When to start with solid: ಶಿಶುವಿಗೆ ಘನ ಆಹಾರ ನೀಡಲು ಉತ್ತಮ ಸಮಯ ಯಾವುದು ತಿಳಿದುಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2025 | 2:34 PM

ಜೀವನದ ಮೊದಲ ದಿನ ಅಂದರೆ ಮಗು ಹಿಟ್ಟಿದಾಗಿನಿಂದ 6 ತಿಂಗಳ ವರೆಗೆ, ಮಗು ತನ್ನ ಬೆಳವಣಿಗೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶವನ್ನು ತಾಯಿಯ ಎದೆ ಹಾಲಿನಿಂದ ಪಡೆಯುತ್ತದೆ. ಆ ಸಮಯದಲ್ಲಿ ಅವರಿಗೆ ಬೇರೆ ಏನೂ ಬೇಕಾಗುವುದಿಲ್ಲ. ನಂತರ ಅನೇಕರು ಮಗುವಿಗೆ ಘನ ಆಹಾರವನ್ನು ಅಂದರೆ ಧಾನ್ಯ ಮತ್ತು ಮಗುವಿಗೆ ಪೌಷ್ಠಿಕಾಂಶವಿರುವ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ. ಆದರೆ ಅದನ್ನು ಯಾವಾಗ ಪ್ರಾರಂಭಿಸಬೇಕು? ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

When to start with solid: ಶಿಶುವಿಗೆ ಘನ ಆಹಾರ ನೀಡಲು ಉತ್ತಮ ಸಮಯ ಯಾವುದು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ನಿಮಗೆ ತಿಳಿದಿರಬಹುದು ಶಿಶುವಿನ ಲಾಲನೆ- ಪಾಲನೆ ಮಾಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದರಲ್ಲಿಯೂ ಮಗುವಿಗೆ ಘನ ಆಹಾರ ನೀಡಬೇಕಾದಾಗ ಅನೇಕ ಪ್ರಶ್ನೆಗಳು ಮನಸ್ಸಿಗೆ ಬರುತ್ತವೆ. ಯಾವಾಗ ಆಹಾರ ನೀಡಬೇಕು, ಏನು ತಿನ್ನಿಸಬೇಕು? ಎಂಬಿತ್ಯಾದಿ ಯೋಚನಗಳು ಬರುವುದು ಸಾಮಾನ್ಯ, ಆದರೆ ಮಗುವಿಗೆ ಏನು ಅಗತ್ಯ ಎಂದು ತಿಳಿದುಕೊಳ್ಳುವುದು ಮುಖ್ಯ. ಯುನಿಸೆಫ್ ಹೇಳುವ ಪ್ರಕಾರ, ಜೀವನದ ಮೊದಲ ದಿನ ಅಂದರೆ ಮಗು ಹಿಟ್ಟಿದಾಗಿನಿಂದ 6 ತಿಂಗಳ ವರೆಗೆ, ಮಗು ತನ್ನ ಬೆಳವಣಿಗೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶವನ್ನು ತಾಯಿಯ ಎದೆ ಹಾಲಿನಿಂದ ಪಡೆಯುತ್ತದೆ. ಆ ಸಮಯದಲ್ಲಿ ಅವರಿಗೆ ಬೇರೆ ಏನೂ ಬೇಕಾಗುವುದಿಲ್ಲ. ನಂತರ ಅನೇಕರು ಮಗುವಿಗೆ ಘನ ಆಹಾರವನ್ನು ಅಂದರೆ ಧಾನ್ಯ ಮತ್ತು ಮಗುವಿಗೆ ಪೌಷ್ಠಿಕಾಂಶವಿರುವ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ. ಆದರೆ ಅದನ್ನು ಯಾವಾಗ ಪ್ರಾರಂಭಿಸಬೇಕು? ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಗುವಿಗೆ 6 ತಿಂಗಳು ಆಗುವ ವರೆಗೆ ತಾಯಿಯ ಹಾಲನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆಹಾರಗಳನ್ನು ನೀಡುವುದನ್ನು ತಪ್ಪಿಸಿ. ಏಕೆಂದರೆ ಇದು ಅತಿಸಾರದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ, ಇದು ಮಗುವಿನ ಆರೋಗ್ಯವನ್ನು ಹದಗೆಡಿಸುತ್ತದೆ. ಮಾತ್ರವಲ್ಲ, ಕೆಲವೊಮ್ಮೆ ಇದು ಮಗುವಿನ ಜೀವಕ್ಕೂ ಅಪಾಯಕಾರಿಯಾಗಬಹುದು. ಹಾಗಾಗಿ ಮಗುವಿಗೆ ಆರು ತಿಂಗಳು ಆಗುವ ವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಿ. ಈ ಅವಧಿಯಲ್ಲಿ ನೀರು, ಚಹಾ, ರಸ, ಗಂಜಿ ಅಥವಾ ಇತರ ಯಾವುದೇ ಆಹಾರ ಅಥವಾ ದ್ರವ ರೂಪದ ಆಹಾರಗಳನ್ನು ಕೂಡ ನೀಡಬಾರದು.

ಇದನ್ನೂ ಓದಿ: ಚೀನಾದಲ್ಲಿ ಕೊರೊನಾದಂತೇ ಹೊಸ ವೈರಸ್​​ ಪತ್ತೆ; ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿಯ ಆತಂಕ

ಯಾವ ಸಮಯದಲ್ಲಿ ಲಘು ಆಹಾರ ನೀಡಬೇಕು?

ನಿಮ್ಮ ಮಗು ಬೆಳೆದಂತೆ, ಪೌಷ್ಠಿಕಾಂಶದ ಅಗತ್ಯತೆಗಳು ಸಹ ಬೆಳೆಯುತ್ತವೆ. ಜೀವನದ ಎರಡು ವರ್ಷಗಳಲ್ಲಿ, ಆಹಾರದ 75 ಪ್ರತಿಶತದಷ್ಟು ಭಾಗ ಮಗುವಿನ ಮೆದುಳಿನ ಬೆಳವಣಿಗೆಗೆ ಮತ್ತು ಅದು ರೂಪುಗೊಳ್ಳುವುದಕ್ಕೆ ಹೋಗುತ್ತದೆ. ಹಾಗಾದರೆ ನಿಮ್ಮ ಮಗುವಿಗೆ ಘನ ಆಹಾರವನ್ನು ಯಾವಾಗ ಪರಿಚಯಿಸಬೇಕು? ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಸರಿಯಾದ ಸಮಯ ಇರಬೇಕು. ಮಗುವಿಗೆ ಆರು ತಿಂಗಳಾದಾಗ, ದಿನಕ್ಕೆ ಎರಡು ಬಾರಿ ಗಂಜಿ, ಸಿಪ್ಪೆ ಸುಲಿದ ಹಣ್ಣುಗಳು ಅಥವಾ ತರಕಾರಿಗಳಂತಹ ಎರಡರಿಂದ ಮೂರು ಚಮಚ ಲಘು ಆಹಾರವನ್ನು ಮಾತ್ರ ನೀಡಲು ಪ್ರಾರಂಭಿಸಿ. ಇದರೊಂದಿಗೆ, ಮೊದಲಿನಂತೆ ಆಗಾಗ ಸ್ತನ್ಯಪಾನ ಮುಂದುವರಿಸಿ.

ಈ ತಪ್ಪು ಮಾಡಬೇಡಿ

ನೀವು ಮಗುವಿಗೆ ಘನ ವಸ್ತುಗಳನ್ನು ನೀಡಲು ಪ್ರಾರಂಭಿಸಿದಾಗ, ಶಿಶುವಿನ ಕೈಗಳನ್ನು ಸಾಬೂನಿನಿಂದ ತೊಳೆದ ನಂತರವೇ ಆಹಾರ ನೀಡುವುದನ್ನು ಮರೆಯಬೇಡಿ. ಅದು ಅಲ್ಲದೆ, ಮಗುವು ಪದೇ ಪದೇ ಬಾಯಿ ಕೈ ಹಾಕಲು ಆರಂಭ ಮಾಡಿದಾಗ ಘನ ಆಹಾರವನ್ನು ನೀಡಬೇಕು ಎಂದು ಜನರು ಅನೇಕ ಬಾರಿ ಸಲಹೆ ನೀಡುವುದನ್ನು ಸಹ ಕಾಣಬಹುದು. ಆದರೆ ಆ ರೀತಿ ಮಾಡಬೇಡಿ. ಮಗುವಿಗೆ ನೀವು ಸ್ತನ್ಯಪಾನ ಮಾಡದಿದ್ದರೂ ಸಹ, ಘನ ಆಹಾರವನ್ನು ಪರಿಚಯಿಸಲು ಉತ್ತಮ ಸಮಯ 6 ತಿಂಗಳುಗಳು ಆದ ಮೇಲೆ. ಈ ವಯಸ್ಸು ಎಲ್ಲಾ ಮಕ್ಕಳಿಗೆ ಸೂಕ್ತವಾಗಿದೆ, ಅವರು ಸ್ತನ್ಯಪಾನ ಮಾಡುತ್ತಿರಲಿ ಅಥವಾ ಇಲ್ಲದಿರಲಿ ಈ ವಿಷಯವನ್ನು ಪೋಷಕರು ಮರೆಯಬಾರದು.

ನಿಮ್ಮ ಮಗುವಿನ ದೇಹವು ಬೆಳೆಯಲು ಹೆಚ್ಚುವರಿ ಶಕ್ತಿ ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಹೆಚ್ಚು ಸಮಯ ಕಾಯುವುದು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಗುವಿನ ತೂಕದ ಮೇಲೂ ಪರಿಣಾಮ ಬೀರಬಹುದು. ಶಿಶುವಿಗೆ ಆರು ತಿಂಗಳು ಆದ ಮೇಲೆ ಅವರಿಗೆ ಘನ ಆಹಾರವನ್ನು ಪರಿಚಯಿಸಬೇಕು ಇದರಿಂದ ಅವರು ತಮ್ಮ ಬೆಳೆಯುತ್ತಿರುವ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶವನ್ನು ಪಡೆಯುತ್ತಾರೆ.

ಸೂಚನೆ: ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ