ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

ಸ್ನಾನ ಮಾಡಿದ ನಂತರ ತಕ್ಷಣವೇ ನಿಮ್ಮ ಮೈಯನ್ನು ಟವೆಲ್​ನಿಂದ ಒರೆಸಿಕೊಳ್ಳುವುದರಿಂದ ಬೆವರುವಿಕೆಯನ್ನು ತಪ್ಪಿಸಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ಹಾಗಾದರೆ, ಸ್ನಾನವಾದ ತಕ್ಷಣ ಬೆವರುವುದನ್ನು ತಡೆಯಲು ಏನು ಮಾಡಬೇಕು?

ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?
ಸ್ನಾನImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 11, 2023 | 7:12 PM

ಆರಾಮಾಗಿ ಸ್ನಾನ ಮಾಡಿಕೊಂಡು, ರಿಫ್ರೆಶ್ ಆಗಬೇಕೆಂದು ಬಾತ್​ರೂಮಿಗೆ ಹೋಗಿ ಮನಸಿಗೆ ನೆಮ್ಮದಿಯಾಗುವಷ್ಟು ಹೊತ್ತು ಸ್ನಾನ ಮಾಡಿಕೊಂಡು ಬರುತ್ತೀರಿ. ಆದರೆ, ಅಷ್ಟರಲ್ಲಾಗಲೆ ನಿಮ್ಮ ಮೈ ಬೆವರಲು ಶುರುವಾಗುತ್ತದೆ. ಸ್ನಾನ ಮಾಡಿದ ಕೆಲವೇ ಹೊತ್ತಿನಲ್ಲಿ ಮತ್ತೆ ದೇಹದಿಂದ ಬೆವರಿನ ವಾಸನೆ ಬರಲಾರಂಭಿಸಿ, ನಿಮಗೇ ಕಿರಿಕಿರಿಯಾಗತೊಡಗುತ್ತದೆ. ಈ ರೀತಿಯಾದಾಗ ಏನು ಮಾಡಬೇಕು? ಸ್ನಾನ ಮಾಡಿದ ಕೂಡಲೆ ಮೈ ಬೆವರಲು ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ನೀವು ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನಿಂದ ಬೆಚ್ಚಗಿನ ಆವಿಗಳು ಬಾತ್​ರೂಮಿನಲ್ಲಿ ತಾಪಮಾನ ಮತ್ತು ತೇವಾಂಶದ ಏರಿಕೆಗೆ ಕಾರಣವಾಗುತ್ತವೆ. ಇದು ನಿಮ್ಮ ದೇಹದ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮೈ ಬೆವರತೊಡಗುತ್ತದೆ.

ಇದನ್ನೂ ಓದಿ: Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ

ಸ್ನಾನ ಮಾಡಿದ ನಂತರ ತಕ್ಷಣವೇ ನಿಮ್ಮ ಮೈಯನ್ನು ಟವೆಲ್​ನಿಂದ ಒರೆಸಿಕೊಳ್ಳುವುದರಿಂದ ಬೆವರುವಿಕೆಯನ್ನು ತಪ್ಪಿಸಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ನಿಮ್ಮ ಚರ್ಮದ ಮೇಲೆ ಟವೆಲ್​ ಅನ್ನು ಉಜ್ಜಿದಾಗ ಉಂಟಾಗುವ ಘರ್ಷಣೆಯ ಶಾಖವು ನಿಮಗೆ ಇನ್ನಷ್ಟು ಬಿಸಿ ಉಂಟುಮಾಡಬಹುದು. ಇದು ಹೆಚ್ಚು ಬೆವರುವಿಕೆಯನ್ನು ಉಂಟುಮಾಡುತ್ತದೆ.

ಸ್ನಾನದ ನಂತರ ಬೆವರುವುದನ್ನು ತಡೆಯಲು ಏನು ಮಾಡಬೇಕು?:

ಸ್ನಾನದ ನಂತರ ಬೆವರುವಿಕೆಯನ್ನು ತಡೆಯಲು ನೀವು ಮೊದಲು ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡಿದರೂ ಕೊನೆಯಲ್ಲಿ ಸ್ವಲ್ಪ ತಣ್ಣಗಿನ ನೀರನ್ನು ಬಿಡಬೇಕು. ಇದರಿಂದ ಬಾತ್​ರೂಂನ ತಾಪಮಾನಕ್ಕೆ ನಿಮ್ಮ ದೇಹ ಹೊಂದಿಕೊಳ್ಳುತ್ತದೆ. ಬಾತ್​ರೂಂನಲ್ಲಿ ತುಂಬಿದ್ದ ಬಿಸಿ ತಾಪಮಾನ ಕೂಡ ಕಡಿಮೆಯಾಗುತ್ತದೆ. ಹಾಗೇ, ತಲೆಸ್ನಾನ ಮಾಡುವಾಗ ಕೊನೆಯಲ್ಲಿ ನಿಮ್ಮ ನೆತ್ತಿಯ ಮೇಲೆ ಸ್ವಲ್ಪ ತಣ್ಣೀರನ್ನು ಹಾಕಿಕೊಳ್ಳಿ. ಇದು ನಿಮ್ಮ ದೇಹವನ್ನು ಬೆವರು ಮಾಡುವುದನ್ನು ತಡೆಯುವುದು ಮಾತ್ರವಲ್ಲದೆ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಹಾಗೇ, ನಿಮ್ಮ ಬಾತ್​ರೂಂನಲ್ಲಿ ಎಕ್ಸಾಸ್ಟರ್ ಫ್ಯಾನ್ ಹಾಕಲು ಮರೆಯಬೇಡಿ. ಇದರಿಂದ ಬಾತ್​ರೂಂನೊಳಗಿನ ಬಿಸಿ ಗಾಳಿ ಹೊರಗೆ ಹೋಗಿ, ಮೈ ಬೆವರುವಿಕೆ ಕೂಡ ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ