Aloo-Poha Cutlets: ಸಂಜೆಯ ಸ್ನಾಕ್ಸ್​​ಗೆ ಆಲೂಗಡ್ಡೆ-ಅವಲಕ್ಕಿ ಕಟ್ಲೆಟ್ ಸೂಪರ್​​, ಇಲ್ಲಿದೆ ಪಾಕವಿಧಾನ

ಕಟ್ಲೆಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಕಟ್ಲೆಟ್ ಎಲ್ಲರಿಗೂ ಇಷ್ಟ. ಎಲ್ಲರ ಅಚ್ಚುಮೆಚ್ಚಿನ ಹಾಗೂ ಸಂಜೆಯ ಚಹಾ ಕಾಫಿ ಸಮಯದಲ್ಲಿ ಸವಿಯಲು ಸೂಕ್ತವಾದ ಆಲೂ-ಪೋಹಾ ಕಟ್ಲೆಟ್ ಪಾಕವಿಧಾನದ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.

Aloo-Poha Cutlets: ಸಂಜೆಯ ಸ್ನಾಕ್ಸ್​​ಗೆ ಆಲೂಗಡ್ಡೆ-ಅವಲಕ್ಕಿ ಕಟ್ಲೆಟ್ ಸೂಪರ್​​, ಇಲ್ಲಿದೆ ಪಾಕವಿಧಾನ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2023 | 5:16 PM

ಅವಲಕ್ಕಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದೇ ಕಾರಣದಿಂದ ಹೆಚ್ಚಿನ ಜನರು ಬೆಳಗ್ಗಿನ ಉಪಹಾರದ ಸಮಯದಲ್ಲಿ ಬಗೆ ಬಗೆಯ ಅವಲಕ್ಕಿ ಉಪಹಾರಗಳನ್ನು ಮಾಡುತ್ತಾರೆ. ಹಾಗೆಯೇ ನೀವು ಸಂಜೆಯ ಕಾಫಿ ಟೀ ಸಮಯದಲ್ಲೂ ಅವಲಕ್ಕಿಯಿಂದ ರುಚಿಕರವಾದ ಖಾದ್ಯ ತಯಾರಿಸಬಹುದು. ಹೌದು ನೀವು ಆಲೂಗಡ್ಡೆ ಮತ್ತು ಅವಲಕ್ಕಿಯನ್ನು ಬಳಸಿಕೊಂಡು ಸುಲಭವಾಗಿ ಕಟ್ಲೆಟ್ ತಯಾರಿಸಬಹುದು. ಇದು ಸಂಜೆಯ ತಿಂಡಿಯ ಆರೋಗ್ಯಕರ ಆವೃತ್ತಿಯಲ್ಲಿ ಒಂದು. ಈ ಕಟ್ಲೆಟ್ ಹೇಗೆ ತಯಾರಿಸುವುದು? ಈ ಪಾಕವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಆಲೂಗಡ್ಡೆ-ಅಲವಕ್ಕಿ ಕಟ್ಲೆಟ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:

• ನೆನೆಸಿದ ಅವಲಕ್ಕಿ

• ಬೇಯಿಸಿದ ಆಲೂಗಡ್ಡೆ

• ಸಣ್ಣಗೆ ಹೆಚ್ಚಿದ ಈರುಳ್ಳಿ

• ಹಸಿರು ಮತ್ತು ಹಳದಿ ಕ್ಯಾಪ್ಸಿಕಂ

• ಶುಂಠಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್

• ಅಚ್ಚಖಾರದ ಪುಡಿ

• ಜೀರಿಗೆ ಪುಡಿ

• ಧನಿಯಾ ಪುಡಿ

• ಗರಂ ಮಸಾಲಾ

• ಚಾಟ್ ಮಸಾಲಾ

• ರುಚಿಗೆ ತಕ್ಕಷ್ಟು ಉಪ್ಪು

• ಅಕ್ಕಿ ಹಿಟ್ಟು

• ಹುರಿದ ಕಡಲೆ ಬೀಜದ ತರಿತರಿಯಾದ ಪುಡಿ (ನುಣ್ಣಗೆ ರುಬ್ಬುವುದು ಬೇಡ, ಕಡಲೆ ಪುಡಿ ತರಿತರಿಯಾಗಿರಲಿ)

• ಕೊತ್ತಂಬರಿ ಸೊಪ್ಪು

• ಎಳ್ಳು

• ಎಣ್ಣೆ

ಇದನ್ನೂ ಓದಿ: ದಿನವಿಡೀ ಉತ್ಸಾಹಭರಿತವಾಗಿ ಇರಬೇಕಾ? ಈ ಆಹಾರಗಳನ್ನು ನೀವು ಸೇವಿಸಲೇಬೇಕು

ಆಲೂಗಡ್ಡೆ ಅವಲಕ್ಕಿ ಕಟ್ಲೆಟ್ ತಯಾರಿಸುವ ವಿಧಾನ:

ಕಟ್ಲೆಟ್ ಮಾಡಲು ಮೊದಲಿಗೆ ನಿಮಗೆ ಬೇಕಾದ ಪ್ರಮಾಣದಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಡಿ. ಚೆನ್ನಾಗಿ ನೆನೆದ ಬಳಿಕ ಅದರ ನೀರನ್ನು ತೆಗೆದು ಆ ಅವಲಕ್ಕಿಯನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಈಗ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಬೇಯಿಸಿಟ್ಟ ಆಲೂಗಡ್ಡೆಯನ್ನು ತುರಿದು ಹಾಕಿ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಹಳದಿ ಹಸಿರು ಕ್ಯಾಪ್ಸಿಕಂ, ಶುಂಠಿ ಮತ್ತು ಹಸಿಮೆಣಸಿಕಾಯಿ ಪೇಸ್ಟ್, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಅಕ್ಕಿ ಹಿಟ್ಟು, ಹುರಿದ ಕಡಲೆಕಾಯಿ ಪುಡಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಇವೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಈ ಮಿಶ್ರಣದಿಂದ ಸಣ್ಣ ಸಣ್ಣ ಕಟ್ಲೆಟ್ ತಯಾರಿಸಿದ ಬಳಿಕ ಅದರ ಮೇಲೆ ಬಿಳಿ ಎಳ್ಳುಗಳನ್ನು ಹಾಕಿ.  ಈ ಎಲ್ಲಾ ಕಟ್ಲೆಟ್ ಗಳನ್ನು ಕಾದ ಎಣ್ಣೆಯಲ್ಲಿ ಫ್ರೈ ಮಾಡಿ. ಪುದೀನಾ ಚಟ್ನಿ ಅಥವಾ ಸಾಸ್ ನೊಂದಿಗೆ ಈ ಕಟ್ಲೆಟ್ ಸವಿಯಲು ಉತ್ತಮವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ