
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡದ ಸಮಸ್ಯೆ (Hypertension) ಕಂಡುಬರುತ್ತಿರುವುದು ಬಹಳ ಕಳವಳಕಾರಿ ವಿಷಯ. ಅದರಲ್ಲಿಯೂ 30 ರಿಂದ 35 ವರ್ಷ ವಯಸ್ಸಿನವರಲ್ಲಿ ರಕ್ತದೊತ್ತಡ ಅಂದರೆ ಬಿಪಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರಾದರೂ ಕೂಡ, ನಾವು ದಿನನಿತ್ಯ ಸೇವನೆ ಮಾಡುವ ಆಹಾರ, ಹದಗೆಟ್ಟ ಜೀವನಶೈಲಿ, ಮತ್ತು ಮಾನಸಿಕ ಒತ್ತಡ ಈ ಸಮಸ್ಯೆಯ ಹೆಚ್ಚಳಕ್ಕೆ ಗಮನಾರ್ಹ ಅಂಶವಾಗಿದೆ. ಅದರಲ್ಲಿಯೂ ಅಧಿಕ ರಕ್ತದೊತ್ತಡ ಬಹಳ ಅಪಾಯಕಾರಿಯಾಗಿದ್ದು ಇದನ್ನು ನಿಯಂತ್ರಿಸದಿದ್ದರೆ, ಅದು ಹೃದಯಾಘಾತದಿಂದ ಮಿದುಳಿನ ಪಾರ್ಶ್ವವಾಯುವಿನವರೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ರಕ್ತದೊತ್ತಡ ಹೆಚ್ಚಾಗುವುದಕ್ಕೆ ಕಾರಣವೇನು, ಇದನ್ನು ಸುಲಭವಾಗಿ ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೆಹಲಿಯ ಜಿಟಿಬಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಅಜಿತ್ ಕುಮಾರ್ ಹೇಳುವ ಪ್ರಕಾರ, ಬಿಪಿ ಅಥವಾ ಅಧಿಕ ರಕ್ತದೊತ್ತಡ ಮೌನವಾಗಿ ದೇಹದ ಮೇಲೆ ದಾಳಿ ಮಾಡುವಂತಹ ಕಾಯಿಲೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಲಕ್ಷಣಗಳು ಕಂಡುಬಂದರೂ ಸಹ ಜನರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಪರಿಣಾಮವಾಗಿ, ಈ ರೋಗವು ಕ್ರಮೇಣ ದೇಹದ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯಿಂದ ದೂರವಿರಲು ಪ್ರತಿಯೊಬ್ಬರೂ ಕೂಡ ಮೊದಲು ಅಧಿಕ ರಕ್ತದೊತ್ತಡದ ಲಕ್ಷಣಗಳ ಬಗ್ಗೆ ತಿಳಿಯುವುದು ಮತ್ತು ಅವು ಕಂಡುಬಂದಾಗ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ