ಬಿಡುವಿಲ್ಲದ ಜೀವನಶೈಲಿಯಿಂದಾಗಿ ಅನೇಕರು ಫಾಸ್ಟ್ ಫುಡ್ನಂತಹ ಅನಾರೋಗ್ಯಕರ ಆಹಾರಗಳನ್ನು ಸೇವಿಸಿ ಹೊಟ್ಟೆಯನ್ನು ತುಂಬಿಕೊಳ್ಳುತ್ತಾರೆ. ಇದು ನಿಮ್ಮ ದೇಹಕ್ಕೆ ಹಾನಿ ಮಾಡುತ್ತದೆ ಮುಖ್ಯವಾಗಿ ನಿಮ್ಮ ಯಕೃತ್ತು ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಜೀವನಶೈಲಿಯಿಂದ ಆರೋಗ್ಯ ಕ್ರಮೇಣ ಹದಗೆಡುತ್ತದೆ. ವಾಸ್ತವವಾಗಿ ಫ್ಯಾಟಿ ಲಿವರ್ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತದೆ. ಕೊಬ್ಬಿನ ಯಕೃತ್ತನ್ನು ಎರಡು ವಿಧಗಳಲ್ಲಿ ಗುರುತಿಸಲಾಗುತ್ತದೆ. ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಮತ್ತು ಇನ್ನೊಂದು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ.
ಆಲ್ಕೊಹಾಲ್ಯುಕ್ತ ಕೊಬ್ಬಿನ ಯಕೃತ್ತು (ARLD) ಅತಿಯಾದ ಮದ್ಯ ಸೇವನೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಮದ್ಯಪಾನ ಮಾಡದವರಿಗೆ ಈ ಸಮಸ್ಯೆ ಬಂದರೆ ಅದನ್ನು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಎನ್ನುತ್ತಾರೆ. ಕೆಲವು ರೋಗಗಳು, ಜೆನೆಟಿಕ್ಸ್, ಆಹಾರ, ಜೀರ್ಣಾಂಗ ವ್ಯವಸ್ಥೆಯ ಕೊರತೆಯಿಂದಾಗಿ ಫ್ಯಾಟಿ ಲಿವರ್ ಸಮಸ್ಯೆ ಸಾಧ್ಯ. ಅಧಿಕ ತೂಕ ಮತ್ತು ಮಧುಮೇಹದಿಂದ ಬಳಲುತ್ತಿರುವ ಜನರು ಕೊಬ್ಬಿನ ಯಕೃತ್ತಿನ ಬೆಳವಣಿಗೆಯ ಅಪಾಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಸೀಲಿಯಾಕ್ ಕಾಯಿಲೆ ಎಂದರೇನು? ರೋಗಲಕ್ಷಣಗಳೇನು?
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ