AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಚರ್ಮಕ್ಕೆ ವ್ಯಾಸಲಿನ್ ಹಚ್ಚುವುದು ಒಳ್ಳೆಯದಾ? ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?

Skin Care Tips: ಪೆಟ್ರೋಲಿಯಂ ಜೆಲ್ಲಿಯು ನಿಮ್ಮ ಚರ್ಮಕ್ಕೆ ಬಹಳ ಪ್ರಯೋಜನವನ್ನು ನೀಡುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸುವುದು? ಮತ್ತು ವ್ಯಾಸಲಿನ್​ನ ಅಡ್ಡ ಪರಿಣಾಮಗಳೇನು? ಅದನ್ನು ತಡೆಗಟ್ಟಲು ನೀವು ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಚರ್ಮಕ್ಕೆ ವ್ಯಾಸಲಿನ್ ಹಚ್ಚುವುದು ಒಳ್ಳೆಯದಾ? ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?
Follow us
ಸುಷ್ಮಾ ಚಕ್ರೆ
|

Updated on: Oct 11, 2023 | 7:36 PM

ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ಪ್ರಪಂಚದಾದ್ಯಂತ ಪ್ರತಿಯೊಂದು ಮನೆಯಲ್ಲೂ ತ್ವಚೆಗೆ ಬಳಸುವ ಒಂದು ಉತ್ಪನ್ನವಾಗಿದೆ. ಒಣಗಿದ ಚರ್ಮದ ಸಮಸ್ಯೆಗಳಿಂದ ಗಾಯದ ಗುಣಪಡಿಸುವಿಕೆಯವರೆಗೆ ಈ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಲಾಗುತ್ತದೆ. ಹಲವು ಸಮಯದಿಂದಲೂ ಪೆಟ್ರೋಲಿಯಂ ಜೆಲ್ಲಿಯನ್ನು ಚರ್ಮದ ಆರೋಗ್ಯಕ್ಕೆ ಬಳಸಲಾಗುತ್ತಿದೆ. ಆದರೆ, ಈ ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ನಿಮ್ಮ ಚರ್ಮಕ್ಕೆ ಒಳ್ಳೆಯದಾ?

ಪೆಟ್ರೋಲಿಯಂ ಜೆಲ್ಲಿಯು ನಿಮ್ಮ ಚರ್ಮಕ್ಕೆ ಬಹಳ ಪ್ರಯೋಜನವನ್ನು ನೀಡುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸುವುದು? ಮತ್ತು ವ್ಯಾಸಲಿನ್​ನ ಅಡ್ಡ ಪರಿಣಾಮಗಳೇನು? ಅದನ್ನು ತಡೆಗಟ್ಟಲು ನೀವು ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Beauty Tips: ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುವ 5 ಜ್ಯೂಸ್​ಗಳು ಇಲ್ಲಿವೆ

ಪೆಟ್ರೋಲಿಯಂ ಜೆಲ್ಲಿ ಎಂದರೇನು?:

ಪೆಟ್ರೋಲಿಯಂ ಜೆಲ್ಲಿಯನ್ನು ಮೇಣಗಳು ಮತ್ತು ಖನಿಜ ತೈಲಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಹೈಡ್ರೋಕಾರ್ಬನ್, ಬಿಳಿ ಪೆಟ್ರೋಲಾಟಮ್ ಅಥವಾ ಮೃದುವಾದ ಪ್ಯಾರಾಫಿನ್ ಎಂದೂ ಕರೆಯಲ್ಪಡುವ ಪೆಟ್ರೋಲಿಯಂ ಜೆಲ್ಲಿ ಅರೆ-ಘನ ಜೆಲ್ಲಿ ತರಹದ ವಸ್ತುವಾಗಿದೆ. ಇದು ಚರ್ಮವನ್ನು ನಯಗೊಳಿಸುತ್ತದೆ.

ಚರ್ಮವನ್ನು ಮೃದುಗೊಳಿಸುವುದರಿಂದ ಪೆಟ್ರೋಲಿಯಂ ಜೆಲ್ಲಿಯನ್ನು ವಿವಿಧ ಚರ್ಮದ ಲೋಷನ್‌ಗಳು, ಕ್ರೀಮ್‌ಗಳು ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದರಿಂದ ಏನು ಪ್ರಯೋಜನಗಳಿವೆ?

1. ಒಣ ಚರ್ಮಕ್ಕೆ ಅತ್ಯುತ್ತಮ ಆಯ್ಕೆ:

ಪೆಟ್ರೋಲಿಯಂ ಜೆಲ್ಲಿಯನ್ನು ಚರ್ಮಕ್ಕೆ ಹಚ್ಚುವುದರಿಂದ ತೇವಾಂಶವನ್ನು ಕಾಪಾಡುತ್ತದೆ.

2. ಗಾಯಗಳನ್ನು ಗುಣಪಡಿಸುತ್ತದೆ:

ಪೆಟ್ರೋಲಿಯಂ ಜೆಲ್ಲಿ ಸಣ್ಣ ಗಾಯ, ಗೀರುಗಳಿಂದ ಉಂಟಾಗುವ ಚರ್ಮದ ಗಾಯಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಗಾಯಗೊಂಡ ಚರ್ಮವನ್ನು ತೇವವಾಗಿಡಲು ಇದು ಸಹಾಯ ಮಾಡುತ್ತದೆ. ಇದು ತುರಿಕೆ ಮತ್ತು ಕಲೆಗಳನ್ನು ತಡೆಯುತ್ತದೆ.

3. ಡೈಪರ್ ರ್ಯಾಶ್​ ನಿಯಂತ್ರಣಕ್ಕೆ ಸಹಕಾರಿ:

ಮಕ್ಕಳಲ್ಲಿ ಡೈಪರ್ ರ್ಯಾಶ್ ಸಾಮಾನ್ಯ. ಮಗುವಿನ ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದರಿಂದ 4-5 ದಿನಗಳಲ್ಲಿ ರ್ಯಾಶಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಉಗುರುಗಳ ಆರೋಗ್ಯ ಕಾಪಾಡುತ್ತದೆ:

ಪೆಟ್ರೋಲಿಯಂ ಜೆಲ್ಲಿಯನ್ನು ಉಗುರುಗಳಿಗೆ ನಿಯಮಿತವಾಗಿ ಹಚ್ಚುವುದರಿಂದ ಬೆರಳಿನ ಉಗುರುಗಳ ಸೂಕ್ಷ್ಮತೆ ಮತ್ತು ಚಿಪ್ಪಿಂಗ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಉಗುರುಗಳು ತೇವವಾಗಿರುವಾಗ ನೀವು ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಬೇಕು.

ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?:

ಪೆಟ್ರೋಲಿಯಂ ಜೆಲ್ಲಿಯನ್ನು ಬಳಸುವುದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಆಗಬಹುದು.

– ಕೆಲವು ಜನರು ವಿಶೇಷವಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವವರು ಪೆಟ್ರೋಲಿಯಂ ಜೆಲ್ಲಿಯ ಅತಿಯಾದ ಅಪ್ಲಿಕೇಶನ್‌ನಿಂದ ಚರ್ಮದ ರಂಧ್ರಗಳು ಮುಚ್ಚಿಹೋಗಿ, ಮೊಡವೆಗಳು ಉಂಟಾಗಬಹುದು. ಹೀಗಾಗಿ, ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವ ಮೊದಲು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.

ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

– ಕೆಲವು ಜನರಿಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಅಲರ್ಜಿ ಉಂಟಾಗುತ್ತದೆ.

– ಮಕ್ಕಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಮೂಗಿನ ಪ್ರದೇಶದ ಸುತ್ತಲೂ ಹಚ್ಚಿದಾಗ ನ್ಯುಮೋನಿಯಾ ಉಂಟಾಗಬಹುದು.

– ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವ ಮೊದಲು ನೀವು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸದಿದ್ದರೆ ಅಥವಾ ಸರಿಯಾಗಿ ಒಣಗಲು ಬಿಡದಿದ್ದರೆ ಅದು ಕೆಲವು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​