ಚಳಿಗಾಲದಲ್ಲೇಕೆ ಪ್ರತಿನಿತ್ಯ ಎಳ್ಳನ್ನು ಸೇವನೆ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಹತ್ವದ ಕಾರಣ

ಎಳ್ಳು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇದನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದರ ಪರಿಮಳ ಮಾತ್ರ ವಿಶೇಷವಲ್ಲ, ಇವುಗಳಲ್ಲಿರುವ ಪೋಷಕಾಂಶಗಳು ಸಹ ಆರೋಗ್ಯಕ್ಕೆ ಒಳ್ಳೆಯದು. ಆದರೆ ಚಳಿಗಾಲದಲ್ಲೇಕೆ ಇವುಗಳನ್ನು ಪ್ರತಿನಿತ್ಯ ತಪ್ಪದೆ ಸೇವನೆ ಮಾಡಬೇಕು? ಆರೋಗ್ಯ ತಜ್ಞರು ಎಳ್ಳಿನ ಸೇವನೆ ಮಾಡಿ ಎನ್ನಲು ನಿಜವಾದ ಕಾರಣವಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಏಕೆಂದರೆ ಈ ಒಂದು ಅಭ್ಯಾಸದಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತದೆ. ಹೌದು, ಗಾತ್ರದಲ್ಲಿ ಚಿಕ್ಕದಾದರೂ ಕೂಡ ಇದರ ಸೇವನೆಯಿಂದ ನೀವು ಊಹಿಸಲೂ ಸಾಧ್ಯವಾಗದ ಪ್ರಯೋಜನಗಳಿವೆ. ಏನು ಎಂದು ತಿಳಿಯುವ ಆಸಕ್ತಿ ಇದ್ದಲ್ಲಿ ಈ ಸ್ಟೋರಿ ಓದಿ.

ಚಳಿಗಾಲದಲ್ಲೇಕೆ ಪ್ರತಿನಿತ್ಯ ಎಳ್ಳನ್ನು ಸೇವನೆ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಹತ್ವದ ಕಾರಣ
ಚಳಿಗಾಲದಲ್ಲಿ ಎಳ್ಳನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನ

Updated on: Dec 05, 2025 | 7:35 PM

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ಆಹಾರಗಳನ್ನು ಸೇವನೆ ಮಾಡಲು ಹೇಳುತ್ತಾರೆ. ಅವುಗಳಲ್ಲಿ ಎಳ್ಳು (Sesame Seeds) ಕೂಡ ಒಂದು. ಇದು ಪಾಕವಿಧಾನದಲ್ಲಿ ವಿಶಿಷ್ಟ ಪಾತ್ರ ಹೊಂದಿದ್ದು ಇದರ ವಿಶೇಷತೆಗೆ ಸಾಟಿಯಿಲ್ಲವಾಗಿದೆ. ತಿಂಡಿಗೆ ವಿಶೇಷ ರುಚಿ ನೀಡುವ ಗುಣ ಇದರಲ್ಲಿದೆ. ಅಷ್ಟೇ ಅಲ್ಲ, ಇವುಗಳನ್ನು ಸೇವನೆ ಮಾಡುವುದರಿಂದ ಅಪಾರ ಪೋಷಕಾಂಶಗಳು ಸಿಗುತ್ತದೆ. ಹಾಗಾದರೆ ಚಳಿಗಾಲದಲ್ಲೇಕೆ ಪ್ರತಿನಿತ್ಯ ಎಳ್ಳನ್ನು ಸೇವಿಸಬೇಕು, ಇದರಿಂದ ಸಿಗುವ ಪ್ರಯೋಜನಗಳೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳಿ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಎಳ್ಳನ್ನು ಸೇವನೆ ಮಾಡಿ ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಪ್ರತಿನಿತ್ಯ ತಪ್ಪದೆ ತಿನ್ನುವುದರಿಂದ ಅಥವಾ ಇನ್ನಿತರ ಆಹಾರಗಳಲ್ಲಿ ಬೆರೆಸಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಟ್ರೈಗ್ಲಿಸರೈಡ್‌ಗಳನ್ನು ಸಹ ನಿಯಂತ್ರಣದಲ್ಲಿಡಬಹುದು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಇದಕ್ಕೆಲ್ಲಾ ಎಳ್ಳಿನಲ್ಲಿರುವ ಪ್ರಯೋಜನಕಾರಿ ಕೊಬ್ಬುಗಳು ಕಾರಣ ಎಂದು ಅಧ್ಯಯನಗಳು ಹೇಳುತ್ತವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಚಳಿಗಾಲದಲ್ಲೇಕೆ ಎಳ್ಳನ್ನು ಸೇವನೆ ಮಾಡಬೇಕು?

ಪ್ರತಿದಿನ ಎಳ್ಳಿನ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ. ಇವು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು ಚರ್ಮದ ಆರೋಗ್ಯವನ್ನೂ ಕೂಡ ಸುಧಾರಿಸುತ್ತವೆ. ಚಳಿಗಾಲದಲ್ಲಿ ನೀವು ಎಳ್ಳು ಪುಡಿಯನ್ನು ತಯಾರಿಸಿ ಮುಖಕ್ಕೆ ಹಚ್ಚಿದರೆ, ಚರ್ಮ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬೇಕಾದಲ್ಲಿ ನೀವು ಎಳ್ಳಿನ ಲಡ್ಡು ಅಥವಾ ಎಳ್ಳು ಚಟ್ನಿಯನ್ನು ಸೇವನೆ ಮಾಡಬಹುದು. ಸಾಮಾನ್ಯ ಎಳ್ಳಿಗೆ ಹೋಲಿಸಿದರೆ ಹುರಿದ ಎಳ್ಳಿನ ಸೇವನೆ ಸಾಕಷ್ಟು ಪ್ರೋಟೀನ್‌ಗಳನ್ನು ಒದಗಿಸುತ್ತವೆ. ಮಾತ್ರವಲ್ಲ, ಸ್ನಾಯುಗಳನ್ನು ಬಲಪಡಿಸಲು ಮತ್ತು ಹಾರ್ಮೋನುಗಳನ್ನು ಸಕ್ರಿಯವಾಗಿಡಲು ಸಹಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ