ಬಣ್ಣ ಬಣ್ಣದ ಕೇಕ್ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!
ಕ್ರಿಸ್ಮಸ್, ಹೊಸವರ್ಷದ ಸಂಭ್ರಮಾಚರಣೆ ಸೇರಿ ಪಾರ್ಟಿಗಳಲ್ಲಿ ನಾವು ಸೇವಿಸುವ ಕೇಕ್ ಜೀವಕ್ಕೇ ಕುತ್ತು ತರಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಕೇಕ್ಗಳ ತಯಾರಿ ವೇಳೆ ಕೃತಕ ಬಣ್ಣಗಳ ಬಳಕೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಲರ್ ಕಲರ್ ಕೇಕ್ಗಳ ಖರೀದಿಗೂ ಮುನ್ನ ಎಚ್ಚರವಿರಲಿ ಎಂದಿದ್ದಾರೆ.

ಬೆಂಗಳೂರು, ಡಿಸೆಂಬರ್ 24: ಎಲ್ಲೆಡೆಯೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮ ಮಾಡಿದೆ. ಇವುಗಳ ಆಚರಣೆ ವೇಳೆ ಕೇಕ್ ಕಟ್ ಮಾಡಿ ಸಂಭ್ರಮಿಸೋದು ಮಾಮೂಲು. ಹೀಗಾಗಿಯೇ ಬಗೆ ಬಗೆಯ ಕೇಕ್ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ನಡುವೆ ವೈದ್ಯರು ನೀಡಿರೋ ಅಭಿಪ್ರಾಯ ಬೆಚ್ಚಿ ಬೀಳಿಸುವಂತಿದ್ದು, ನಾವು ತಿನ್ನುವ ರುಚಿ ರುಚಿಯಾದ ಕಲರ್ ಕಲರ್ ಕೇಕ್ಗಳು ಭೀಕರ ಕಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ.
ಕೇಕ್ ಅಂದ್ರೆ ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳಿಗೂ ಅಚ್ಚುಮೆಚ್ಚು. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಿಂದ ಹಿಡಿದು ಯಾವುದೇ ಪಾರ್ಟಿ ಇದ್ದರೂ ಕೇಕ್ ಬೇಕೇ ಬೇಕು. ಇದಕ್ಕಾಗಿಯೇ ಇತ್ತೀಚೆಗಂತೂ ಟ್ರಫಲ್, ರೆಡ್ವೆಲ್ವೆಟ್, ಚೀಸ್ ಕೇಕ್, ನಟ್ಸ್ ಕೇಕ್, ಐರಿಸ್ ಕೇಕ್ ಸೇರಿ ವೆರೈಟಿ ಕೇಕ್ಗಳು ಶಾಪ್ಗಳಲ್ಲಿ ಸಿಗುತ್ತವೆ. ಆದ್ರೆ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಕಳೆದ ವರ್ಷ ನಡೆದ ಪರೀಕ್ಷೆ ವೇಳೆ ಕೆಲವು ಕೇಕ್ ಸ್ಯಾಂಪಲ್ಸ್ ಅನ್ ಸೇಫ್ ಆಗಿರೋದು ಬಯಲಾಗಿತ್ತು. ಹೀಗಾಗಿ ಈ ಬಾರಿಯೂ ಆಹಾರ ಇಲಾಖೆ ಈ ವೆರೈಟಿ ಕೇಕ್ಗಳ ಮೇಲೆ ಕಣ್ಣಿಟ್ಟಿದೆ. ಕೇಕ್ಗಳ ತಯಾರಿ ವೇಳೆ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ತಡೆಗೆ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು
ಕೇಕ್ಗಳಲ್ಲಿ ಕೃತಕ ಬಣ್ಣ ಬಳಕೆಯಿಂದ ಏನೆಲ್ಲ ಪರಿಣಾಮ?
- Allura Red: ಅಲರ್ಜಿ, ಅಸ್ತಮಾ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು
- Sunset Yellow FCF: ಅಲರ್ಜಿ, ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿ, ಕ್ರೋಮೋಸೋಮ್ ಡ್ಯಾಮೇಜ್, ಥೈರಾಯ್ಡ್ ಸಮಸ್ಯೆ, ಆನ್‌ಸೈಟಿ ಸಮಸ್ಯೆ
- Ponceau 4R: ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಅಲರ್ಜಿ, ಅಸ್ತಮಾ ಸಮಸ್ಯೆ ಸಾಧ್ಯತೆ
- Tartrazine: ಸ್ಕಿನ್ ರಾಶಸ್, ಶ್ವಾಸಕೋಶದ ಸಮಸ್ಯೆ, ಮೈಗ್ರೇನ್, ಡಿಪ್ರೆಶನ್, ದೃಷ್ಟಿ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ , ಗ್ಯಾಸ್ಟ್ರಿಕ್ ಸಮಸ್ಯೆ,
- Carmoisine: ಹೈಪರ್ ಸೆನ್ಸಿಟಿವಿಟಿ, ಚರ್ಮದ ಊತ, ಉಸಿರಾಟದ ಸಮಸ್ಯೆ
ಇನ್ನು ಆಹಾರ ತಜ್ಞರು ರೆಡ್ ವೆಲ್ವೆಟ್ , ಬ್ಲ್ಯಾಕ್ ಫಾರೆಸ್ಟ್ ಕೇಕ್ಗಳ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ. ಈ ಹಿಂದೆ ಇವುಗಳು ಅನ್‌ಸೇಫ್ ಎಂಬುದು ಗೊತ್ತಾಗಿತ್ತು. ಬಣ್ಣ ಬಣ್ಣದ ಕೇಕ್ಗಳು ಎಂದು ಯಾಮಾರುವ ಬದಲು, ನೀವು ತಿನ್ನುವ ಕೇಕ್ ಎಷ್ಟು ಸೇಫ್ ಇದೆ ಎಂದು ಯೋಚಿಸಿ ಖರೀದಿಸಿ ಎಂದು ಸಲಹೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.