
ಬೇಸಿಗೆಯ (Summer) ತಾಪಮಾನ ಹೆಚ್ಚಾದಂತೆ ಜನ ತಂಪಾದ ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಕೋಲ್ಡ್ ಡ್ರಿಂಕ್‌ಗಳು ಇರುವುದರಿಂದ ಅದನ್ನು ಕುಡಿದು ಆನಂದಿಸುತ್ತಾರೆ. ಅದರಲ್ಲಿ ಕೆಲವರು ಅವುಗಳ ಜೊತೆ ಚಿಪ್ಸ್ ಕೂಡ ತಿನ್ನುತ್ತಾರೆ. ಇದು ಕೆಲವರಿಗೆ ಸಾಮಾನ್ಯ ಅಭ್ಯಾಸಗಳಲ್ಲಿ ಒಂದು. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಆಹಾರ ಸಂಯೋಜನೆ ಒಳ್ಳೆಯದಲ್ಲ. ಇದು ದೇಹಕ್ಕೆ ಹಾನಿಕಾರಕವಾಗಬಹುದು ಎನ್ನುತ್ತಾರೆ. ಈ ರೀತಿ ಅಭ್ಯಾಸ ನಿಮಗೂ ಇದ್ದಲ್ಲಿ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಲೇಬೇಕು ಜೊತೆಗೆ ಈ ರೀತಿ ಕೋಲ್ಡ್ ಡ್ರಿಂಕ್ ಜೊತೆಗೆ ಚಿಪ್ಸ್ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ ಇದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೋಲ್ಡ್ ಡ್ರಿಂಕ್‌ಗಳಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಮತ್ತು ಕೆಲವೊಮ್ಮೆ ಕ್ಯಾಫಿನ್ ಇರುತ್ತದೆ. ಇದು ದೇಹದ ದಾಹವನ್ನು ತಾತ್ಕಾಲಿಕವಾಗಿ ತಣಿಸಿದರೂ, ವಾಸ್ತವದಲ್ಲಿ ದೇಹವನ್ನು ಡಿಹೈಡ್ರೇಟ್ ಮಾಡಬಹುದು. ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಹೈಡ್ರೇಶನ್ ಕಡಿಮೆಯಾಗುವುದರಿಂದ ದೌರ್ಬಲ್ಯ, ತಲೆಸುತ್ತು ಮತ್ತು ದೇಹದ ತಾಪಮಾನ ನಿಯಂತ್ರಣದಲ್ಲಿ ಸಮಸ್ಯೆಗಳು ಉಂಟಾಗಬಹುದು. ಜೊತೆಗೆ ಚಿಪ್ಸ್‌ಗಳಲ್ಲಿ ಹೆಚ್ಚಿನ ಉಪ್ಪು ಮತ್ತು ಟ್ರಾನ್ಸ್ ಫ್ಯಾಟ್ ಇರುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಹೆಚ್ಚಿಸುವುದರ ಜೊತೆಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಹಾಳುಮಾಡಬಹುದು. ಹೆಚ್ಚಾಗಿ ಉಪ್ಪಿನ ಸೇವನೆ ದಾಹವನ್ನು ಹೆಚ್ಚಿಸಿ, ಮತ್ತೆ ಮತ್ತೆ ಕೋಲ್ಡ್ ಡ್ರಿಂಕ್ ಸೇವನೆಗೆ ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ಅಸಮತೋಲನ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ
ತಜ್ಞರು ಹೇಳುವಂತೆ, ಈ ಆಹಾರ ಸಂಯೋಜನೆ ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಳ, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ದೀರ್ಘಕಾಲದಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು. ವಿಶೇಷವಾಗಿ ಮಕ್ಕಳ ಮತ್ತು ಯುವಕರಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ.
ಕೋಲ್ಡ್ ಡ್ರಿಂಕ್‌ಗಳ ಬದಲು ನೈಸರ್ಗಿಕ ಪಾನೀಯಗಳನ್ನು ಆಯ್ಕೆ ಮಾಡುವುದು ಉತ್ತಮ. ಉದಾಹರಣೆಗೆ, ನಿಂಬೆ ಹಣ್ಣಿನ ರಸ, ಮಜ್ಜಿಗೆ ಅಥವಾ ಎಳನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಚಿಪ್ಸ್ ಬದಲು ಹುರಿದ ಮಖಾನ, ಕಡಲೆಕಾಳು ಅಥವಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಒಟ್ಟಿನಲ್ಲಿ, ಬೇಸಿಗೆಯಲ್ಲಿ ದೇಹದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹಾಗಾಗಿ ಆರೋಗ್ಯ ಹಾಳು ಮಾಡುವ ಆಹಾರಕ್ಕಿಂತ ಸಮತೋಲನವಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ