AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಒಂದು ಕಪ್ ಹೆಚ್ಚುವರಿ ಕಾಫಿ ಕುಡಿದರೆ.. ತೂಕ ಕಡಿಮೆಯಾಗುತ್ತದೆ: ಅದಕ್ಕೇ ಡೋಂಟ್​ ಮಿಸ್​ ಇಟ್!

Coffee Weight Loss: ಕಾಫಿ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಆಗ ನಾವು ಇತರ ಆಹಾರಗಳನ್ನು ಕಡಿಮೆ ತಿನ್ನುತ್ತೇವೆ. ಇದರೊಂದಿಗೆ ತೂಕ ಇಳಿಸಿಕೊಳ್ಳಲು ಅವಕಾಶವಿದೆ. ಅದರ ಹೊರತಾಗಿ ಕಾಫಿ ಕುಡಿಯುವುದರಿಂದ ಹೃದಯ ಸಮಸ್ಯೆ ಮತ್ತು ಬಿಪಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಪ್ರತಿದಿನ ಒಂದು ಕಪ್ ಹೆಚ್ಚುವರಿ ಕಾಫಿ ಕುಡಿದರೆ.. ತೂಕ ಕಡಿಮೆಯಾಗುತ್ತದೆ: ಅದಕ್ಕೇ ಡೋಂಟ್​ ಮಿಸ್​ ಇಟ್!
ಪ್ರತಿದಿನ ಒಂದು ಕಪ್ ಹೆಚ್ಚುವರಿ ಕಾಫಿ ಕುಡಿದರೆ..
ಸಾಧು ಶ್ರೀನಾಥ್​
|

Updated on: Oct 12, 2023 | 6:06 AM

Share

ಮೊದಲೇ ಹೇಳಿಬಿಡುವುದಾದರೆ ಕಾಫಿ ಸೇವನೆಯಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದೂ ಅದರಿಂದ ಡಯಾಬಿಟಿಸ್​ ಮುಂತಾದ ರೋಗಗಳು ಅಮರಿಕೊಳ್ಳುತ್ತವೆ ಎಂದೂ ಜನ ಸಾಮಾನ್ಯವಾಗಿ ಹೇಳುವುದುಂಟು. ಆದರೂ ಗಮನಿಸಿ, ಕೆಲವರು ಕಾಫಿ ಇಲ್ಲದೆ ದಿನವನ್ನು ಆರಂಭಿಸುವುದೇ ಇಲ್ಲ. ಬೆಳಿಗ್ಗೆ ಒಂದು ಕಪ್.. ಸಂಜೆ ಒಂದು ಕಪ್ ಮಧ್ಯೆ ಮಧ್ಯೆ ಮನಸ್ಸು ಮತ್ತು ಮೂಡ್ ಬೇಕು ಅಂದಾಗಲೆಲ್ಲಾ ಒಂದೊಂದು ಕಾಫಿ ಕುಡಿಯುತ್ತಲೇ ಇರಬೇಕು. ಒಂದು ಕಪ್ ಕಾಫಿ ಕುಡಿಯುವುದರಿಂದ ಮೂಡ್ ಬದಲಾಗುವುದಲ್ಲದೆ, ದೇಹ ಮತ್ತು ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಒತ್ತಡದಿಂದಲೂ ದೂರವಿರುತ್ತೇವೆ. ಮೆದುಳು ಕ್ರಿಯಾಶೀಲವಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಕಾಫಿಯನ್ನು ಇಷ್ಟಪಡುತ್ತಾರೆ (Benefits of Coffee). ಉತ್ತಮ ಮನಸ್ಥಿತಿಯನ್ನು ಹೆಚ್ಚಿಸುವ ಪಾನೀಯವೆಂದರೆ ಕಾಫಿ.

ಭಾರತದಲ್ಲಿ ಅಸಂಖ್ಯಾತ ಮಂದಿ ಕಾಫಿ ಕುಡಿಯುವವರಿದ್ದಾರೆ. ಆದರೆ ಯಾವುದಾದರೂ ಮಿತವಾಗಿದ್ದರೆ ಅದು ಅಮೃತಕ್ಕೆ ಸಮಾನವಾಗಿರುತ್ತದೆ. ಇಲ್ಲದಿದ್ದರೆ ಅದು ವಿಷವಾಗಿ ಮಾರ್ಪಟ್ಟು ನಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಹಾಗಾಗಿ ದಿನಕ್ಕೆರಡು ಬಾರಿ ಕಾಫಿ ಕುಡಿಯುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಕೂಡ ತಮ್ಮ ಸಂಶೋದನೆಗಳ ಮೂಲಕ ಬಹಿರಂಗಪಡಿಸಿದ್ದಾರೆ. ಅತಿಯಾಗಿ ಕಾಫಿ ಕುಡಿದರೆ ನಿದ್ರಾ ಹೀನತೆಯ ಸಮಸ್ಯೆ ಮಾತ್ರವಲ್ಲ ಆತಂಕವೂ ಕಾಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು, ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರತಿದಿನ ಒಂದು ಕಪ್ ಹೆಚ್ಚುವರಿ ಕಾಫಿ (Coffee) ಕುಡಿಯುವುದು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದಂತೆ. ಈಗ ಇದರ ಬಗ್ಗೆ ತಿಳಿದುಕೊಳ್ಳೋಣ (Health).

ನಾಲ್ಕು ವರ್ಷಗಳಲ್ಲಿ 12 ಕೆಜಿ ತೂಕ ನಷ್ಟ:

ಅಕ್ಟೋಬರ್ 1 ರಂದು ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದಂತೆ. ಆದಾಗ್ಯೂ, ಕಾಫಿಗೆ ಹೆಚ್ಚು ಸಕ್ಕರೆ ಸೇರಿಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ, ಆದರೆ ಕ್ರೀಮ್ ಅಥವಾ ಡೈರಿ ಅಲ್ಲದ ಕಾಫಿ ವೈಟ್ನರ್ ಅನ್ನು ಸೇರಿಸುವುದರಿಂದ ದೇಹ ತೂಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ.

ಇದನ್ನೂ ಓದಿ: Home Remedies: ಗಂಟಲು ಕೆರೆತ, ಗಂಟಲು ಕಿರಿಕಿರಿ, ಗಂಟಲು ನೋವು ಕಡಿಮೆ ಮಾಡಲು ಈ ಮನೆಮದ್ದು ಟ್ರೈ ಮಾಡಿ

ಕಾಫಿಯಲ್ಲಿ ಸಕ್ಕರೆ ಇಲ್ಲದ, ಕಡಿಮೆ ಸಕ್ಕರೆಯ, ಸಕ್ಕರೆ ಇರುವ ಮತ್ತು ಕ್ರೀಮ್ ಸೇವಿಸುವವರಲ್ಲಿ ಸಂಶೋಧನೆ ನಡೆಸಿದಾಗ, ನಾಲ್ಕು ವರ್ಷಗಳಲ್ಲಿ 12 ಕೆಜಿಯಷ್ಟು ತೂಕ ಕಡಿಮೆಯಾಗುವ ಸಾಧ್ಯತೆಯಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಒಂದು ಚಮಚ ಮಾತ್ರವೇ ಸಕ್ಕರೆ ಸೇವಿಸಿದವರು ನಾಲ್ಕು ವರ್ಷಗಳಲ್ಲಿ 9 ಕೆ.ಜಿ ತೂಕ ಇಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಡಿಮೆ ಸಕ್ಕರೆಯ ಕ್ರೀಮ್ಗಳನ್ನು ಬಳಸಿ:

ಬಿಸಿಯಾದ, ಕಡಿಮೆ ಕ್ಯಾಲೋರಿ ಇರುವ ಪಾನೀಯಗಳನ್ನು ಸೇವಿಸುವುದರಿಂದ ದೇಹದ ತೂಕವನ್ನು ಸುಧಾರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅದೇ ಕಾಫಿಗೆ ಸಕ್ಕರೆ ಹಾಕಿದರೆ.. ತೂಕ ಕಡಿಮೆಯಾಗುವುದಿಲ್ಲ.. ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಸಕ್ಕರೆಯ ಹೆಚ್ಚಿನ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ವೈಟ್ ನರ್​​ಗಳಂತಹ ಕಡಿಮೆ ಸಕ್ಕರೆಯ ಕ್ರೀಮ್‌ಗಳನ್ನು ಸೇರಿಸುವುದರಿಂದ ಉತ್ತಮ ಪ್ರಯೋಜನಗಳಿವೆ ಎಂದು ಅಧ್ಯಯನ ಹೇಳಿದೆ.

ಇದನ್ನು ನಿಯಮಿತವಾಗಿ ಕುಡಿಯುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ:

ಅದೂ ಅಲ್ಲದೆ ತೂಕ ಇಳಿಸಿಕೊಳ್ಳಲು ಬಯಸುವವರು ನಿತ್ಯವೂ ಕಾಫಿ ಕುಡಿದರೆ ಅತಿ ತೂಕ ಸಮಸ್ಯೆಯಿಂದ ಪಾರಾಗಬಹುದು. ಏಕೆಂದರೆ ಕಾಫಿ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರೊಂದಿಗೆ ನಾವು ಇತರ ಆಹಾರಗಳನ್ನು ಕಡಿಮೆ ತಿನ್ನುತ್ತೇವೆ. ಇದರೊಂದಿಗೆ ತೂಕ ಇಳಿಸಿಕೊಳ್ಳಲು ಅವಕಾಶವಿದೆ. ಅದರ ಹೊರತಾಗಿ ಕಾಫಿ ಕುಡಿಯುವುದರಿಂದ ಹೃದಯ ಸಮಸ್ಯೆ ಮತ್ತು ಬಿಪಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಆರೋಗ್ಯಕ್ಕೆ ಒಳ್ಳೆಯದು, ಆದರೆ ನೀವು ಹೆಚ್ಚು ತೆಗೆದುಕೊಂಡರೆ ನಿಮಗೆ ಸಮಸ್ಯೆಗಳು ಬರುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

(ಗಮನಿಸಿ: ಈ ಮಾಹಿತಿಯನ್ನು ತಜ್ಞರಿಂದ ಸಂಗ್ರಹಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ)

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ