ಚಳಿಗೆ ಬಿಸಿಬಿಸಿಯಾಗಿ ತಿನ್ನಬೇಕು ಅಂತಾ ಅನಿಸುತ್ತಾ? ಅಪ್ಪಿತಪ್ಪಿಯೂ ಸಂಜೆ 6 ಗಂಟೆಯ ನಂತರ ಈ ಆಹಾರಗಳನ್ನು ತಿನ್ನಬೇಡಿ
ಸಂಜೆ 6 ಗಂಟೆಯ ನಂತರ ಕೆಲವು ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ಸಮೋಸಾ, ಪಕೋಡಾಗಳು, ಜಂಕ್ ಫುಡ್ ಮತ್ತು ಸಿಹಿತಿಂಡಿಗಳು ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುತ್ತವೆ, ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾದರೆ ಸಂಜೆ ಮೇಲೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಮತ್ತು ಯಾಕೆ? ಇವುಗಳ ಬದಲು ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಖಾರವಾದ ಸ್ನಾಕ್ಸ್ (Snacks) ತಿನ್ನಬೇಕೆಂದು ಅನಿಸುವುದು ಸಹಜ. ಅದರಲ್ಲಿಯೂ ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ, ಮನಸ್ಸು ಸಮೋಸಾ, ಪಕೋಡಾ, ಬಜ್ಜಿ ಹೀಗೆ ಕರಿದ ತಿನಿಸುಗಳತ್ತ ಹೋಗುತ್ತದೆ. ಆದರೆ ನಿಮಗೆ ಗೊತ್ತಾ, ಈ ಆಹಾರಗಳ ತಿನ್ನುವ ಸಮಯ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು, ಸಂಜೆ 6 ಗಂಟೆಯ ನಂತರ ನೀವು ಸೇವಿಸುವಂತಹ ಆಹಾರ ನಿಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಸಂಜೆ ಮೇಲೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಮತ್ತು ಯಾಕೆ? ಇವುಗಳ ಬದಲು ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಂಜೆ 6 ಗಂಟೆಯ ನಂತರ ಈ ಆಹಾರಗಳಿಂದ ದೂರವಿರಿ
ಬಾಯಿಯ ರುಚಿಗಾಗಿ ನಾವು ಸೇವಿಸುವ ಕೆಲವು ಆಹಾರಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಬಹುದು. ಹಾಗಾಗಿ ಈ ಆಹಾರಗಳಿಂದ ದೂರವಿರುವುದು ಒಳ್ಳೆಯದು.
ಹುರಿದ ಆಹಾರಗಳು: ಸಮೋಸಾ, ಪಕೋಡಾಗಳು.
ಜಂಕ್ ಫುಡ್: ಹೆಚ್ಚಿನ ಬೆಣ್ಣೆ ಅಂಶವಿರುವ ಬರ್ಗರ್‌ಗಳು ಮತ್ತು ಪಿಜ್ಜಾಗಳು.
ಸಿಹಿತಿಂಡಿ: ಜಲೇಬಿ ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಇತರ ಸಿಹಿತಿಂಡಿಗಳು.
ಬೀದಿ ಆಹಾರ: ಮಸಾಲಾ ಪುರಿಯಂತಹ ಮಸಾಲೆಯುಕ್ತ ಆಹಾರಗಳು.
ಇದನ್ನೂ ಓದಿ: ಬಣ್ಣ ಬಣ್ಣದ ಕೇಕ್ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!
ಯಾಕೆ ಸೇವನೆ ಮಾಡಬಾರದು?
ಹುರಿದ ಆಹಾರಗಳು ನೇರವಾಗಿ ಟೈಪ್-2 ಮಧುಮೇಹಕ್ಕೆ ಸಂಬಂಧಿಸಿವೆ. ಅವು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಡ್ಡಿಪಡಿಸುತ್ತವೆ. ರಾತ್ರಿಯಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಷ್ಟೇ ಅಲ್ಲ, ಗ್ಯಾಸ್, ಆಮ್ಲೀಯತೆ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಕರಿದ ಆಹಾರಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಅವುಗಳಲ್ಲಿರುವ ಹೆಚ್ಚಿನ ಕ್ಯಾಲೋರಿ ದೇಹದಲ್ಲಿ ತ್ವರಿತ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ.
ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು:
- ಬೆಣ್ಣೆ ಇಲ್ಲದೆ ಹುರಿದ ಮಖಾನ ಆರೋಗ್ಯಕ್ಕೆ ಒಳ್ಳೆಯದು.
- ಬೇಯಿಸಿದ ಸಿಹಿ ಕಾರ್ನ್.
- ಬಿಸಿ ತರಕಾರಿ ಸೂಪ್.
- ಕಡಿಮೆ ಎಣ್ಣೆ ಬಳಸಿ ಮಾಡಿದ ಪನೀರ್ ಫ್ರೈ ಅಥವಾ ಮಸಾಲೆಯುಕ್ತ ಕಡಲೆ.
- ಗೋಧಿ ಹಿಟ್ಟಿನಿಂದ ಮಾಡಿದ ಡಂಪ್ಲಿಂಗ್‌ಗಳು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




