AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಸ್ಟ್​ ಫುಡ್​​-ಜಂಕ್ ಫುಡ್​​ಗೆ ಅಡಿಕ್ಟ್ ಆಗಿದ್ದೀರಾ? ಹಾಗಾದರೆ ನಿಮ್ಮ ಎದೆ ಝಲ್ಲೆನಿಸುವ ಈ ಸುದ್ದಿಯ ಬಗ್ಗೆ ಮೊದಲು ತಿಳಿದುಕೊಳ್ಳಿ

ಅದೊಂದು ರೀತಿಯಲ್ಲಿ ತಂಬಾಕಿನಲ್ಲಿರುವ ನಿಕೋಟಿನ್ ತರಹ... ಜಂಕ್ ಫುಡ್ ನಲ್ಲಿರುವ ಕಾರ್ಬೋಹೈಡ್ರೇಟ್, ಕೊಬ್ಬುಗಳು ನಮ್ಮ ಮೆದುಳಿನಲ್ಲಿ ಬಿಡುಗಡೆಯಾಗುವ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತವೆ. ಅಂದರೆ, ಸಿಗರೇಟ್ ಸೇದುವವರ ಮೇಲೆ ನಿಕೋಟಿನ್ ಪರಿಣಾಮ ಬೀರುವಂತೆಯೇ ಸಂಸ್ಕರಿಸಿದ ಕಾರ್ಬ್ಸ್​​​ ಅಥವಾ ಕೊಬ್ಬು ಜಂಕ್ ಫುಡ್ ವ್ಯಸನಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಮನುಷ್ಯನ ಮೆದುಳಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅಲ್ಟ್ರಾ ಪ್ರೊಸೆಸ್ಡ್ ಆಹಾರ ಪದ್ಧತಿಯನ್ನು ಹೋಗಲಾಡಿಸಲು ಶೀಘ್ರವೇ ಡಿ-ಅಡಿಕ್ಷನ್ ಸೆಂಟರ್ ಗಳು ಕಾಣಸಿಗಬಹುದು. ಏನಂತೀರಿ?

ಫಾಸ್ಟ್​ ಫುಡ್​​-ಜಂಕ್ ಫುಡ್​​ಗೆ ಅಡಿಕ್ಟ್ ಆಗಿದ್ದೀರಾ? ಹಾಗಾದರೆ ನಿಮ್ಮ ಎದೆ ಝಲ್ಲೆನಿಸುವ ಈ ಸುದ್ದಿಯ ಬಗ್ಗೆ ಮೊದಲು ತಿಳಿದುಕೊಳ್ಳಿ
ಮದ್ಯಪಾನ, ಧೂಮಪಾನದಂತೆ ಜಂಕ್ ಫುಡ್​​ಗೆ ಅಡಿಕ್ಟ್ ಆಗಿದ್ದೀರಾ?
ಸಾಧು ಶ್ರೀನಾಥ್​
|

Updated on: Apr 18, 2024 | 5:06 PM

Share

ಪವನ್​ ಕುಮಾರ್ ಎಂಬ 24 ವರ್ಷದ ಯುವಕ ಬೆಂಗಳೂರಿನ ಪ್ರಸಿದ್ಧ ಕಾಲೇಜಿನಲ್ಲಿ ಎಂಜಿನಿಯರಿಂಗ್​​ ಪದವಿ ಮಾಡುತ್ತಿದ್ದಾರೆ. ಪ್ರತಿದಿನ ಕ್ಲಾಸ್, ಆಮೇಲೆ ಪ್ರಾಜೆಕ್ಟ್ ವರ್ಕ್ ಗಳಲ್ಲೇ ಕಳೆಯುವ ಕುಮಾರ್… ಹಸಿವಾದರೆ ಆನ್ ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡುವುದು ಅಥವಾ ಕ್ಯಾಂಟೀನ್ ಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿದು ಚಿಪ್ಸ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ದಿನಚರಿ ಆತನಿಗೆ ಕಾಮನ್ ಆಗಿಬಿಟ್ಟಿದೆ. ಕಾರಣ ಕೇಳಿದರೆ ಒಂದೆಡೆ ಬಿಡುವಿಲ್ಲದ ದುಡಿತ… ಮತ್ತೊಂದೆಡೆ ಬಾಯಿಗೆ ರುಚಿಯಾಗಿರುವ ಆಹಾರ ಅದಾಗಿರುತ್ತದೆ ಎಂದು ನಗೆಯಾಡುತ್ತಾರೆ. ನನ್ನ ಬಿಡುವಿಲ್ಲದ ಶೆಡ್ಯೂಲ್‌ನಲ್ಲಿ ನಾನು ಅತ್ಯುತ್ತಮವಾದ ಆಹಾರವನ್ನು ತಿನ್ನಲು ಸಿದ್ಧನಾಗಿದ್ದೇನೆ. ಇದಲ್ಲದೆ, ಹೆಚ್ಚು ಶ್ರಮವಿಲ್ಲದೆ ಆರಾಮವಾಗಿ ಈ ಆಹಾರವನ್ನು ತಿನ್ನಬಹುದು. ಖರ್ಚು ಸ್ವಲ್ಪ ಹೆಚ್ಚಾದರೂ.. ಸಮಯ ಉಳಿಯುತ್ತದೆ ಎಂಬ ಸಿದ್ದಾಂತಕ್ಕೆ ಆತ ಜೋತುಬಿದ್ದಿದ್ದಾನೆ. ಫಾಸ್ಟ್ ಫುಡ್ ಎಂಬ ಅಪಾಯಕಾರಿ ಚಟ ವಾಸ್ತವವಾಗಿ ಇದು ಕುಮಾರ್ ಎಂಬೊಬ್ಬರ ಸಮಸ್ಯೆ ಮಾತ್ರವಲ್ಲ.. ಇದು ಇಂದಿನ ಬಹುತೇಕ ಯುವಕ-ಯುವತಿಯರ ಸಮಸ್ಯೆಯೂ ಹೌದು. ಮದ್ಯದ ವ್ಯಸನಿಗಳ ಗೋಳು ಏನೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಸಿಗರೇಟ್ ಇಲ್ಲದೇ ಹೋದರೆ ಸ್ಮೋಕರ್ಸ್​​​ ನರಳಾಡುವ ಬಗ್ಗೆ ನಮಗೆ ತಿಳಿದಿದೆ. ಹಾಗೆಯೇ ಡ್ರಗ್​ ಅಡಿಕ್ಟ್​​​​ಗಳ ಬಗ್ಗೆಯೂ ತಿಳಿಸಿದೆ. ಆದರೆ ಫಾಸ್ಟ್ ಫುಡ್ ಗೆ ಅಡಿಕ್ಟ್ ಆಗಿರುವವರ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ..? ಅಲ್ಲ ಹಸಿವಾದರೆ ಹೊಟ್ಟೆ ತುಂಬಿಸಿಕೊಳ್ಳಲು ಫುಡ್​ ತೆಗೆದುಕೊಳ್ಳುವುದು ಚಟ ಹೇಗಾದೀತು? ಅಂದರೆ ಕುಡಿತ ತಪ್ಪು, ಧೂಮಪಾನ ಇನ್ನೂ ತಪ್ಪು, ಡ್ರಗ್ಸ್ ತೆಗೆದುಕೊಳ್ಳುವುದು ಮತ್ತಷ್ಟು ಮಗದಷ್ಟು ತಪ್ಪು. ಆದರೆ ಫಾಸ್ಟ್​ ಫುಡ್​​ ಅಥವಾ ಜಂಕ್ ಫುಡ್​​ ಎಂಬ ಆಹಾರ ಸೇವನೆಯೂ ತಪ್ಪೇ?...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ