ಅಲ್ಲ, ಇನ್ನೂ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ತಜ್ಞರು ಕೂಡ ಆರೋಗ್ಯದ ದೃಷ್ಟಿಯಿಂದ ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆಯು ತುಂಬಾ ಅಪಾಯಕಾರಿ ಎನ್ನುತ್ತಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಚಹಾ ಮತ್ತು ಬಿಸ್ಕತ್ತುಗಳ ಸೇವನೆಯಿಂದಾಗುವ ಸಮಸ್ಯೆಗಳು:

  • ಆರೋಗ್ಯ ತಜ್ಞರ ಪ್ರಕಾರ, ಚಹಾ ಮತ್ತು ಬಿಸ್ಕತ್ತುಗಳ ಸೇವನೆಯಿಂದ ಶಕ್ತಿ ಕಡಿಮೆಯಾಗುತ್ತದೆ. ಏಕೆಂದರೆ ಬಿಸ್ಕತ್ತುಗಳು ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ, ಇದು ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು ಮತ್ತು ನಂತರ ಕುಸಿತಕ್ಕೆ ಕಾರಣವಾಗಬಹುದು, ಮಾತ್ರವಲ್ಲ ಇದರಿಂದ ಆಯಾಸವಾಗಬಹುದು.
  • ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆ ಹೊಟ್ಟೆಗೆ ಒಳ್ಳೆಯದಲ್ಲ. ಈ ರೀತಿ ತಿನ್ನುವುದರಿಂದ ಅನಿಲ, ಆಮ್ಲೀಯತೆ ಉಂಟಾಗಬಹುದು. ಏಕೆಂದರೆ ಇದರಲ್ಲಿ ಬಳಕೆಯಾದ ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಕೊಬ್ಬು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
  • ಇನ್ನು, ಚಹಾದಲ್ಲಿ ಕೆಫೀನ್ ಮತ್ತು ಸಕ್ಕರೆ ಇರುತ್ತದೆ. ಮತ್ತೊಂದೆಡೆ, ಬಿಸ್ಕತ್ತುಗಳು ಸಂಸ್ಕರಿಸಿದ ಹಿಟ್ಟು, ಅನಾರೋಗ್ಯಕರ ಕೊಬ್ಬುಗಳು ಮತ್ತು ಸಕ್ಕರೆಯಿಂದ ತುಂಬಿರುತ್ತವೆ. ಹಾಗಾಗಿ ಇವೆರಡನ್ನು ಒಟ್ಟಿಗೆ ಸೇವನೆ ಮಾಡುವುದು ಒಳ್ಳೆಯದಲ್ಲ.
  • ಚಹಾ ಮತ್ತು ಬಿಸ್ಕತ್ತುಗಳನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಬಿಸ್ಕತ್ತುಗಳಲ್ಲಿ ಕ್ಯಾಲೋರಿ, ಹಿಟ್ಟು, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳು ಅಧಿಕವಾಗಿದ್ದು, ಇವು ದೇಹಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುವುದಿಲ್ಲ. ಆದರೆ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ತೂಕ ಹೆಚ್ಚಾಗುತ್ತದೆ.

ಚಹಾದೊಂದಿಗೆ ಏನನ್ನಾದರೂ ತಿನ್ನಬೇಕೆಂದಾಗ ಮಖಾನಾ ಒಳ್ಳೆಯ ಆಯ್ಕೆ. ಪರ್ಯಾಯವಾಗಿ, ಹುರಿದ ಕಡಲೆ, ಕಡಲೆಕಾಯಿ ಅಥವಾ ಇತರ ಆರೋಗ್ಯಕರ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಪ್ರಯತ್ನಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ