Health Tips: ಚಳಿಗಾಲದಲ್ಲಿ ಅತಿಯಾದ ಮದ್ಯಸೇವನೆ ಹೃದಯಕ್ಕೆ ಕುತ್ತು ತರಬಹುದು

ಕೆಲವರು ದೇಹವನ್ನು ಚಳಿಯಿಂದ ಕಾಪಾಡಿಕೊಳ್ಳಲು ಮದ್ಯಪಾನ ಮಾಡುತ್ತಾರೆ. ಇದು ಅಪಾಯಕಾರಿಯಾಗಿದೆ. ಚಳಿಗಾಲದಲ್ಲಿ ಅತಿಯಾಗಿ ಅಥವಾ ನಿರಂತರವಾಗಿ ಆಲ್ಕೋಹಾಲ್​ ಸೇವಿಸಿವುದರಿಂದ ಹೃದಾಯಾಘಾತವಾಗುವ ಸಂಭವ ಹೆಚ್ಚು ಎನ್ನುತ್ತಾರೆ ತಜ್ಞರು.

Health Tips: ಚಳಿಗಾಲದಲ್ಲಿ ಅತಿಯಾದ ಮದ್ಯಸೇವನೆ ಹೃದಯಕ್ಕೆ ಕುತ್ತು ತರಬಹುದು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 06, 2021 | 3:26 PM

ಚಳಿಗಾಲ ಬಂತೆಂದರೆ ಅರೋಗ್ಯದ ಸಮಸ್ಯೆಗಳ ಸರಮಾಲೆಯೇ ಇರುತ್ತದೆ. ಹೀಗಾಗಿ ಚಳಿಗಾಲದ ದಿನಗಳಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳು ದೇಹವನ್ನು ಸುಲಭವಾಗಿ ಆವರಸಿಕೊಂಡು ಅನಾರೋಗ್ಯ ಉಂಟಾಗುವಂತೆ ಮಾಡುತ್ತದೆ. ವಾಯುಮಾಲಿನ್ಯದಿಂದ ಕೂಡಿದ ಪಟ್ಟಣಗಳಲ್ಲಿ ದೇಹವನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಹೀಗಿದ್ದಾಗ ದೇಹವನ್ನು ಚಳಿಯಿಂದ ಜೋಪಾನ ಮಾಡಿಕೊಂಡು ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಕೆಲವೊಮ್ಮೆ ನಾವು ದೇಹವನ್ನು ಬೆಚ್ಚಗಿರಿಸಿಕೊಳ್ಳಲು ಸೇವಿಸುವ ಆಹಾರ ಅಥವಾ ಪಾನೀಯಗಳೇ ನಮ್ಮ ದೇಹಕ್ಕೆ ಕುತ್ತು ತರಬಹುದು.

ಹೌದು, ಕೆಲವರು ದೇಹವನ್ನು ಚಳಿಯಿಂದ ಕಾಪಾಡಿಕೊಳ್ಳಲು ಮದ್ಯಪಾನ ಮಾಡುತ್ತಾರೆ. ಇದು ಅಪಾಯಕಾರಿಯಾಗಿದೆ. ಚಳಿಗಾಲದಲ್ಲಿ ಅತಿಯಾಗಿ ಅಥವಾ ನಿರಂತರವಾಗಿ ಆಲ್ಕೋಹಾಲ್​ ಸೇವಿಸಿವುದರಿಂದ ಹೃದಾಯಾಘಾತವಾಗುವ ಸಂಭವ ಹೆಚ್ಚು ಎನ್ನುತ್ತಾರೆ ತಜ್ಞರು. ಚಳಿಗಾಲ ಹೊರತುಪಡಿಸಿ ಉಳಿದ ದಿನಗಳಲ್ಲೂ ಅತಿಯಾಗಿ ಮದ್ಯಪಾನ ಮಾಡುವುದು ದೇಹಕ್ಕೆ ಅಪಾಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಚಳಿಗಾಲದ ದಿನಗಳಲ್ಲಿ ಹೊರಗಿನ ವಾತಾವರಣ ತಂಪಿನಿಂದ ಕೂಡಿರುತ್ತದೆ. ಹೀಗಾಗಿ ದೇಹದಲ್ಲಿಯೂ ಉಷ್ಣತೆಯ ಪ್ರಮಾಣ ಇಳಿಮುಖವಾಗಿರುತ್ತದೆ. ಹೀಗಿದ್ದಾಗ ಅತಿಯಾದ ಆಲ್ಕೋಹಾಲ್​ ಸೇವನೆ ಹೃದಯಕ್ಕೆ ಅಪಾಯ ತಂದೊಟ್ಟುತ್ತದೆ. ಆಲ್ಕೋಹಾಲ್​ನಲ್ಲಿನ ಅಂಶಗಳು ಹೃದಯವು ಸರಿಯಾದ ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡುವುದನ್ನು ತಡೆಯುತ್ತದೆ. ಇದರಿಂದ ಹೃದಯ ಬಡಿತದಲ್ಲಿಯೂ ಏರುಪೇರಾಗುತ್ತದೆ. ಇದರ ಜತೆಗೆ ಮದ್ಯ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಿ ರಕ್ತನಾಳಗಳಲ್ಲಿ ಸರಿಯಾದ ರಕ್ತ ಸಂಚಾರ ಆಗುವುದಿಲ್ಲ. ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ನಿರಂತರ ಆಲ್ಕೋಹಾಲ್​ ಸೇವನೆ ಸ್ನಾಯುವಿನ ಸೆಳೆತಕ್ಕೆ ಕಾರಣವಾಗುತ್ತದೆ. ಇದರಿಂದ ರಕ್ತ ಸರಿಯಾದ ಪ್ರಮಾಣದಲ್ಲಿ ಸರಬರಾಜಾಗದೆ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚು. ಅತಿಯಾದ ಆಲ್ಕೋಹಾಲ್​ ಸೇವನೆಯಿಂದ ಹೃದಯದ ಮೇಲಾಗುವ ಹಾನಿಯನ್ನು ಆಲ್ಕೋಹಾಲಿಕ್ ಕಾರ್ಡಿಮಿಯೋಪತಿ ಎನ್ನುತ್ತಾರೆ.

ಹೃದಯಾಘಾತದ ಲಕ್ಷಣಗಳು ಹೃದಾಯಾಘಾತದ ಪ್ರಮುಖ ಲಕ್ಷಣನವೆಂದರೆ ಎದೆ ನೋವು. ಹೃದಾಯಾಘಾತವಾಗುತ್ತಿದೆ ಎನ್ನುವುದಕ್ಕೆ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದೇ ಪ್ರಮುಖ ಲಕ್ಷಣವಾಗಿದೆ. ಇದರ ಜತೆಗೆ ಅತಿಯಾದ ಬೆವರು, ತಲೆಸುತ್ತುವಿಕೆ, ಸುಸ್ತು, ಉಸಿರಾಟದ ತೊಂದರೆ, ಬೆನ್ನು, ಭುಜದ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಹೀಗೆ ಮಾಡಿ ದೇಹವನ್ನು ಬೆಚ್ಚಗಿರಿಸಿಕೊಳ್ಳಲು ಮದ್ಯ ಸೇವನೆಯನ್ನೇ ಮಾಡಬೇಕೆಂದಿಲ್ಲ. ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳಿಂದ ಚಳಿಗಾಲದಲ್ಲಿಯೂ ದೇಹವನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಬಹುದು. ಅದಕ್ಕೆ ಮುಖ್ಯವಾಗಿ ತಿನ್ನುವ ಆಹಾರದಲ್ಲಿ ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್​ ಇರುವ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಮಸಾಲೆಯುಕ್ತ ಪದಾರ್ಥಗಳ ಬಳಕೆ ಶುಂಠಿ, ಕರಿಮೆಣಸಿನ ಕಾಳು, ಬೆಳ್ಳುಳ್ಳಿಯಂತಹ ಮಸಾಲೆಪದಾರ್ಥಗಳು ನೀವು ಸೇವಿಸುವ ಆಹಾರದಲ್ಲಿರಲಿ. ಇದರಿಂದ ಹೊರಗಿನ ವಾತಾವರಣ ತಂಪಾಗಿದ್ದರೂ ನಿಮ್ಮ ದೇಹಬೆಚ್ಚಗಿರುತ್ತದೆ.

ಬಿಸಿ ಪಾನೀಯಗಳು ಅರಿಶಿನ ಬೆರೆತ ನೀರು ಅಥವಾ ಬಿಸಿ ಹಾಲು, ಗಿಡಮೂಲಿಕೆಗಳ ಕಷಾಯವನ್ನು ಸೇವಿಸಿವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು.

ಉಣ್ಣೆ ಬಟ್ಟೆಗಳ ಬಳಕೆ ಚಳಿಗಾಲದಲ್ಲಿ ದೆಹವನ್ನು ಬೆಚ್ಚಗಿರಿಸಿಕೊಳ್ಳಲು ನಾವು ಧರಿಸುವ ಬಟ್ಟೆಯೂ ಮುಖ್ಯವಾಗಿರುತ್ತದೆ. ಹೀಗಾಗಿ ಉಣ್ಣೆಯಿಂದ ತಯಾರಿಸಿದ ಉಡುಪಿನ ಬಳಕೆ ಉತ್ತಮ. ಅಲ್ಲದೆ ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೂ ಉಣ್ಣೆ ಬಟ್ಟೆ ರಕ್ಷಣೆ ನೀಡುತ್ತದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್