ರಕ್ತದಾನ ಮಾಡಿ ಉತ್ತಮ ಆರೋಗ್ಯ ಪಡೆಯಿರಿ; ಬ್ಲಡ್ ಡೊನೇಟ್ ಮಾಡದ ಪುರುಷರಲ್ಲಿ ಈ ರೋಗ ಹೆಚ್ಚಳ

Polycythemia: ರಕ್ತದಾನ ಮಹಾದಾನ ಎನ್ನಲಾಗುತ್ತದೆ ಒಬ್ಬರ ಜೀವ ಉಳಿಸುವ ರಕ್ತಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತುವಿಲ್ಲ. ಆದರೆ ಈಗ ರಕ್ತದಾನ ಉತ್ತಮ ಬೆಳವಣಿಗೆಯ ಜೊತೆಗೆ ರಕ್ತದಾನ ಮಾಡದೇ ಇರುವುದೇ ಪುರಷರ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಅಂಶ ಬಯಲಾಗಿದೆ.

ರಕ್ತದಾನ ಮಾಡಿ ಉತ್ತಮ ಆರೋಗ್ಯ ಪಡೆಯಿರಿ; ಬ್ಲಡ್ ಡೊನೇಟ್ ಮಾಡದ ಪುರುಷರಲ್ಲಿ ಈ ರೋಗ ಹೆಚ್ಚಳ
ರಕ್ತದಾನ
Follow us
Vinay Kashappanavar
| Updated By: ಆಯೇಷಾ ಬಾನು

Updated on:Oct 12, 2023 | 10:13 AM

ಬೆಂಗಳೂರು, ಅ.12: ಪುರುಷರೇ ಬಿ ಅಲರ್ಟ್. ನೀವೇನಾದ್ರೂ ಬ್ಲಡ್ ಡೊನೇಟ್ (Blood Donate) ಮಾಡ್ತಿಲ್ವ? ಅಂದ್ರೆ ನಿಮಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಹುಷಾರ್. ಕೊವಿಡ್ ಬಳಿಕ ಪುರಷರಲ್ಲಿ ಅದರಲ್ಲೂ ಬ್ಲಡ್ ಡೊನೇಟ್ ಮಾಡದ ಪರುಷರಲ್ಲಿ ಪಾಲಿಸೈಥೇಮಿಯಾ (Polycythemia) ಅನ್ನುವಂತಹ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮಹಿಳೆಯರಿಗೆ ಪ್ರತಿ ತಿಂಗಳು ಖುತುಚಕ್ರದ ಮೂಲಕ ಮೂರು ದಿನ ಸಹಜವಾಗಿ ರಕ್ತ ಹೋಗುತ್ತೆ. ಆದರೆ ಪುರಷರಲ್ಲಿ ಆ ಪ್ರಕ್ರಿಯೆ ಇಲ್ಲ. ಹೀಗಾಗಿ ದೇಹದಲ್ಲಿ ಹಿಮೋಗ್ಲೋಬಿನ್ (Hemoglobin) ಪ್ರಮಾಣ ಹೆಚ್ಚಾಗಿ ಹೊಸ ರೋಗಗಳು ಶುರುವಾಗಿದೆ.

ಸಾಮಾನ್ಯವಾಗಿ ಮಹಿಳೆಯರಿಗೆ ತಿಂಗಳಲ್ಲಿ ಖುತುಚಕ್ರದ ಮೂಲಕ ರಕ್ತ ಹೋಗುವುದು ಶುದ್ಧಿಯಾಗುವುದು ಪ್ರಕ್ರಿಯೇ ನಿರಂತರವಾಗಿ ಇರುತ್ತದೆ. ಆದರೆ ಈಗ ಯಾವ ಪುರಷರು ಬ್ಲಡ್ ನೀಡುವುದಿಲ್ಲವೋ ಅಂದ್ರೆ ಕನಿಷ್ಠ ಒಂದು ವರ್ಷದಲ್ಲಿ ಒಮ್ಮೆಯಾದ್ರೂ ನೀವೇನಾದ್ರೂ ಬ್ಲಡ್ ಡೊನೇಟ್ ಮಾಡಿಲ್ಲ ಅಂದ್ರೆ ರಕ್ತ ಕಣಗಳು ಹೆಚ್ಚಾದ್ರೆ ಪಾಲಿಸೈಥೇಮಿಯಾ ಅನ್ನೋ ಸಮಸ್ಯೆ ಎದುರಾಗಲಿದೆ. ಇತ್ತೀಚೆಗೆ ರಕ್ತದಾನ ಮಾಡದ ಪುರುಷರಲ್ಲಿ ಪಾಲಿಸೈಥೇಮಿಯಾ ಎಂಬ ರೋಗ ಅಂಶ ಕಂಡು ಬಂದಿದೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿ ಪಾಲಿಸೈಥೇಮಿಯಾ ಎಂಬ ಡಿಸೀಜ್ ಗೆ ಪುರುಷರು ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ: World Blood Donor Day: ರಕ್ತದಾನ ಮಾಡುವ ಮೊದಲು ಮತ್ತು ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಲಹೆಗಳು

ಸದ್ಯ ಈ ಡಿಸೀಜ್ ಕೊವಿಡ್ ಬಳಿಕ ಕೊಂಚ ಹೆಚ್ಚಾಗಿದ್ದು ಪುರುಷರು ಬ್ಲಡ್ ಡೊನೇಟ್ ಬದಲು ಬ್ಲಡ್ ದೇಹದಿಂದ ಹೊರ ಹಾಕಿಸೋದಕ್ಕೆ ಬರ್ತಿದ್ದಾರಂತೆ. ಹಿಮೋಗ್ಲೋಬಿನ್ ಪ್ರಮಾಣ ಸಹಜತೆಗಿಂತ ಹೆಚ್ಚಾಗಿ ಪಾಲಿಸೈಥೇಮಿಯಾ ಎಂಬ ಡಿಸೀಜ್ ಗೆ ಪುರುಷರು ಕಾರಣವಾಗ್ತಿದ್ದು ಇದರಿಂದ ಅನಾರೋಗ್ಯ, ತೀವ್ರ ಸುಸ್ತು, ಮೂರ್ಚೆ ರೋಗ, ಕೆಲವು ಸಮಯದಲ್ಲಿ ಸ್ಟೋಕ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರು ರಕ್ತದಾನ ಇದಕ್ಕೆಲ್ಲ ಉತ್ತಮ ಪರಿಹಾರ ಎಂದು ತಿಳಿಸಿದ್ದಾರೆ.

ಒಟ್ನಲ್ಲಿ ರಕ್ತದಾನದ ಪ್ರಕ್ರಿಯೆಯಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಇದು ಹಳೆಯ ರಕ್ತವನ್ನು ಫಿಲ್ಟರ್​ ಮಾಡುವುದಕ್ಕಿಂತ ಉತ್ತಮವಾಗಿರುತ್ತದೆ. ಹಾಗಾಗಿ ರಕ್ತದಾನ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ಪಡೆಯಬಹುದಾಗಿದ್ದು ಒಂದು ಜೀವ ಉಳಿವಿಗೂ ಕಾರಣವಾಗಬಹುದಾಗಿದೆ. ಹೀಗಾಗಿ ವರ್ಷದಲ್ಲಿ ಎರಡು ಬಾರಿಯಾದ್ರೂ ರಕ್ತದಾನ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:12 am, Thu, 12 October 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ