ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಗಾಯವನ್ನು ಅನುಭವಿಸಿದಾಗ ಅಥವಾ ನೋವು ಉಂಟಾದಾಗ ಆತನ ಕಣ್ಣುಗಳಲ್ಲಿ ನೀರು ಬರುವುದು ಸಾಮಾನ್ಯವಾಗಿದೆ. ಜನರು ಸಾಮಾನ್ಯವಾಗಿ ಅಳುವುದನ್ನು ದೌರ್ಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿಯೇ ಅನೇಕ ಬಾರಿ ಕಣ್ಣೀರನ್ನು (Tears) ಒಳಗೆ ಹಿಡಿದಿಟ್ಟುಕೊಳ್ಳುತ್ತೇವೆ ಮತ್ತು ಅಳುವುದನ್ನು ತಪ್ಪಿಸುತ್ತೇವೆ. ಆದರೆ ಕಣ್ಣೀರು ಹಿಡಿದಿಟ್ಟುಕೊಳ್ಳುವುದು ನಮ್ಮ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಕಣ್ಣೀರು ಕಣ್ಣುಗಳನ್ನು ಶುಷ್ಕತೆಯಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಸಲು ಸಹಾಯ ಮಾಡುತ್ತದೆ.
ಕಣ್ಣೀರು 98 ಪ್ರತಿಶತದಷ್ಟು ನೀರು ಹೊಂದಿರುತ್ತದೆ ಆ ಮೂಲಕ ಕಣ್ಣುಗಳನ್ನು ಸ್ವಚ್ಛಗೊಳಿಸಿ ಸೋಂಕನ್ನು ತಡೆಯುತ್ತದೆ. ಕಣ್ಣೀರು ಎಂದರೇನು ಮತ್ತು ಕಣ್ಣೀರು ಏಕೆ ಹರಿಯುತ್ತದೆ ಎಂಬುದನ್ನು ನಾವು ತಿಳಿಯುವುದು ಸೂಕ್ತ. ಆಯುರ್ವೇದದಲ್ಲಿ ಅಳುವ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಆಯುರ್ವೇದದ ಪ್ರಕಾರ, ನೀವು ಅಳುವುದರ ಮೂಲಕ ಕಣ್ಣೀರು ಹರಿಯುವಂತೆ ಮಾಡಬೇಕು. ಇದನ್ನು ನಿಲ್ಲಿಸಬಾರದು ಏಕೆಂದರೆ ಹೀಗೆ ಮಾಡುವುದರಿಂದ ಅದರ ಅಡ್ಡ ಪರಿಣಾಮಗಳು ದೇಹದ ಮೇಲೆ ಕಂಡುಬರುತ್ತವೆ.
ಕಣ್ಣೀರಿನಲ್ಲಿ ಎಷ್ಟು ವಿಧಗಳಿವೆ ?
ಮೊದಲೆಯದಾಗಿ ಯಾವುದೇ ಕಸ ಅಥವಾ ಹೊಗೆ ಇದ್ದಾಗ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ. ಇದು ಸಾಮಾನ್ಯ ಕೂಡ. ಎರಡನೆಯದು ಬೇಸಲ್ ಟಿಯರ್ ಎಂದು ಕರೆಯುತ್ತೇವೆ. ಇದು 98 ಪ್ರತಿಶತದಷ್ಟು ನೀರು ಹೊಂದಿದ್ದು, ಇದು ಕಣ್ಣುಗಳನ್ನು ನಯಗೊಳಿಸುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಮೂರನೆಯದು ತೊಂದರೆಗಳು ಎದುರಾದಾಗ ನಮ್ಮ ಕಣ್ಣುಗಳಿಂದ ಹೊರಬರುವ ಭಾವನಾತ್ಮಕ ಕಣ್ಣೀರಾಗಿರುತ್ತದೆ.
ಕಣ್ಣೀರನ್ನು ನಿಲ್ಲಿಸುವುದು ಆರೋಗ್ಯಕ್ಕೆ ಏಕೆ ಹಾನಿಕಾರಕ?
ಆಯುರ್ವೇದದ ಪ್ರಕಾರ, ಕಣ್ಣಿನಿಂದ ಬರುವ ಕಣ್ಣೀರನ್ನು ಎಂದಿಗೂ ತಡೆಯಬಾರದು ಏಕೆಂದರೆ ಅಳುವ ಪ್ರವೃತ್ತಿಯು ತಲೆನೋವು, ಮೂಗುಕಟ್ಟುವಿಕೆ, ಕಣ್ಣಿನ ಕಾಯಿಲೆ ಮತ್ತು ಹೃದಯ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಳು ನಿಯಂತ್ರಿಸಬೇಡಿ. ಕಣ್ಣೀರು ಹರಿಯಲು ಬಿಡಿ. ಇದು ಹೃದ್ರೋಗ, ಖಿನ್ನತೆ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲ, ಅಳುವುದರಿಂದ ದೇಹದಲ್ಲಿ ಆಕ್ಸಿಟೋಸಿನ್, ಎಂಡಾರ್ಫಿನ್ ನಂತಹ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ನಾವು ಒತ್ತಡದಿಂದ ಕಣ್ಣೀರು ಹಾಕುವಾಗ ದೇಹದಲ್ಲಿನ ವಿಷವು ಕಣ್ಣೀರಿನ ಸಹಾಯದಿಂದ ನಿಧಾನವಾಗಿ ಹೊರಬರಲು ಪ್ರಾರಂಭಿಸುತ್ತದೆ. ಈ ಕಣ್ಣೀರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ.
ಇದನ್ನೂ ಓದಿ:
ಅಳು ಮತ್ತು ನಗು ಎರಡೂ ಭಾವನೆಗಳೇ, ಅಳುವುದು ತಪ್ಪಲ್ಲ ಮತ್ತು ಬಲಹೀನತೆಯೂ ಅಲ್ಲ: ಡಾ ಸೌಜನ್ಯ ವಶಿಷ್ಠ
ಚಳಿಗಾಲದಲ್ಲಿ ಈ ತರಕಾರಿಗಳ ಸೇವನೆ ಬಹಳ ಮುಖ್ಯ; ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ