World Arthritis Day 2023: ನಿಮಗೆ ಸಂಧಿವಾತ ಶುರುವಾಗಿದೆ ಎಂಬುದರ 6 ಲಕ್ಷಣಗಳಿವು

Arthritis Symptoms: ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಸಂಧಿವಾತ ಇದ್ದರೆ, ನೀವು ಆಗಾಗ ಗಂಟುಗಳಿಗೆ ಗಾಯ ಮಾಡಿಕೊಳ್ಳುತ್ತಿದ್ದರೆ, ಆಗಾಗ ಸೋಂಕಿನಿಂದ ಬಳಲುತ್ತಿದ್ದರೆ, ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಈ ಸಂಧಿವಾತ ಕಾಣಿಸಿಕೊಳ್ಳಬಹುದು. ಪುರುಷರಿಗಿಂತಲೂ ಮಹಿಳೆಯರಲ್ಲಿ ಸಂಧಿವಾತ ಕಾಣಿಸಿಕೊಳ್ಳುವುದು ಹೆಚ್ಚು.

World Arthritis Day 2023: ನಿಮಗೆ ಸಂಧಿವಾತ ಶುರುವಾಗಿದೆ ಎಂಬುದರ 6 ಲಕ್ಷಣಗಳಿವು
ಸಂಧಿವಾತ
Image Credit source: iStock

Updated on: Oct 12, 2023 | 11:27 AM

ಕೆಲವೊಮ್ಮೆ ನಮ್ಮ ಕೀಲುಗಳಲ್ಲಿ ವಿಪರೀತ ನೀವು ಉಂಟಾಗುತ್ತದೆ. ಅದರಲ್ಲೂ ತೀರಾ ಭಾರ ಎತ್ತುವುದು, ಓಡುವುದು ಹೀಗೆ ದೈಹಿಕ ಚಟುವಟಿಕೆಗಳನ್ನು ಮಾಡಿದಾಗ ಕೀಲು ನೋವು ಹೆಚ್ಚಾಗುತ್ತದೆ. ಈ ರೀತಿ ಕೀಲು ನೋವಿದ್ದರೆ ಅದನ್ನು ನಿರ್ಲಕ್ಷ್ಯಿಸಬೇಡಿ. ಕೀಲುಗಳ ಮೇಲೆ ಪರಿಣಾಮ ಬೀರುವ, ತೀವ್ರ ನೋವನ್ನು ಉಂಟುಮಾಡುವ ಸಂಧಿವಾತದ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇಲ್ಲ. ಕಾಲು ನೋವನ್ನು ನಿರ್ಲಕ್ಷ್ಯಿಸಿದರೆ ಅದು ಸಂಧಿವಾತದ ಗಂಭೀರ ಸಮಸ್ಯೆಗೆ ಕಾರಣವಾದೀತು. ಭಾರತದಲ್ಲಿ ಲಕ್ಷಾಂತರ ಜನರನ್ನು ಬಾಧಿಸುವ ಸಂಧಿವಾತವು ದೀರ್ಘಕಾಲದ ಕಾಯಿಲೆಯಾಗಿದ್ದು, ಇದು ಉರಿಯೂತ, ಊತ ಅಥವಾ ಕೀಲುಗಳಲ್ಲಿನ ಬಿಗಿತದಿಂದ ಉಂಟಾಗುತ್ತದೆ.

ಸಂಧಿವಾತದ ಆರಂಭಿಕ ಲಕ್ಷಣಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ರೀತಿಯಾಗಿರುತ್ತದೆ. ನೀವು ಅನುಭವಿಸುವ ರೋಗಲಕ್ಷಣಗಳು ಬೇರೆಯವರಿಗಿಂತ ಭಿನ್ನವಾಗಿರುತ್ತವೆ. ಆದರೂ ನೀವು ತಿಳಿದಿರಬೇಕಾದ ಸಂಧಿವಾತದ ಸಾಮಾನ್ಯ ಲಕ್ಷಣಗಳು ಹೀಗಿವೆ…

– ಗಂಟು ನೋವು (ವಿಶೇಷವಾಗಿ ಬೆಳಗಿನ ಸಮಯದಲ್ಲಿ)

– ಕೀಲುಗಳ ಬಿಗಿತ

– ಆಯಾಸ, ತೂಕ ಕಡಿಮೆಯಾಗುವುದು.

– ವಿಪರೀತ ಹೊಟ್ಟೆ ನೋವು

– ಕೀಲುಗಳಲ್ಲಿ ಊತ

– ಜ್ವರ ಮತ್ತು ಚರ್ಮದ ಮೇಲೆ ದದ್ದುಗಳು

ಇದನ್ನೂ ಓದಿ: ಸಂಧಿವಾತ: ಮಳೆಗಾಲದಲ್ಲಿ ಕೀಲು ನೋವಿನಿಂದ ಪರಿಹಾರ ಕಂಡುಕೊಳ್ಳುಲು ಇಲ್ಲಿದೆ ಸರಳ ಪರಿಹಾರ

ಅಸ್ಥಿಸಂಧಿವಾತ (OA) ಮತ್ತು ರುಮಟಾಯ್ಡ್ ಸಂಧಿವಾತ (RA) ಸಂಧಿವಾತದ 2 ಪ್ರಮುಖ ರೂಪಗಳಾಗಿವೆ. ಇದು ತೀವ್ರವಾದ ಕೀಲು ನೋವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ, ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಸಂಧಿವಾತ ಇದ್ದರೆ, ನೀವು ಆಗಾಗ ಗಂಟುಗಳಿಗೆ ಗಾಯ ಮಾಡಿಕೊಳ್ಳುತ್ತಿದ್ದರೆ, ಆಗಾಗ ಸೋಂಕಿನಿಂದ ಬಳಲುತ್ತಿದ್ದರೆ, ಅನಿಯಮಿತ ಚಯಾಪಚಯ ಕ್ರಿಯೆಯಿಂದ ಬಳಲುತ್ತಿದ್ದರೆ, ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಈ ಸಂಧಿವಾತ ಕಾಣಿಸಿಕೊಳ್ಳಬಹುದು. ಪುರುಷರಿಗಿಂತಲೂ ಮಹಿಳೆಯರಲ್ಲಿ ಸಂಧಿವಾತ ಕಾಣಿಸಿಕೊಳ್ಳುವುದು ಹೆಚ್ಚು.

ಸಂಧಿವಾತ ನಿಯಂತ್ರಿಸಲು 5 ಮನೆಮದ್ದುಗಳು ಇಲ್ಲಿವೆ:

ಅಲೋವೆರಾ: ಅಲೋವೆರಾದಲ್ಲಿ ಸಂಧಿವಾತವನ್ನು ನಿವಾರಿಸಲು ಸಹಾಯ ಮಾಡುವ ಆಂಥ್ರಾಕ್ವಿನೋನ್‌ಗಳಿಂದ ಕೂಡಿರುವ ಜೆಲ್ ಇದೆ.

ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

ಅರಿಶಿನ: ಇದರ ಮುಖ್ಯ ಘಟಕಾಂಶವಾದ ಕರ್ಕ್ಯುಮಿನ್, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಥೈಮ್: ಇದು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.

ಶುಂಠಿ: ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಲ್ಯುಕೋಟ್ರಿಯೀನ್‌ಗಳು ಎಂಬ ಉರಿಯೂತದ ಅಣುಗಳನ್ನು ನಿಗ್ರಹಿಸುವ ಸಾಮರ್ಥ್ಯ ಮತ್ತು ನೋವು ಮತ್ತು ಉರಿಯೂತವನ್ನು ಉಂಟುಮಾಡುವ ಪ್ರೊಸ್ಟಗ್ಲಾಂಡಿನ್‌ಗಳನ್ನು ಸಂಶ್ಲೇಷಿಸುವ ಸಾಮರ್ಥ್ಯವಿದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಡಯಾಲಿಲ್ ಡೈಸಲ್ಫೈಡ್ ಅನ್ನು ಹೊಂದಿರುತ್ತದೆ. ಇದು ಉರಿಯೂತದ ವಿರೋಧಿ ಸಂಯುಕ್ತವಾಗಿದ್ದು, ಉರಿಯೂತದ ಸೈಟೊಕಿನ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ