AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಯಾಗಿ ನಿದ್ರೆ ಮಾಡಿ ಎದ್ದ ಮೇಲೂ ತಲೆ ಭಾರವಾದಂತೆ ಅನಿಸುತ್ತಾ? ಈ ರೀತಿ ಆಗುವುದಕ್ಕೆ ಕಾರಣವೇನು ಗೊತ್ತಾ?

ನಿದ್ರೆ ಸರಿಯಾಗಿ ಆಗಿದ್ದರೂ ಕೂಡ ತಲೆ ಭಾರವಾದಂತೆ ಅನಿಸುತ್ತಾ? ಈ ರೀತಿ ನಿಮಗೂ ಆಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೆಲವರು ಇದನ್ನು ಸಾಮಾನ್ಯ ಆಯಾಸ ಎಂದು ನಿರ್ಲಕ್ಷಿಸುತ್ತಾರೆ, ಆದರೆ ಇದಕ್ಕೆ ಹಲವಾರು ಕಾರಣಗಳಿರಬಹುದು. ಈ ಬಗ್ಗೆ ಡಾ. ಸುಭಾಷ್ ಗಿರಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ರೀತಿ ಆಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಸ್ಟೋರಿ ಓದಿ.

ಸರಿಯಾಗಿ ನಿದ್ರೆ ಮಾಡಿ ಎದ್ದ ಮೇಲೂ ತಲೆ ಭಾರವಾದಂತೆ ಅನಿಸುತ್ತಾ? ಈ ರೀತಿ ಆಗುವುದಕ್ಕೆ ಕಾರಣವೇನು ಗೊತ್ತಾ?
Headache Like Feeling After SleepImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 26, 2026 | 9:20 PM

Share

ರಾತ್ರಿ ಪೂರ್ತಿ ನಿದ್ರೆ ಚೆನ್ನಾಗಿ ಆದಾಗ ಮಾತ್ರ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸದಿಂದ ಕೂಡಿರುತ್ತೆ ಎಂದು ಸಾಮಾನ್ಯವಾಗಿ ಎಲ್ಲರೂ ನಂಬುತ್ತಾರೆ, ಆದರೆ ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ನಮ್ಮ ದೇಹ ಸ್ಪಂದಿಸುತ್ತದೆ. ಅಂದರೆ ಚೆನ್ನಾಗಿ ನಿದ್ರೆ (Sleep) ಮಾಡಿ ಎದ್ದಾಗಲೂ ಕೂಡ ಆಲಸ್ಯ, ತಲೆ ಭಾರವಾದಂತಹ ಅನುಭವವಾಗುತ್ತದೆ. ಈ ಸ್ಥಿತಿ ಏಕಾಗ್ರತೆಯ ಕೊರತೆ, ಕಿರಿಕಿರಿ ಅಥವಾ ಕೆಲಸದ ಮೇಲೆ ಗಮನಹರಿಸಲು ತೊಂದರೆಯಾಗುವಂತೆ ಮಾಡುತ್ತದೆ. ಅನೇಕರು ಇದನ್ನು ಸಾಮಾನ್ಯ ಆಯಾಸ ಎಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ನಿಮ್ಮ ದೇಹದೊಳಗೆ ಆಗುತ್ತಿರುವ ಕೆಲವು ಬದಲಾವಣೆಗಳ ಸಂಕೇತವೂ ಆಗಿರಬಹುದು ಎಂಬುದನ್ನು ಮರೆಯಬೇಡಿ. ಹೌದು, ಇದು ದೇಹ ನಿಮಗೆ ನೀಡುತ್ತಿರುವ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆ ಸರಿಯಾಗಿ ಆಗಿದ್ದರೂ ತಲೆಯಲ್ಲಿ ಭಾರ ಎನಿಸುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರಾಧ್ಯಾಪಕ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ನಿದ್ರೆ ಸರಿಯಾಗಿ ಆಗಿದ್ದರೂ ಕೂಡ ತಲೆ ಭಾರ ಎನಿಸುವುದಕ್ಕೆ ಮತ್ತು ಆಲಸ್ಯ ಉಂಟಾಗುವುದಕ್ಕೆ ಪ್ರಮುಖ ಕಾರಣವೆಂದರೆ ನಿದ್ರೆಯ ಗುಣಮಟ್ಟ. ತಡರಾತ್ರಿಯವರೆಗೆ ಮೊಬೈಲ್ ನೋಡುವುದು ಅಥವಾ ಟಿವಿ ನೋಡಿರುತ್ತಾರೆ. ಕೆಲವೊಮ್ಮೆ ಒತ್ತಡ ಮತ್ತು ಆತಂಕ ನಿದ್ರೆಯ ಸಮಯದಲ್ಲಿ ಮೆದುಳನ್ನು ಸಕ್ರಿಯವಾಗಿರಿಸುತ್ತದೆ, ಇದು ಬೆಳಿಗ್ಗೆ ನಿಮಗೆ ದಣಿವುಂಟು ಮಾಡುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಕೊರತೆಯಿಂದಾಗಿ, ತಲೆ ಭಾರವಾಗಿರುತ್ತದೆ. ಕೆಲವರು ಉಪಯೋಗ ಮಾಡುವ ದಿಂಬು ಅಥವಾ ಮಲಗುವ ಭಂಗಿ ಸರಿಯಾಗಿ ಇರುವುದಿಲ್ಲ. ಇದು ಕುತ್ತಿಗೆ ಮತ್ತು ತಲೆಯ ಸ್ನಾಯುಗಳನ್ನು ಆಯಾಸಗೊಳಿಸಬಹುದು. ಇದರ ಹೊರತಾಗಿ, ಮೂಗಿನ ದಟ್ಟಣೆ, ಸೈನಸ್ ಸಮಸ್ಯೆಗಳು ಅಥವಾ ಆಮ್ಲಜನಕದ ಕೊರತೆಯು ಸಹ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಹಾರ್ಮೋನುಗಳ ಬದಲಾವಣೆ ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು.

ಕೆಲವರಿಗೆ ತಲೆ ಭಾರವಾಗುವುದರ ಜೊತೆಗೆ, ಆಲಸ್ಯ, ತಲೆತಿರುಗುವಿಕೆ ಅಥವಾ ಕಣ್ಣುಗಳಲ್ಲಿ ಉರಿಯ ಅನುಭವವಾಗಬಹುದು. ಕೆಲಸದ ಮೇಲೆ ಗಮನ ಕೊಡುವುದಕ್ಕೆ ಕಷ್ಟವಾಗಬಹುದು. ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಿರಿಕಿರಿ ಅಥವಾ ಚಡಪಡಿಕೆಯ ಅನುಭವವಾಗಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ತಲೆನೋವು, ಕುತ್ತಿಗೆಯಲ್ಲಿ ಬಿಗಿತ ಮತ್ತು ಆಯಾಸ ಕಂಡುಬರಬಹುದು.

ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ

ತಡೆಯುವುದು ಹೇಗೆ?

  • ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ, ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
  • ಮಲಗುವ ಮುನ್ನ ಮೊಬೈಲ್ ಫೋನ್ ಮತ್ತು ಪರದೆಗಳಿಂದ ದೂರವಿರಿ.
  • ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಸಮತೋಲಿತ ಆಹಾರ ಸೇವನೆ ಮಾಡಿ.
  • ಮಲಗುವಾಗ ಬಳಸುವ ದಿಂಬು ಮತ್ತು ಮಲಗುವ ಭಂಗಿ ಸರಿಯಾಗಿರಲಿ.
  • ಒತ್ತಡವನ್ನು ಕಡಿಮೆ ಮಾಡಲು ಯೋಗ ಅಥವಾ ಧ್ಯಾನ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಕೇಸರಿ ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತ ಹೆಬ್ಬಾಳ್ಕರ್!
ಕೇಸರಿ ಧ್ವಜ ವಿವಾದ: ಉಡುಪಿ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತ ಹೆಬ್ಬಾಳ್ಕರ್!