
ಚಳಿಗಾಲದಲ್ಲಿ, ಅನೇಕರಿಗೆ ಕೀಲು ನೋವು (Joint Pain), ಬಿಗಿತದಿಂದ ನಡೆಯಲು ಅಥವಾ ಕುಳಿತುಕೊಳ್ಳಲು ತೊಂದರೆಯಾಗುತ್ತದೆ. ಅದರಲ್ಲಿಯೂ ಬೆಳಿಗ್ಗೆಯಿಂದ ಸಂಜೆವರೆಗೆ ಒಂದೇ ಜಾಗದಲ್ಲಿ ಕುಳಿತಲ್ಲಿಯೇ ಇದ್ದರೆ ಇಂತಹ ನೋವುಗಳು ಹೆಚ್ಚಾಗುತ್ತದೆ. ಶೀತ ಹೆಚ್ಚಾದಂತೆ, ದೇಹದ ಚಟುವಟಿಕೆಯೂ ಸೀಮಿತವಾಗುತ್ತದೆ, ಇದು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ, ಆದರೆ ಇದು ದಿನಕಳೆದಂತೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಕೀಲು ನೋವು ವಯಸ್ಸಾದವರಿಗೆ ಮಾತ್ರವಲ್ಲ ಯುವ ಜನರಲ್ಲಿಯೂ ಕಂಡುಬರಬಹುದು. ಹಾಗಾಗಿ ಇಂತಹ ಸಮಯದಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ, ಅದರ ಬಗ್ಗೆ ಯಾರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅದನ್ನು ಹೇಗೆ ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಡಾ. ಅಖಿಲೇಶ್ ಯಾದವ್ ಎನ್ನುವವರು ತಿಳಿಸಿರುವ ಮಾಹಿತಿ ಅನುಸಾರ ಚಳಿಗಾಲದಲ್ಲಿ, ತಾಪಮಾನದಲ್ಲಿನ ಇಳಿಕೆ, ಸ್ನಾಯು ಮತ್ತು ಕೀಲುಗಳು ಗಟ್ಟಿಯಾಗಲು ಪ್ರಾರಂಭಿಸುತ್ತವೆ, ಇದು ನೋವು ಮತ್ತು ಬಿಗಿತವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಚಳಿಗಾಲದಲ್ಲಿ, ರಕ್ತದ ಹರಿವು ನಿಧಾನವಾಗಬಹುದು, ಸಾಕಷ್ಟು ಉಷ್ಣತೆ ಮತ್ತು ಪೋಷಣೆ ಕೀಲುಗಳನ್ನು ತಲುಪುವುದನ್ನು ತಡೆಯುತ್ತದೆ. ವಯಸ್ಸಾದವರು, ಸಂಧಿವಾತ ಮತ್ತು ಅಸ್ಥಿಸಂಧಿವಾತ ರೋಗಿಗಳು ಮತ್ತು ಈಗಾಗಲೇ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಈ ಅಪಾಯ ಹೆಚ್ಚು. ಜೊತೆಗೆ ದೀರ್ಘಕಾಲದವರೆಗೆ ಒಂದೇ ಜಾಗದಲ್ಲಿ ಕುಳಿತುಕೊಳ್ಳುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದವರಲ್ಲಿ ಈ ಸಮಸ್ಯೆ ಹೆಚ್ಚಾಗಬಹುದು. ಇನ್ನು ಕೆಲವು ಮಹಿಳೆಯರಲ್ಲಿ, ಹಾರ್ಮೋನುಗಳ ಬದಲಾವಣೆಗಳು ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿ, ಕೀಲು ನೋವು ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಗಮನ ನೀಡದಿದ್ದರೆ, ಈ ನೋವು ಕ್ರಮೇಣ ತೀವ್ರಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೀಲು ನೋವು ಬರಬಾರದು ಎಂದರೆ ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ