ಆಳ್ವಿ ಬೀಜಗಳನ್ನು ಪೋಷಕಾಂಶಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ತಜ್ಞರು ಇದನ್ನು ಸೂಪರ್ ಫುಡ್ ಎಂದು ಸೂಚಿಸಿದ್ದಾರೆ. ಆಳ್ವಿ ಬೀಜದಲ್ಲಿ ಫೋಲೇಟ್, ಕಬ್ಬಿಣ, ಫೈಬರ್, ವಿಟಮಿನ್ ಸಿ, ಎ, ಇ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದು ಮಹಿಳೆಯರ ಆರೋಗ್ಯಕ್ಕೆ( Women Health)ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅನಿಯಮಿತ ಮುಟ್ಟಿನ( Periods) ಸಮಸ್ಯೆಯನ್ನು ನಿಯಂತ್ರಿಸುವುದರಿಂದ ಹಿಡಿದು, ತೂಕ ಇಳಿಸುವವರೆಗೆ ಆಳ್ವಿ ಬೀಜ ಸಹಾಯಕವಾಗಿದೆ.
1. ಆಳ್ವಿ ಬೀಜಗಳು ದೇಹದಲ್ಲಿನ ಈಸ್ಟ್ರೊಜೆನ್ ಹಾರ್ಮೋನುಗಳಂತೆ ಕಾರ್ಯನಿರ್ವಹಿಸುವ ಫೈಟೊಕೆಮಿಕಲ್ ಗಳನ್ನು ಹೊಂದಿರುತ್ತವೆ. ನಿಮಗೆ ಯಾವುದೇ ಹಾರ್ಮೋನುಗಳ ಸಮಸ್ಯೆ ಇದ್ದರೆ, ಆಳ್ವಿ ಬೀಜಗಳನ್ನು ಸೇವಿಸುವುದರಿಂದ ಹಾರ್ಮೋನುಗಳು ನಿಯಂತ್ರಿಸಲ್ಪಡುತ್ತವೆ ಮತ್ತು ಅನಿಯಂತ್ರಿತ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.
2. ಹಾಲುಣಿಸುವ ಮಹಿಳೆಯರಿಗೂ ಆಳ್ವಿ ಬೀಜಗಳಿಂದ ಅನೇಕ ಪ್ರಯೋಜನಗಳಿವೆ. ಹಾಲನ್ನು ಹೆಚ್ಚಿಸಲು ಇದನ್ನು ಸೇವಿಸಬಹುದು. ಮಗುವಿಗೆ ಬೇಕಾದಷ್ಟು ಹಾಲು ಇಲ್ಲದ ಮಹಿಳೆಯರು ಹೆರಿಗೆಯ ನಂತರ, ತಜ್ಞರ ಸಲಹೆಯೊಂದಿಗೆ ಇದನ್ನು ಸೇವಿಸಬಹುದು. ಹೆರಿಗೆಯ ನಂತರ ದೇಹಕ್ಕೆ ಶಕ್ತಿ ನೀಡಲು ಆಳ್ವಿ ಬೀಜಗಳನ್ನು ಬೆಲ್ಲದ ಜತೆಗೆ ಸೇವಿಸುವುದು ಉತ್ತಮ.
3. ಹೆಚ್ಚಿದ ತೂಕವನ್ನು ನಿಯಂತ್ರಿಸಲು ಆಳ್ವಿ ಬೀಜಗಳು ಪರಿಣಾಮಕಾರಿಯಾಗಿದೆ. ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಆಳ್ವಿ ಬೀಜ ತಿನ್ನುವುದರಿಂದ ದೇಹವು ಹೆಚ್ಚು ಶಕ್ತಿಯನ್ನು ಪಡೆಯುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವು ಇರುವುದಿಲ್ಲ. ನೀವು ಅತಿಯಾಗಿ ತಿನ್ನುವುದರಿಂದ ದೂರವಿರಲು ಮತ್ತು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಆಳ್ವಿ ಬೀಜ ಸಹಾಯಕವಾಗಿದೆ.
4. ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಆಳ್ವಿ ಬೀಜ ಸೇವಿಸುವುದು ಉತ್ತಮ. ಆಳ್ವಿ ಬೀಜದಲ್ಲಿ ಕಬ್ಬಿಣಾಂಶವು ಹೇರಳವಾಗಿ ಕಂಡುಬರುತ್ತದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ.
5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಳ್ವಿ ಬೀಜ ಸಹಾಯಕವಾಗಿದೆ. ಈ ಬೀಜಗಳಲ್ಲಿ ವಿಟಮಿನ್ ಸಿ, ಎ, ಇ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೋಲಿಕ್ ಆಮ್ಲಗಳು ಸಮೃದ್ಧವಾಗಿವೆ. ಆಳ್ವಿ ಬೀಜ ಸೇವಿಸುವುದರಿಂದ ದೇಹವು ಬಲಗೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
6. ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಳ್ವಿ ಬೀಜ ತಿನ್ನುವುದರಿಂದ ಚರ್ಮದ ಸಡಿಲತೆ ಕಡಿಮೆಯಾಗುತ್ತದೆ ಮತ್ತು ಚರ್ಮದಲ್ಲಿನ ಸುಕ್ಕು ದೂರವಾಗುತ್ತದೆ. ಕೂದಲು ಉದುರುತ್ತಿದ್ದರೆ ನೀವು ಖಂಡಿತವಾಗಿಯೂ ಆಳ್ವಿ ಬೀಜಗಳನ್ನು ಸೇವಿಸಬೇಕು. ಇದು ಕೂದಲು ಉದುರುವಿಕೆಯ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ:
Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ